ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ, ಕಾರು ಖರೀದಿ ಇನ್ನು ಅಗ್ಗ: ಬಡ್ಡಿ ದರ ಕಡಿತಗೊಳಿಸಿದ ದೇಶದ 2ನೇ ದೊಡ್ಡ ಬ್ಯಾಂಕ್

|
Google Oneindia Kannada News

ಮುಂಬೈ, ಜೂನ್ 2: ಲಾಕ್‌ಡೌನ್ 5.0 ಆರಂಭವಾಗುತ್ತಿದ್ದಂತೆ ಅನೇಕ ವಿನಾಯಿತಿಗಳು ಸಿಗುತ್ತಿವೆ. ಇದರ ಜೊತೆಗೆ ಇತ್ತೀಚೆಗಷ್ಟೇ ಎರಡು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳು ಇತ್ತೀಚೆಗೆ ಬಡ್ಡಿದರಗಳನ್ನು ಕಡಿತಗೊಳಿಸಿದ ನಂತರ, ಈಗ ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಬಡ್ಡಿ ದರಗಳನ್ನು ಕಡಿತಗೊಳಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಡ್ಡಿ ದರ ಕಡಿತದಿಂದಾಗಿ ಗ್ರಾಹಕರಿಗೆ ಗೃಹ ಸಾಲ ಮತ್ತು ವಾಹನ ಸಾಲವನ್ನು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಒದಗಿಸುತ್ತದೆ.

ಪರಿಷ್ಕೃತ PM ವಯ ವಂದನ ಯೋಜನೆ ಹೊರ ತಂದ LICಪರಿಷ್ಕೃತ PM ವಯ ವಂದನ ಯೋಜನೆ ಹೊರ ತಂದ LIC

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಪಿಎನ್‌ಬಿ ಜೂನ್ 1ರಂದು ಸಾಲಗಳ ಮೇಲಿನ ರೆಪೊ ದರದಲ್ಲಿ 0.40 ಪರ್ಸೆಂಟ್‌ರಷ್ಟು ರಿಯಾಯಿತಿ ಪ್ರಕಟಿಸಿದೆ. ಈಗ ಈ ಬಡ್ಡಿದರವನ್ನು 7.05 ಪರ್ಸೆಂಟ್‌ನಿಂದ 6.65 ಪರ್ಸೆಂಟ್‌ಗೆ ಇಳಿಸಲಾಗುವುದು.

PNB Cuts Interest Rates Buying Houses And Cars Has Become Cheap

ಮನೆ ಅಥವಾ ಕಾರು ಖರೀದಿಸಲು ಯೋಜಿಸುವ ಜನರಿಗೆ ಈ ದರ ತುಂಬಾ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗ ಗ್ರಾಹಕರು ಸಾಲದ ಮೇಲಿನ ಕಡಿಮೆ ಬಡ್ಡಿದರದ ನೇರ ಲಾಭವನ್ನು ಪಡೆಯಲಿದ್ದಾರೆ. ಇದಲ್ಲದೆ ಎಲ್ಲಾ ಮೆಚ್ಯೂರಿಟಿ ಸಾಲಗಳಿಗೆ ಕನಿಷ್ಠ ವೆಚ್ಚ ಆಧಾರಿತ ಬಡ್ಡಿದರವನ್ನು (ಎಂಸಿಎಲ್ಆರ್) 0.15 ಪರ್ಸೆಂಟ್‌ರಷ್ಟು ಕಡಿಮೆ ಮಾಡಲಾಗಿದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ಉಳಿತಾಯ ಖಾತೆಗಳ ಬಡ್ಡಿದರವನ್ನು 0.50 ಪರ್ಸೆಂಟ್ ಕಡಿತಗೊಳಿಸಿದ್ದು ಗರಿಷ್ಟ 3.25 ಪರ್ಸೆಂಟ್ ಬಡ್ಡಿ ನೀಡಲಿದೆ. ಪರಿಷ್ಕೃತ ದರಗಳು ಜುಲೈ 1ರಿಂದ ಜಾರಿಗೆ ಬರಲಿವೆ ಎಂದು ಬ್ಯಾಂಕ್ ತಿಳಿಸಿದೆ.

English summary
Punjab national bank(Pnb) said it has reduced its repo-linked lending rate (RLLR) by 40 basis points (bps) to 6.65 percent from 7.05 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X