ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫ್ತು ಉತ್ತೇಜನಕ್ಕಾಗಿ 6 ಸಾವಿರ ಕೋಟಿ ಯೋಜನೆಗೆ ಚಾಲನೆ

|
Google Oneindia Kannada News

ನವದೆಹಲಿ, ಜೂನ್ 30: ವಿಜ್ಞಾನ ಭವನದಲ್ಲಿ ಇಂದು ನಡೆದ 'ಉದ್ಯಮಿ ಭಾರತ್' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡು, 6,000 ಕೋಟಿ ರು ಯೋಜನೆಗೆ ಚಾಲನೆ ನೀಡಿದರು. ಪ್ರಧಾನಮಂತ್ರಿಯವರು 'ಎಂಎಸ್ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಳ ಮತ್ತು ವೇಗವರ್ಧನೆ' (RAMP) ಯೋಜನೆ, 'ಮೊದಲ ಬಾರಿಯ ಎಂಎಸ್ಎಂಇ ರಫ್ತುದಾರರ ಸಾಮರ್ಥ್ಯ ವರ್ಧನೆ' (ಸಿಬಿಎಫ್.ಟಿಇ) ಯೋಜನೆ ಮತ್ತು 'ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ'ದ (ಪಿಎಂಇಜಿಪಿ) ಹೊಸ ವೈಶಿಷ್ಟ್ಯಗಳಿಗೆ ಚಾಲನೆ ನೀಡಿದರು.

ಸುಮಾರು 6000 ಕೋಟಿ ರೂ.ಗಳ ವೆಚ್ಚದ 'ಎಂಎಸ್ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಳ ಮತ್ತು ವೇಗವರ್ಧನೆ' (RAMP) ಯೋಜನೆ ಅಸ್ತಿತ್ವದಲ್ಲಿರುವ ಎಂಎಸ್ಎಂಇ ಯೋಜನೆಗಳ ಬಲವರ್ಧನೆಯೊಂದಿಗೆ ರಾಜ್ಯಗಳಲ್ಲಿ ಎಂಎಸ್ಎಂಇಗಳ ಅನುಷ್ಠಾನ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಇದು ಜಾಗತಿಕ ಮಾರುಕಟ್ಟೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು ಎಂಎಸ್ಎಂಇಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತೀಯ ಎಂಎಸ್ಎಂಇಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಅವರ ರಫ್ತು ಸಾಮರ್ಥ್ಯವನ್ನು ಅರಿತುಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ.

PM Modi Launches RAMP New ₹ 6,000 Crore Scheme To Encourage Exports

ಮುದ್ರಾ ಯೋಜನೆ, ತುರ್ತು ಸಾಲ ಖಾತ್ರಿ ಯೋಜನೆ, ಸಾಂಪ್ರದಾಯಿಕ ಕೈಗಾರಿಕೆಗಳ ಪುನಶ್ಚೇತನ ನಿಧಿ ಯೋಜನೆ (ಎಸ್ ಎಫ್ ಯುಆರ್.ಟಿಐ) ಇತ್ಯಾದಿಗಳಂತಹ ಹಲವಾರು ಉಪಕ್ರಮಗಳನ್ನು ಸರ್ಕಾರವು ಕಾಲಕಾಲಕ್ಕೆ ಪ್ರಾರಂಭಿಸಿದೆ, ಇದು ಎಂಎಸ್ಎಂಇ ವಲಯಕ್ಕೆ ಅಗತ್ಯ ಮತ್ತು ಸಕಾಲಿಕ ಬೆಂಬಲವನ್ನು ಒದಗಿಸುತ್ತಿದೆ, ಇದು ದೇಶಾದ್ಯಂತ ಕೋಟ್ಯಂತರ ಜನರಿಗೆ ಪ್ರಯೋಜನವನ್ನು ನೀಡಲು ನೆರವಾಗಿದೆ.

ಪ್ರಧಾನಮಂತ್ರಿಯವರು 'ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ'ದ (ಪಿಎಂಇಜಿಪಿ) ಹೊಸ ವೈಶಿಷ್ಟ್ಯಗಳಿಗೂ ಚಾಲನೆ ನೀಡಲಿದ್ದಾರೆ. ಉತ್ಪಾದನಾ ವಲಯಕ್ಕೆ ಗರಿಷ್ಠ ಯೋಜನಾ ವೆಚ್ಚವನ್ನು 50 ಲಕ್ಷ ರೂ.ಗಳಿಗೆ (25 ಲಕ್ಷ ರೂ.ಗಳಿಂದ) ಮತ್ತು ಸೇವಾ ವಲಯದಲ್ಲಿ 20 ಲಕ್ಷ ರೂ.ಗಳಿಗೆ (10 ಲಕ್ಷ ರೂ.ಗಳಿಂದ) ಹೆಚ್ಚಿಸುವುದು ಮತ್ತು ಹೆಚ್ಚಿನ ಸಹಾಯಧನ ಪಡೆಯಲು ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ತೃತೀಯ ಲಿಂಗಿ ಅರ್ಜಿದಾರರನ್ನು ವಿಶೇಷ ವರ್ಗದ ಅರ್ಜಿದಾರರಲ್ಲಿ ಸೇರಿಸುವುದೂ ಇದರಲ್ಲಿ ಸೇರಿದೆ. ಅಲ್ಲದೆ, ಬ್ಯಾಂಕಿಂಗ್, ತಾಂತ್ರಿಕ ಮತ್ತು ಮಾರುಕಟ್ಟೆ ತಜ್ಞರನ್ನು ತೊಡಗಿಸಿಕೊಳ್ಳುವ ಮೂಲಕ ಅರ್ಜಿದಾರರು / ಉದ್ಯಮಿಗಳ ಕೈಹಿಡಿದು ಮಾರ್ಗದರ್ಶಿ ಬೆಂಬಲವನ್ನು ಒದಗಿಸಲಾಗುತ್ತಿದೆ. ಪ್ರಧಾನಮಂತ್ರಿಯವರು 2022ರ ರಾಷ್ಟ್ರೀಯ ಎಂಎಸ್ಎಂಇ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ.

English summary
Prime Minister Narendra Modi on Thursday launched schemes to support the Micro, Small, and Medium Enterprises (MSMEs) sector and to encourage exports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X