ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಷ್‌ನ ಮೊದಲ ಸ್ಮಾರ್ಟ್ ಕ್ಯಾಂಪಸ್ ಲೋಕಾರ್ಪಣೆ ಮಾಡಿದ ಮೋದಿ

|
Google Oneindia Kannada News

ಬೆಂಗಳೂರು, ಜೂನ್ 30: ತಂತ್ರಜ್ಞಾನ ಮತ್ತು ಸೇವೆಗಳ ಪ್ರಮುಖ ಪೂರೈಕೆದಾರ ಕಂಪನಿಯಾಗಿರುವ ಬಾಷ್ ಬೆಂಗಳೂರಿನ ಆಡುಗೋಡಿಯಲ್ಲಿರುವ ತನ್ನ ಕೇಂದ್ರ ಕಚೇರಿಯನ್ನು ಪರಿವರ್ತನೆಗೊಳಿಸುವ ಮೂಲಕ ಭಾರತದಲ್ಲಿ ತನ್ನ AIoT ಚಟುವಟಿಕೆಗಳನ್ನು ವಿಸ್ತರಣೆ ಮಾಡಿದೆ. ಈ ಆಧುನೀಕರಣದ ಮೂಲಕ ಬಾಷ್ ತನ್ನ ಕ್ಯಾಂಪಸ್ ಅನ್ನು Spark.NXT ಹೆಸರಿನಲ್ಲಿ ಸ್ಮಾರ್ಟ್ ಕ್ಯಾಂಪಸ್ ಅನ್ನಾಗಿ ಪರಿವರ್ತಿಸಿದೆ.

Recommended Video

Bommai ಹಾಗು Modiಯವರು Bosch ಬಗ್ಗೆ ಹೇಳಿದ್ದೇನು? | Oneindia Kannada

ಈ ಕ್ಯಾಂಪಸ್ ಅನ್ನು ಅಭಿವೃದ್ಧಿಗೊಳಿಸಲೆಂದು ಬಾಷ್ ಕಳೆದ ಐದು ವರ್ಷಗಳಲ್ಲಿ 800 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಇದರಿಂದಾಗಿ ಸುಮಾರು 76 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಕ್ಯಾಂಪಸ್ ನಲ್ಲಿ ಇದೀಗ 10,000 ಉದ್ಯೋಗಿಗಳು ಕೆಲಸ ಮಾಡಲು ಸಾಧ್ಯವಾಗುತ್ತದೆ. ಸುಸ್ಥಿರತೆ, ಭದ್ರತೆ ಮತ್ತು ಉದ್ಯೋಗಿಗಳಿಗೆ ಬಳಕೆದಾರ ಅನುಭವ, ವೀಕ್ಷಕರು ಮತ್ತು ಮ್ಯಾನೇಜ್ಮೆಂಟ್ ಸೌಲಭ್ಯಗಳು ಸೇರಿದಂತೆ ಬಹು ಸ್ಮಾರ್ಟ್ ಪರಿಹಾರಗಳನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ.

ಈ ಸ್ಮಾರ್ಟ್ ಕ್ಯಾಂಪಸ್ ಅನ್ನು ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು,''ಭಾರತವು ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸುತ್ತಿರುವುದು ಮತ್ತು ಬಾಷ್ ದೇಶದಲ್ಲಿ ನೂರು ವರ್ಷ ಪೂರೈಸಿರುವುದರಿಂದ ಭಾರತ ಮತ್ತು ಬಾಷ್ ಇಂಡಿಯಾಗೆ ಇದು ವಿಶೇಷವಾದ ವರ್ಷವಾಗಿದೆ. 100 ವರ್ಷಗಳ ಹಿಂದೆ ಒಂದು ಜರ್ಮನಿಯ ಕಂಪನಿಯಾಗಿ ಭಾರತಕ್ಕೆ ಬಂದ ಬಾಷ್ ಪ್ರಸ್ತುತ ಜರ್ಮನಿಗಿಂತ ಹೆಚ್ಚಾಗಿ ಭಾರತೀಯ ಕಂಪನಿಯೆಂದೇ ಖ್ಯಾತಿ ಗಳಿಸಿದೆ. ಇದು ಜರ್ಮನ್ ಇಂಜಿನಿಯರಿಂಗ್ ಮತ್ತು ಭಾರತದ ಶಕ್ತಿಗೆ ಒಂದು ಅತ್ಯದ್ಭುತ ಉದಾಹರಣೆಯಾಗಿದೆ'' ಎಂದು ಶ್ಲಾಘಿಸಿದರು.

ಭಾರತ ಮತ್ತು ಜಗತ್ತಿಗಾಗಿ ಭವಿಷ್ಯದ ಉತ್ಪನ್ನಗಳು

ಭಾರತ ಮತ್ತು ಜಗತ್ತಿಗಾಗಿ ಭವಿಷ್ಯದ ಉತ್ಪನ್ನಗಳು

''ಈ ಸ್ಮಾರ್ಟ್ ಕ್ಯಾಂಪಸ್ ಭಾರತ ಮತ್ತು ಜಗತ್ತಿಗಾಗಿ ಭವಿಷ್ಯದ ಉತ್ಪನ್ನಗಳು ಮತ್ತು ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ನೇತೃತ್ವ ವಹಿಸಲಿದೆ. ಈ ದಿಸೆಯಲ್ಲಿ ಸಾಗುತ್ತಾ ಭಾರತದಲ್ಲಿ ಮತ್ತಷ್ಟು ವಿಸ್ತರಣೆ ಮಾಡಲು ಹಾಗೂ ಮುಂದಿನ 25 ವರ್ಷಗಳ ಗುರಿಯನ್ನು ಇಟ್ಟುಕೊಳ್ಳಬೇಕೆಂದು ನಾನು ಬಾಷ್ ಇಂಡಿಯಾವನ್ನು ಒತ್ತಾಯಿಸುತ್ತೇನೆ'' ಎಂದು ತಿಳಿಸಿದರು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಬಾಷ್ ಇಂಡಿಯಾ ಮಾಡಿರುವ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಷ್ ಬಗ್ಗೆ ಹರ್ಷ ವ್ಯಕ್ತಪಡಿಸಿದ ಮೋದಿ

ಬಾಷ್ ಬಗ್ಗೆ ಹರ್ಷ ವ್ಯಕ್ತಪಡಿಸಿದ ಮೋದಿ

''ಬಾಷ್ ಇಂಡಿಯಾದ Spark.NXT ಕ್ಯಾಂಪಸ್ ಉದ್ಘಾಟನೆ ಸಮಾರಂಭದ ಭಾಗವಾಗಿರುವುದಕ್ಕೆ ನನಗೆ ಸಂತಸವಾಗಿದೆ. ಕಂಪನಿಯು ಹಲವಾರು ದಶಕಗಳಿಂದ ರಾಜ್ಯದಲ್ಲಿ ತನ್ನ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಬೆಂಗಳೂರಿನಲ್ಲಿ ತನ್ನ ಭಾರತದ ಅತಿದೊಡ್ಡ ಸ್ಮಾರ್ಟ್ ಕ್ಯಾಂಪಸ್ ಅನ್ನು ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ. ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರ ತಂತ್ರಜ್ಞಾನದ ಹಬ್ ಆಗಿದೆ ಮತ್ತು ಜಗತ್ತಿನಲ್ಲಿರುವ ಅತಿ ಹೆಚ್ಚು ಕಂಪನಿಗಳ ಆರ್ & ಡಿ ಕೇಂದ್ರಗಳನ್ನು ಹೊಂದಿರುವ ಹಿರಿಮೆಯನ್ನು ಸಾಧಿಸಿದೆ. ಇದೀಗ ಬಾಷ್ ಸ್ಮಾರ್ಟ್ ಕ್ಯಾಂಪಸ್ ಈ ಹಿರಿಮೆಗೆ ಮತ್ತೊಂದು ಗರಿಯನ್ನು ತಂದುಕೊಟ್ಟಿದೆ'' ಎಂದು ಹರ್ಷ ವ್ಯಕ್ತಪಡಿಸಿದರು.

''ಈ ಕ್ಯಾಂಪಸ್ ಆಟೋಮೋಟಿವ್ ಮತ್ತು ನಾನ್ ಆಟೋಮೋಟಿವ್ ಉತ್ಪನ್ನಗಳು ಮತ್ತು ಸೇವೆಗಳ ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯಗಳನ್ನು ಹೊಂದಿದೆ. ಈ ಮೂಲಕ ಕ್ಯಾಂಪಸ್ ತಂತ್ರಜ್ಞಾನ ಕ್ಷೇತ್ರದಲ್ಲಿ ನಗರದ ನಾಯಕತ್ವದ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂಬ ವಿಶ್ವಾಸವಿದೆ'' ಎಂದರು.

10,000 ಸಹವರ್ತಿಗಳಿಗೆ ತರಬೇತಿ

10,000 ಸಹವರ್ತಿಗಳಿಗೆ ತರಬೇತಿ

ಒಂದು AIoT ಕಂಪನಿಯಾಗಿ ಬಾಷ್ ಇಂಡಿಯಾ ತನ್ನ ವಿಶ್ವದರ್ಜೆಯ AI, IoT, ಆಟೋಮೇಶನ್ ಮತ್ತು ಡಿಜಿಟಲೀಕರಣದ ಸಾಮರ್ಥ್ಯಗಳನ್ನು ಬಳಸಿಕೊಂಡು ತನ್ನ ಸ್ಮಾರ್ಟ್ ಕ್ಯಾಂಪಸ್ ಅನ್ನು ನಿರ್ಮಾಣ ಮಾಡಿದೆ. ಇದರ ಮೂಲಕ ಸುಸ್ಥಿರತೆ, ಸ್ವಾವಲಂಬಿ ಮತ್ತು ಭವಿಷ್ಯಕ್ಕೆ ಭಾರತವನ್ನು ಸಿದ್ಧಪಡಿಸುವ ದೂರದೃಷ್ಟಿಯನ್ನು ಇಟ್ಟುಕೊಂಡಿದೆ. ತನ್ನ ಆರ್ & ಡಿ ಸಾಮರ್ಥ್ಯಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಬಾಷ್ ಇಂಡಿಯಾ ಕಳೆದ ಎರಡು ವರ್ಷಗಳಲ್ಲಿ ಸಮಗ್ರ ಪುನರ್ ಕೌಶಲ್ಯದಂತಹ ಉಪಕ್ರಮದ ಮೂಲಕ 10,000 ಸಹವರ್ತಿಗಳಿಗೆ ತರಬೇತಿಯನ್ನು ನೀಡಿದೆ.

ರಾಬರ್ಟ್ ಬಾಷ್ GmbH ನ ಇಂಡಸ್ಟ್ರಿಯಲ್ ರಿಲೇಶನ್ಸ್ ನ ಆಡಳಿತ ಮಂಡಳಿ ಸದಸ್ಯರಾದ ಫಿಲಿಝ್ ಅಲ್ಬ್ರೆಕ್ಟ್ ಅವರು ಮಾತನಾಡಿ, ''Spark.NXT ಭಾರತದಲ್ಲಿ ಅತ್ಯುತ್ತಮ ದರ್ಜೆಯ ಜೀವನ ನಿರ್ವಹಣೆಗೆ ಅಗತ್ಯವಾದ ಗ್ರಾಹಕ-ಕೇಂದ್ರಿತ ನಾವೀನ್ಯತೆಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಲು ಅನುಕೂಲಕರವಾದ ಕೆಲಸ ನಿರ್ವಹಣೆಯ ಪ್ರೇರಣಾದಾಯಕ ವಾತಾವರಣವನ್ನು ಸಹವರ್ತಿಗಳಿಗೆ ಪೂರೈಸಲಿದೆ'' ಎಂದರು.

150 ಕ್ಕೂ ಹೆಚ್ಚು ದೇಶಗಳಲ್ಲಿ ಸಹವರ್ತಿ

150 ಕ್ಕೂ ಹೆಚ್ಚು ದೇಶಗಳಲ್ಲಿ ಸಹವರ್ತಿ

''ಜಾಗತಿಕ ನಾಯಕನ ಸ್ಥಾನದಲ್ಲಿರುವ ಬಾಷ್ 150 ಕ್ಕೂ ಹೆಚ್ಚು ದೇಶಗಳಲ್ಲಿ ಸಹವರ್ತಿಗಳನ್ನು ಹೊಂದಿದೆ. ಸಾಂಸ್ಕೃತಿಕ ವೈವಿಧ್ಯತೆಯ ಸಂಯೋಜನೆಯೊಂದಿಗೆ ಹೊಂದಿಕೊಳ್ಳುವ ಮತ್ತು ಅಂತರ್ಗತ ಕಾರ್ಯ ಸಂಸ್ಕೃತಿಯನ್ನು ನಾವು ಬೆಳೆಸುತ್ತೇವೆ. ಅದರ ಸ್ಮಾರ್ಟ್ ಪರಿಹಾರಗಳ ಶ್ರೇಣಿಯೊಂದಿಗೆ ಈ ಕ್ಯಾಂಪಸ್ ಹಸಿರು ಪರಿಸರ ವ್ಯವಸ್ಥೆಯನ್ನು ರಚಿನುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಸಾಬೀತುಪಡಿಸುತ್ತದೆ. ನಾವು ಮಾಡುವ ಪ್ರತಿಯೊಂದರಲ್ಲೂ ಸುಸ್ಥಿರತೆಯನ್ನು ಚಾಲನೆ ಮಾಡುವಾಗ ಆಯ್ಕೆಯ ಉದ್ಯೋಗದಾತರಾಗಿ ಉಳಿಯಲು ಇದು ನಮಗೆ ಅಧಿಕಾರವನ್ನು ನೀಡುತ್ತದೆ'' ಎಂದು ಅವರು ತಿಳಿಸಿದರು.

ಬಾಷ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಭಾರತದಲ್ಲಿ ಬಾಷ್ ಗ್ರೂಪ್ ನ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಅವರು ಮಾತನಾಡಿ, ``ಕಳೆದ 100 ವರ್ಷಗಳಿಂದ ಬಾಷ್ ಭಾರತದಲ್ಲಿ ಪರಿವರ್ತನೆ ತರುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದೆ. ಈ ಅವಧಿಯಲ್ಲಿ ಮೊಬಿಲಿಟಿ ಮತ್ತು ಮೊಬಿಲಿಟಿಯಿಂದಾಚೆಗೆ ದೊಡ್ಡ ಕ್ರಾಂತಿಯನ್ನೇ ಮಾಡಿದೆ. ನಮ್ಮ Spark.NXT ಹೊಸ ಕ್ಯಾಂಪಸ್ ನೊಂದಿಗೆ ಕಂಪನಿಯು ಸ್ಮಾರ್ಟ್ ಮತ್ತು ಸುಸ್ಥಿರವಾದ ಪರಿಹಾರಗಳ ಅಭಿವೃದ್ಧಿಗೆ ಹೂಡಿಕೆ ಮಾಡುವುದನ್ನು ಮುಂದುವರಿಸಲಿದೆ. ಈ ಮೂಲಕ ಭಾರತ ಸರ್ಕಾರದ ಆತ್ಮನಿರ್ಭರ ಭಾರತ ನಿರ್ಮಾಣದ ದೂರದೃಷ್ಟಿಗೆ ಬೆಂಬಲವಾಗಿ ನಿಂತಿದೆ'' ಎಂದು ಹೇಳಿದರು.

ಶೇ.85 ರಷ್ಟನ್ನು ಸೌರಶಕ್ತಿ ಮತ್ತು ಹಸಿರು ವಿದ್ಯುತ್ ಬಳಕೆ

ಶೇ.85 ರಷ್ಟನ್ನು ಸೌರಶಕ್ತಿ ಮತ್ತು ಹಸಿರು ವಿದ್ಯುತ್ ಬಳಕೆ

ಆಡುಗೋಡಿಯ ಹೊಸ ಕ್ಯಾಂಪಸ್‌ನಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪರ್ಯಾಯ ಇಂಧನ ವ್ಯವಸ್ಥೆಯನ್ನು ಕಲ್ಪಿಸಲು ಕಂಪನಿಯು ಈಗಾಗಲೇ 50 ಕೋಟಿ ರೂಪಾಯಿಗಳನ್ನು (6 ಮಿಲಿಯನ್ ಯೂರೋಗಳು) ಹೂಡಿಕೆ ಮಾಡಿದೆ. ಇದರಿಂದಾಗಿ ಹೊಸ ಕ್ಯಾಂಪಸ್‌ನಲ್ಲಿ ಬಳಕೆಯಾಗುವ ಒಟ್ಟು ವಿದ್ಯುತ್ ನ ಪೈಕಿ ಶೇ.85 ರಷ್ಟನ್ನು ಸೌರಶಕ್ತಿ ಮತ್ತು ಹಸಿರು ವಿದ್ಯುತ್ ಬಳಕೆ ಮಾಡುತ್ತಿದೆ.

ಇನ್ನು ಮೂರನೇ ಎರಡರಷ್ಟು ನೀರನ್ನು ಮಳೆನೀರು ಕೊಯ್ಲಿನ ಮೂಲಕ ಸಂಗ್ರಹ ಮಾಡಿ ಬಳಕೆ ಮಾಡುತ್ತಿದೆ. ಮಳೆ ನೀರು ಕೊಯ್ಲಿನ ಮೂಲಕ ನೀರನ್ನು ಸಂಗ್ರಹಿಸಲು 9 ಮಿಲಿಯನ್ ಲೀಟರ್ ಸಾಮರ್ಥ್ಯದ ಅಂಡರ್ ಗ್ರೌಂಡ್ ಟ್ಯಾಂಕ್ ಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀರಿನ ಬೇಡಿಕೆಯನ್ನು ಶೇ.60 ರಷ್ಟು ಕಡಿಮೆ ಮಾಡಿಕೊಂಡಿದೆ. ಬಾಷ್ ಅನೇಕ ಸ್ಮಾರ್ಟ್, ಸಮರ್ಥನೀಯ ಹಾಗೂ ಬಳಕೆದಾರ ಸ್ನೇಹಿ ಪರಿಹಾರಗಳನ್ನು ಅಳವಡಿಸಿಕೊಂಡಿದೆ, ಅದು ಕ್ಯಾಂಪಸ್ ಅನ್ನು ಭವಿಷ್ಯದೆಡೆಗೆ ಕೊಂಡೊಯ್ಯುತ್ತಿದೆ

ಗಾಳಿ-ಗುಣಮಟ್ಟದ ಮೇಲ್ವಿಚಾರಣಾ ಪರಿಹಾರ

* ಬಾಷ್ ಡೀಪ್ ಸೈಟ್ಸ್ ಉದ್ಯಮ 4.0 ಗಾಗಿ ಸುಧಾರಿತವಾದ AIoT- ಚಾಲಿತ ವಿಶ್ಲೇಷಣಾ ಪ್ಲಾಟ್ ಫಾರ್ಮ್ ಆಗಿದ್ದು, ಸಂಪನ್ಮೂಲಗಳನ್ನು ಉತ್ತಮಗೊಳಿಸುವ ಮತ್ತು ಉಪಯುಕ್ತತೆಗಳನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಸಮರ್ಥನೀಯತೆ ಹಾಗೂ ಉತ್ಕೃಷ್ಟತೆಯನ್ನು ಹೆಚ್ಚಿಸಲು ಸ್ಮಾರ್ಟ್ ಶಕ್ತಿ ಮತ್ತು ನೀರಿನ ನಿರ್ವಹಣೆಯನ್ನು ಪೂರೈಸುತ್ತದೆ. ವರ್ಷಕ್ಕೆ ಶೇ.6 ರಷ್ಟು ವಿದ್ಯುತ್ ಉಳಿಸುತ್ತದೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಶೇ.8 ರಷ್ಟು ಸುಧಾರಿಸುತ್ತದೆ.

* ಬಾಷ್ ಇಂಟಲಿಜೆಂಟ್ ಹವಾನಿಯಂತ್ರಣ ಮತ್ತು ಕಂಫರ್ಟ್ ಅಸಿಸ್ಟೆಂಟ್ (BIANCA) ಕ್ಯಾಂಪಸ್‌ನಲ್ಲಿ ಉದ್ಯೋಗಿ ಸೌಕರ್ಯಗಳನ್ನು ಸುಧಾರಣೆ ಮಾಡಲು ಮತ್ತು ನಂತರದ ಕಾರ್ಬನ್ ಬಳಕೆಯನ್ನು ಕಡಿಮೆ ಮಾಡಲು ಅಭಿವೃದ್ಧಿಪಡಿಸಲಾಗಿರುವ ಸ್ಮಾರ್ಟ್ ಪರಿಹಾರವಾಗಿದೆ. ಆಕ್ಯುಪೆನ್ಸಿ ಮತ್ತು ಥರ್ಮಲ್ ಆದ್ಯತೆಗಳ ಆಧಾರದ ಮೇಲೆ ತಾಪಮಾನ, ಗಾಳಿ ಮತ್ತು ಹವಾನಿಯಂತ್ರಣ ಕಾರ್ಯಾಚರಣೆಗಳನ್ನು ಉತ್ತಮಗೊಳಿಸುವ ಮೂಲಕ HVAC ಶಕ್ತಿಯ ಬಳಕೆಯನ್ನು ಶೇ.30 ರಿಂದ 50 ರಷ್ಟು ಕಡಿಮೆ ಮಾಡುತ್ತದೆ.

ವಿಡಿಯೋ ವಿಶ್ಲೇಷಣೆಯೊಂದಿಗೆ ಪ್ರವೇಶ ನಿಯಂತ್ರಣ

* ಪ್ರಮುಖ ಶಬ್ಧ ಮತ್ತು ವಾಯು ಮಾಲಿನ್ಯಕಾರಕಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಬಾಷ್ ಸುತ್ತುವರಿದ ಗಾಳಿ-ಗುಣಮಟ್ಟದ ಮೇಲ್ವಿಚಾರಣಾ ಪರಿಹಾರವನ್ನು ಸಹ ನಿಯೋಜನೆ ಮಾಡಿದೆ. ಈ ಡೇಟಾವನ್ನು ಅವರ ಯೋಗಕ್ಷೇಮವನ್ನು ಹೆಚ್ಚಿಸಲು ನೈಜ ಸಮಯದಲ್ಲಿ ಸಹಯೋಗಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ.

• ವೇಫೈಂಡರ್ ಅಪ್ಲಿಕೇಶನ್ ಕ್ಯಾಂಪಸ್ ಅನ್ನು ಸುಲಭವಾಗಿ ನ್ಯಾವಿಗೇಟ್ ಮಾಡುವ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ. ಇದಲ್ಲದೇ, ಹೆಚ್ಚುವರಿಯಾಗಿ ಸ್ಮಾರ್ಟ್ ಪಾರ್ಕಿಂಗ್ ಪರಿಹಾರ Park ZEUS ಸಹವರ್ತಿಗಳಿಗೆ ಹಾಗೂ ಸಂದರ್ಶಕರಿಗೆ ತಡೆರಹಿತ ಪಾರ್ಕಿಂಗ್ ಅನುಭವವನ್ನು ನೀಡುತ್ತದೆ. ಇದು ಕಾರ್ಯವನ್ನು ಅನುಕೂಲಕರವಾದ ಮತ್ತು ಸಮರ್ಥನೀಯವಾಗಿಸುತ್ತದೆ.

• ಬಾಷ್ ಬಿಲ್ಡಿಂಗ್ ಟೆಕ್ನಾಲಾಜೀಸ್ ಜನರು ಮತ್ತು ಆವರಣದ ಸುರಕ್ಷತೆಯನ್ನು ಗರಿಷ್ಠಗೊಳಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಪರಿಹಾರಗಳನ್ನು ಒದಗಿಸುತ್ತದೆ. ಈ ವಿವೇಚನಾಯುಕ್ತ ಅಪ್ಲಿಕೇಶನ್ ಗಳು ಎರಡು ಅಂಶಗಳ ದೃಢೀಕರಣವನ್ನು ಒಳಗೊಂಡಿರುವ ಸುಧಾರಿತ ವಿಡಿಯೋ ವಿಶ್ಲೇಷಣೆಯೊಂದಿಗೆ ಪ್ರವೇಶ ನಿಯಂತ್ರಣ, ಪ್ರವೇಶ ಮತ್ತು ಚತುರತೆ ಮೇಲೆ ಕಣ್ಣಿಡುತ್ತದೆ.

English summary
Congratulations to Bosch India on completing 100yrs in India. I'm happy to inaugurate the Bosch Smart Campus. This is the era of technology; it is important to invest even further in tech and innovation. Governmnet of India is working to provide high-speed internet to every village, said PM Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X