ಫೇಸ್ಬುಕ್ ಖಾತೆ ನಿಷ್ಕ್ರಿಯಗೊಳಿಸಿದ ಪ್ಲೇಬಾಯ್!

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 29: ಫೇಸ್ಬುಕ್ ನಿಂದ ಮಾಹಿತಿ ಸೋರಿಕೆ ಕಾರಣ ನೀಡಿ ಅನೇಕ ಸಂಸ್ಥೆಗಳು ತಮ್ಮ ಅಧಿಕೃತ ಫೇಸ್ಬುಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತಿವೆ. ಎಲಾನ್ ಮಾಸ್ಕ್ ಅವರು ಸ್ಪೇಸ್ ಎಕ್ಸ್ ಹಾಗೂ ಟೆಲ್ಸಾದ ಫೇಸ್ಬುಕ್ ಖಾತೆಗಳನ್ನು ಡಿಲೀಟ್ ಮಾಡಲು ನಿರ್ಧರಿಸಿದ ಬಳಿಕ ಈಗ ಪ್ಲೇಬಾಯ್ ಸರದಿ.

ಮತ್ತೊಮ್ಮೆ ಡಿಲೀಟ್ ಫೇಬ್ಲುಕ್ ಚಾಲ್ತಿಯಲ್ಲಿದೆ. ಪುರುಷರ ಲೈಫ್ ಸ್ಟೈಲ್ ಮ್ಯಾಗಜೀನ್ ಪ್ಲೇಬಾಯ್ ತನ್ನ ಖಾತೆಯನ್ನು ನಿಷ್ಕ್ರಿಯಗೊಳಿಸಲಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಪರ್ ಹೆಫ್ನರ್ ಅವರು ಟ್ವೀಟ್ ಮಾಡಿದ್ದಾರೆ.

Playboy Magazine deactivates Facebook page

ಫೇಸ್ಬುಕ್ 50 ಮಿಲಿಯನ್ ಬಳಕೆದಾರರ ಡೇಟಾ ಸೋರಿಕೆ ಮಾಡಿದೆ ಎಂಬ ಕೇಂಬ್ರಿಡ್ಜ್ ಎನಾಲಿಟಿಕಾದ ವರದಿ ನೀಡಿದ್ದು, ಈ ಎಲ್ಲಾ ಬೆಳವಣಿಗೆಗೆ ಕಾರಣವಾಗಿದೆ. ವರದಿ ಬಂದ ಬಳಿಕ ಫೇಸ್ಬುಕ್ ತನ್ನ ಗೌಪ್ಯತೆ ಹಾಗೂ ಭದ್ರತೆಯನ್ನು ಹೆಚ್ಚಿಸಿಕೊಂಡಿದೆ. ಆದರೆ, ಇದೆಲ್ಲವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿರುವ ಪ್ಲೇಬಾಯ್, ಈ ನಿರ್ಧಾರಕ್ಕೆ ಬಂದಿದೆ.

ಪ್ಲೇಬಾಯ್ ಫಾಲೋವರ್ ಗಳಾಗಿದ್ದ 25 ಮಿಲಿಯನ್ ಜನರ ಗೌಪ್ಯತೆಗೆ ಧಕ್ಕೆ ತರಬಾರದು ಎಂಬ ಉದ್ದೇಶದಿಂದ ಈ ಕ್ರಮ ಅನಿವಾರ್ಯ ಎಂದು ಸಿಇಒ ಕೂಪರ್ ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Playboy Magazine has deactivated its Facebook main page in the wake of the Facebook data leak scandal. Playboy becomes the latest company to delete the Facebook page. Playboy's chief creative officer and son of the magazine's founder, Cooper Hefner tweeted, "We are stepping away from Facebook."

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ