ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ಜಾರಿಯಾದರೆ ಮೊಬೈಲ್ ಎಕ್ಸ್ ಚೇಂಜ್ ದುಬಾರಿ!

ಮೊಬೈಲ್ ಅಷ್ಟೇ ಅಲ್ಲ, ಕಾರು, ಫ್ರಿಡ್ಜು, ಟಿವಿ.... ಹೀಗೆ ಯಾವ ವಸ್ತುಗಳನ್ನು ಎಕ್ಸ್ ಚೇಂಜ್ ಆಫರ್ ನಲ್ಲಿ ಕೊಡುತ್ತೀರೋ ಈ ಎಲ್ಲಾ ಸೌಲಭ್ಯಗಳು ದುಬಾರಿಯಾಗಲಿವೆ.

|
Google Oneindia Kannada News

ಮುಂಬೈ, ಏಪ್ರಿಲ್ 4: ಆನ್ ಲೈನ್ ಮಾರಾಟ ಜಾಲದಲ್ಲಿ ಹಳೆ ಮೊಬೈಲ್ ಕೊಟ್ಟು ಹೊಸ ಮೊಬೈಲ್ ಕೊಳ್ಳುವುದು ಯುವ ಜನರಿಗೆ ಅತ್ಯಂತ ಆತ್ಮೀಯವಾದ ವಿಚಾರ.

ವರ್ಷದಲ್ಲಿ ಹತ್ತಾರು ಬಾರಿ ಇಂಥ ಆಫರ್ ಗಳು ಆನ್ ಲೈನ್ ಜಾಲತಾಣಗಳಲ್ಲಿ ಕಂಡು ಬಂದೇ ಬರುತ್ತದೆ. ಆದರೆ, ನಿಮಗೆ ತಿಳಿದಿರಲಿ... ಇನ್ನು ಕೆಲವೇ ತಿಂಗಳುಗಳಲ್ಲಿ ಜಾರಿಗೆ ಬರಲಿರುವ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ) ಯಿಂದಾಗಿ, ಎಕ್ಸ್ ಚೇಂಜ್ ಆಫರ್ ನಲ್ಲಿ ಮೊಬೈಲ್ ಕೊಳ್ಳುವುದು ದುಬಾರಿಯಾಗಲಿದೆ.[ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]

ಅಷ್ಟೇ ಅಲ್ಲ, ಕಾರು, ಫ್ರಿಡ್ಜು, ಟಿವಿ.... ಹೀಗೆ ಯಾವ ವಸ್ತುಗಳನ್ನು ಎಕ್ಸ್ ಚೇಂಜ್ ಆಫರ್ ನಲ್ಲಿ ಕೊಡುತ್ತೀರೋ ಈ ಎಲ್ಲಾ ಸೌಲಭ್ಯಗಳು ದುಬಾರಿಯಾಗಲಿವೆ.[ಜಿಎಸ್ ಟಿ ಜಾರಿಯಾದರೆ ಆಗುವ 9 ಅನುಕೂಲಗಳು]

ಇದು ಹೇಗೆ, ಎತ್ತ, ಯಾವ ರೀತಿಯಲ್ಲಿ ಜಿಎಸ್ ಟಿ, ಎಕ್ಸ್ ಚೇಂಜ್ ಆಫರ್ ಮೇಲೆ ಪರಿಣಾಮ ಬೀರುತ್ತದೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.[ನಾಲ್ಕು ಹಂತದ ಜಿಎಸ್ ಟಿ ದರ ನಿಗದಿ: ಅರುಣ್ ಜೇಟ್ಲಿ]

ಮೊಬೈಲ್ ಕೂಡಾ ವೈಟ್ ಗೂಡ್ಸ್ ಪಟ್ಟಿಯಲ್ಲಿ

ಮೊಬೈಲ್ ಕೂಡಾ ವೈಟ್ ಗೂಡ್ಸ್ ಪಟ್ಟಿಯಲ್ಲಿ

ಈಗಾಗಲೇ ಜಿಎಸ್ ಟಿ ಸಾಧಕ ಬಾಧಕಗಳು ಈಗಾಗಲೇ ಹಲವಾರು ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯಗಳಲ್ಲಿ ಚರ್ಚೆಯಾಗಿವೆ. ಜಿಎಸ್ ಟಿ ಜಾರಿಯ ಜವಾಬ್ದಾರಿ ಹೊತ್ತಿರುವ ಸಾಂವಿಧಾನಿಕ ಸಂಸ್ಥೆಯು ಇದರ ಕರಡನ್ನು ಈಗಾಗಲೇ ಸಿದ್ಧಪಡಿಸಿದೆ. ಇದರಲ್ಲಿ ಹಳೆಯ ಮೊಬೈಲ್ ಸೇರಿದಂತೆ ಹಳೆಯ ರೆಫ್ರಿಜರೇಟರ್ ಗಳು, ಹಳೆಯ ಟೆಲಿವಿಷನ್ ಗಳು, ಹಳೆಯ ಕಾರು ಮುಂತಾದ ವಸ್ತುಗಳನ್ನು ವೈಟ್ ಗೂಡ್ಸ್ ಎಂದು ಪಟ್ಟಿ ಮಾಡಲಾಗಿದೆ.

ಹೀಗಿದೆ ನೋಡಿ ಹೊಸ ನಿಯಮ

ಹೀಗಿದೆ ನೋಡಿ ಹೊಸ ನಿಯಮ

ಜಿಎಸ್ ಟಿಯಲ್ಲಿ ನಿಮಗೆ ಆನ್ ಲೈನ್ ಮೂಲಕ ಹೊಸ ಮೊಬೈಲ್ ಕೊಡುವ ಗ್ರಾಹಕ ಒಬ್ಬ ಮಾರಾಟಗಾರ ಎಂದಾದರೆ, ನಿಮ್ಮ ಹಳೆಯ ಫೋನು ಕೊಡುತ್ತೀರಲ್ವಾ ಹಾಗಾಗಿ ನಿಮ್ಮನ್ನೂ ಒಬ್ಬ ಮಾರಾಟಗಾರ ಎಂದೇ ಪರಿಗಣಿಸಲಾಗಿದೆ. ಹಾಗಾಗಿ, ಈ ಎಕ್ಸ್ ಚೇಂಜ್ ವ್ಯವಹಾರದ ಪ್ರತಿ ಹಂತವೂ ಜಿಎಸ್ ಟಿ ವ್ಯಾಪ್ತಿಗೆ ಬರುತ್ತದೆ.

ಕೊಡುವ ಫೋನಿಗೂ ತೆರಿಗೆ

ಕೊಡುವ ಫೋನಿಗೂ ತೆರಿಗೆ

ಈ ವಿಚಾರವನ್ನು ಮತ್ತಷ್ಟು ಸ್ಫುಟವಾಗಿ ಅರ್ಥೈಸಿಕೊಳ್ಳಲು ಮೊಬೈಲ್ ಫೋನ್ ನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಹೊಸ ಮೊಬೈಲ್ ಬೆಲೆ 24,000 ರು. ಇದೆ ಎಂದು ತಿಳಿಯಿರಿ. ಎಕ್ಸ್ ಚೇಂಜ್ ಆಫರ್ ನಲ್ಲಿ ನಿಮಗೆ ಅದು 20,000ಕ್ಕೆ ಲಭ್ಯವಾಗಲಿದೆ ಎಂದಿಟ್ಟುಕೊಳ್ಳೋಣ. ಆದರೆ, ನಿಯಮದ ಪ್ರಕಾರ, ಹೊಸ ಮೊಬೈಲ್ ಫೋನ್ ನ ಮಾರುಕಟ್ಟೆ ಬೆಲೆ ಏನಿರುತ್ತದೋ (24,000 ರು.) ಅದರ ಮೇಲೆ ಜಿಎಸ್ ಟಿ ತೆರಿಗೆ ಲೆಕ್ಕ ಹಾಕಲಾಗುತ್ತದೆ. ಇಷ್ಟೇ ಅಲ್ಲ, ನೀವು ಕೊಡುವ ಹಳೆಯ ಫೋನಿನ ಮಾರುಕಟ್ಟೆಯ ಅಂದಿನ ಮಾರುಕಟ್ಟೆಯ ಬೆಲೆಯ ಆಧಾರದಲ್ಲಿ ಆ ಫೋನಿಗೂ ತೆರಿಗೆ ಬೀಳುತ್ತೆ!

ಮತ್ತೊಂದು ತೆರಿಗೆಯೂ ಆತನ ತಲೆಯ ಮೇಲೆಯೇ!

ಮತ್ತೊಂದು ತೆರಿಗೆಯೂ ಆತನ ತಲೆಯ ಮೇಲೆಯೇ!

ಜಿಎಸ್ ಟಿ ನಿಯಮಗಳ ಪ್ರಕಾರ, ಪ್ರತಿಯೊಬ್ಬ ಮಾರಾಟಗಾರನೂ ಜಿಎಸ್ ಟಿ ವ್ಯವಸ್ಥೆಯಡಿ ತನ್ನನ್ನು ನೋಂದಾಯಿಸಿಕೊಳ್ಳಬೇಕಿದೆ. ಹಾಗಾಗಿ, ಆನ್ ಲೈನ್ ವ್ಯವಹಾರ ನಡೆಸುವ ಕಂಪನಿಯು ಜಿಎಸ್ ಟಿ ಅಡಿಯನ್ನು ನೋಂದಾವಣೆ ಮಾಡಿಕೊಂಡಿರುತ್ತದೆ. ಹಾಗಾಗಿ, ಹೊಸ ಫೋನಿನ ಮಾರುಕಟ್ಟೆ ದರದ ಮೇಲೆ ಬೀಳುವ ಜಿಎಸ್ ಟಿ ತೆರಿಗೆಯನ್ನು ಮೊಬೈಲ್ ಫೋನ್ ಮಾರುವ ಆನ್ ಲೈನ್ ಸಂಸ್ಥೆಯೇ ನೀಡುತ್ತೆ. ಆದರೆ, ಹೊಸ ಮೊಬೈಲ್ ಕೊಳ್ಳುವ ಗ್ರಾಹಕ ತನ್ನನ್ನು ತಾನು ಜಿಎಸ್ ಟಿ ಅಡಿ ನೋಂದಾಯಿಸಿಕೊಂಡಿರುವುದಿಲ್ಲ. ಇಲ್ಲಿ ಹಳೆಯ ಫೋನ್ ಮೇಲಿನ ಮಾರುಕಟ್ಟೆ ದರದ ಮೇಲಿನ ಜಿಎಸ್ ಟಿ ಯಾರು ಭರಿಸಬೇಕು ಎಂಬ ಪ್ರಶ್ನೆ ಸಹಜವಾಗೇ ಕಾಡುತ್ತದೆ.

ಎಕ್ಸ್ ಚೇಂಜ್ ಆಫರ್ ಕಾಸ್ಲಿ ಆಗೋದಂತೂ ಸುಳ್ಳಲ್ಲ!

ಎಕ್ಸ್ ಚೇಂಜ್ ಆಫರ್ ಕಾಸ್ಲಿ ಆಗೋದಂತೂ ಸುಳ್ಳಲ್ಲ!

ಜಿಎಸ್ ಟಿ ಕರಡಿನ ಪ್ರಕಾರ, ಹಳೆಯ ಫೋನಿನ ಮಾರುಕಟ್ಟೆಯ ದರ ಆಧಾರಿತ ಜಿಎಸ್ ಟಿಯನ್ನು ನಿಮಗೆ ಹೊಸ ಮೊಬೈಲ್ ಸಪ್ಲೈ ಮಾಡಲಿರುವ ಆನ್ ಲೈನ್ ಕಂಪನಿಯೇ ಭರಿಸಬೇಕಾಗುತ್ತದೆ. ಆದರೆ, ಹೊಸ ಫೋನು, ಹಳೆಯ ಫೋನುಗಳೆರಡರ ತೆರಿಗೆಯನ್ನು ಆ ಸಂಸ್ಥೆ ತಾನಾಗಿಯೇ ಭರಿಸದೆ ಅದನ್ನು ಗ್ರಾಹಕರ ಮೇಲೆ ಕಂಪನಿಗಳು ಸಹಜವಾಗಿ ಹಾಕುತ್ತವೆ. ಆದ್ದರಿಂದ, ಎಕ್ಸ್ ಚೇಂಜ್ ಆಫರ್ ನಲ್ಲಿ ಹೊಸ ವಸ್ತುಗಳ್ಳನ್ನು ಕೊಳ್ಳುವುದೂ ಕೂಡ ದುಬಾರಿಯಾಗಲಿದೆ.

English summary
Exchange offers may pinch the pockets of an individual buyer, going by the draft rules for valuation of supply under GST. This tax is triggered on supply of goods or services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X