ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋರ್ಬ್ಸ್ ಪ್ರಭಾವಿ ಮಹಿಳೆಯರನ್ನು ಮೀಟ್ ಮಾಡಿ

By Mahesh
|
Google Oneindia Kannada News

ನವದೆಹಲಿ, ಮೇ.28: ಫೋರ್ಬ್ಸ್ ನಿಯತಕಾಲಿಕೆ ಜಾಗತಿಕವಾಗಿ ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಿಶ್ವದ 100 ಪ್ರಭಾವಿ ಮಹಿಳೆಯರ ಪೈಕಿ ಭಾರತದ ನಾಲ್ವರು ಸ್ಥಾನ ಪಡೆದುಕೊಂಡಿದ್ದಾರೆ. ಫೋರ್ಬ್ಸ್ ನ 12ನೇ ವಾರ್ಷಿಕ ಪಟ್ಟಿ, ಭಾರತೀಯ ಪ್ರಭಾವಿ ಮಹಿಳೆಯರ ಪರಿಚಯ ಇಲ್ಲಿದೆ.

ಫೋರ್ಬ್ಸ್ ಪಟ್ಟಿಯಲ್ಲಿ ಖ್ಯಾತ ಸಂಸ್ಥೆಗಳ ಸಿಇಒ, ರಾಜಕಾರಣಿ, ಸೆಲೆಬ್ರಿಟಿಗಳು, ಸಾಮಾಜಿಕ ಕಾರ್ಯಕರ್ತೆಯರು, ದಾನಿಗಳು ಎಲ್ಲರೂ ಇದ್ದಾರೆ, ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಟಾಪ್ 10 ಪಟ್ಟಿ ಹೀಗಿದೆ:
1.ರಾಜಕಾರಣಿ ಏಂಜೆಲಾ ಮಾರ್ಕೆಲ್
2.ರಾಜಕಾರಣಿ ಹಿಲರಿ ಕ್ಲಿಂಟನ್
3.ಮಹಾದಾನಿ ಮೆಲಿಂಡಾ ಗೇಟ್ಸ್
4.ಫೆಡೆರಲ್ ರಿಸರ್ವ್ ನ ಜಾನೆತ್ ಯೆಲ್ಲೆನ್
5.ಜಿಎಂ ಸಿಇಒ ಮೇರಿ ಬಾರಾ
6.ಐಎಂಎಫ್ ಮುಖ್ಯಸ್ಥೆ ಕ್ರಿಸ್ಟೀನಿ ಲಾಗಾರ್ಡೆ
7.ಬ್ರೆಜಿಲಿಯ ಅಧ್ಯಕ್ಷೆ ದಿಲ್ಮಾ ರೌಸೆಫ್
8.ಫೇಸ್ ಬುಕ್ ಸಿಒಒ ಶೆರ್ಲಿ ಸ್ಯಾಂಡ್ ಬರ್ಗ್
9.ಯೂಟ್ಯೂಬ್ ಸಿಒಒ ಸೂಸನ್ ವೊಜೊಸಿಸ್ಕಿ
10.ಯುಎಸ್ ಪ್ರಥಮ ಮಹಿಳೆ ಮಿಚೆಲ್ ಒಬಾಮಾ.

ಎಸ್​ಬಿಐನ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ

ಎಸ್​ಬಿಐನ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ

* 59 ವರ್ಷ ವಯಸ್ಸಿನ ಅರುಂಧತಿ ಭಟ್ಟಾಚಾರ್ಯ ಅವರು ಎಸ್ ಬಿಐನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಪ್ರಥಮ ಮಹಿಳೆ.
* 2014ರಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ 36ನೇ ಸ್ಥಾನ ಪಡೆದಿದ್ದರು.
* 2015ರಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ 30ನೇ ಸ್ಥಾನ ಪಡೆದಿದ್ದಾರೆ.
* 36 ದೇಶಗಳಲ್ಲಿನ 16,000ಕ್ಕೂ ಎಸ್ ಬಿಐ ಶಾಖೆಗಳು, 225 ಮಿಲಿಯನ್ ಗ್ರಾಹಕರು, 2,20,000ಕ್ಕೂ ಅಧಿಕ ಸಿಬ್ಬಂದಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಐಸಿಐಸಿಐ ಬ್ಯಾಂಕ್​ನ ಮುಖ್ಯಸ್ಥೆ ಚಂದಾ ಕೊಚ್ಚಾರ್

ಐಸಿಐಸಿಐ ಬ್ಯಾಂಕ್​ನ ಮುಖ್ಯಸ್ಥೆ ಚಂದಾ ಕೊಚ್ಚಾರ್

* 53 ವರ್ಷ ವಯಸ್ಸಿನ ಚಂದಾ ಕೊಚ್ಚರ್ ಐಸಿಐಸಿಐ ವ್ಯವಸ್ಥಾಪಕ ನಿರ್ದೇಶಕಿ, ಸಿಇಒ.
* ಐಸಿಐಸಿಐ ವಿಶ್ವದ ಎರಡನೇ ಅತಿದೊಡ್ಡ ಹಾಗೂ ಭಾರತದ ಖಾಸಗಿ ವಲಯದ ದೊಡ್ಡ ಬ್ಯಾಂಕ್.
* ಫೋರ್ಬ್ಸ್ ಪಟ್ಟಿಯಲ್ಲಿ 35ನೇ ಸ್ಥಾನದಲ್ಲಿದ್ದಾರೆ.
* ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಅನೇಕ ಗ್ರಾಹಕ ಸ್ನೇಹಿ ವಿಧಾನಗಳನ್ನು ಪರಿಚಯಿಸಿದ್ದಾರೆ.

ಬಯೋಕಾನ್ ಸ್ಥಾಪಕಿ ಕಿರಣ್ ಮಜುಂದಾರ್ ಷಾ

ಬಯೋಕಾನ್ ಸ್ಥಾಪಕಿ ಕಿರಣ್ ಮಜುಂದಾರ್ ಷಾ

* 62 ವರ್ಷ ವಯಸ್ಸಿನ ಕಿರಣ್ ಮಜುಂದಾರ್ ಷಾ ಅವರು ಬಯೋ ಟೆಕ್ನಾಲಜಿ ಕಂಪನಿ ಬಯೋಕಾನ್ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕಿ.
* ಕಳೆದ ವರ್ಷ 92ನೇ ಸ್ಥಾನದಲ್ಲಿದ್ದ ಕಿರಣ್ ಅವರು ಈ ಬಾರಿ 85ನೇ ಸ್ಥಾನಕ್ಕೆ ಜಿಗಿದಿದ್ದಾರೆ.
* ಸುಮಾರು 85 ದೇಶಗಳಿಗೆ ಬಯೋ ಉತ್ಪನ್ನಗಳನ್ನು ರಫ್ತು ಮಾಡುವ ಬಯೋಕಾನ್ ಕಳೆದ ವರ್ಷ 460 ಬಿಲಿಯನ್ ಡಾಲರ್ ಆದಾಯ ಹೊಂದಿದೆ.

ಸಿಸ್ಕೋ ಮುಖ್ಯಸ್ಥೆ ಪದ್ಮಶ್ರೀ ವಾರಿಯರ್

ಸಿಸ್ಕೋ ಮುಖ್ಯಸ್ಥೆ ಪದ್ಮಶ್ರೀ ವಾರಿಯರ್

ಸಿಸ್ಕೋ ಸಂಸ್ಥೆ ಸಿಟಿಒ ಆಗಿರುವ ಪದ್ಮಶ್ರೀ ವಾರಿಯರ್ ಅವರು ಫೋರ್ಬ್ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಭಾರತೀಯ ಮೂಲದ ಮತ್ತೊಬ್ಬ ಮಹಿಳೆಯಾಗಿದ್ದಾರೆ. ಈ ಮುಂಚೆ ಮೋಟರೋಲಾ ಕಂಪನಿ ಸಿಟಿಒ ಆಗಿದ್ದರು.

ಏಂಜೆಲಾ, ಮಿಚೆಲ್, ಹಿಲ್ಲರಿ ಕ್ಲಿಂಟನ್

ಏಂಜೆಲಾ, ಮಿಚೆಲ್, ಹಿಲ್ಲರಿ ಕ್ಲಿಂಟನ್

ರಾಜಕಾರಣಿ ಏಂಜೆಲಾ ಮಾರ್ಕೆಲ್ ನಂ.1 ಸ್ಥಾನದಲ್ಲಿದ್ದರೆ, ಹಿಲ್ಲರಿ ಕ್ಲಿಂಟನ್ 2ಹಾಗೂ ಮಿಚೆಲ್ ಒಬಾಮಾ 10ನೇ ಸ್ಥಾನ ಪಡೆದುಕೊಂಡಿದ್ದಾರೆ.

ಮೆಲಿಂಡಾ, ಶೆರ್ಲಿ, ಸೂಸನ್

ಮೆಲಿಂಡಾ, ಶೆರ್ಲಿ, ಸೂಸನ್

ಮಹಾದಾನಿ ಮೆಲಿಂಡಾ ಗೇಟ್ಸ್, ಫೇಸ್ ಬುಕ್ ಸಿಒಒ ಶೆರ್ಲಿ ಸ್ಯಾಂಡ್ ಬರ್ಗ್, ಯೂಟ್ಯೂಬ್ ಸಿಒಒ ಸೂಸನ್ ವೊಜೊಸಿಸ್ಕಿ


English summary
Four Indians have been named in the Forbes' list of world's most powerful 100 women.The 12th annual list of Forbe's mentioned most influential women of the world who are "transforming the world" and and have been "ranked by dollars, media presence and impact".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X