• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಚ್ಚರ! 53ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆ

|

ಬೆಂಗಳೂರು, ಏಪ್ರಿಲ್ 4: ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ಬುಕ್ ಬಳಕೆದಾರರಿಗೆ ಆಘಾತಕಾರಿ ಸುದ್ದಿ ಇಲ್ಲಿದೆ. ಸರಿ ಸುಮಾರು 53ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ, ಕಾಳ ಸಂತೆಯಲ್ಲಿ ಮಾಹಿತಿಯನ್ನು ಹರಾಜಿಗಿಡಲಾಗಿದೆ ಎಂದು 'ಹಡ್ಸನ್‌ ರಾಕ್‌ ಸೈಬರ್ ಕ್ರೈಮ್‌ ಇಂಟೆಲಿಜೆನ್ಸ್‌' ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಅಲನ್ ಗಾಲ್‌ ಟ್ವೀಟ್‌ ಮಾಡಿದ್ದಾರೆ.

2019ರಲ್ಲಿ ಆನ್‌ಲೈನ್ ವೇದಿಕೆ ಮುಖಾಂತರ ಅಪಾರ ಸಂಖ್ಯೆಯ ಬಳಕೆದಾರರ ಡೇಟಾ ಸೋರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಸೋರಿಕೆಯಾದ ಮಾಹಿತಿಯಲ್ಲಿ ಫೋನ್ ನಂಬರ್, ಪೂರ್ತಿ ಹೆಸರು, ವಿಳಾಸ, ಇಮೇಲ್ ವಿಳಾಸ, ಹುಟ್ಟುಹಬ್ಬ ದಿನಾಂಕ, ಸ್ವ ವಿವರಗಳು ಸೇರಿವೆ.

ಸರಿ ಸುಮಾರು 106 ದೇಶಗಳಿಗೆ ಸೇರಿದ 533 ಮಿಲಿಯನ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದ್ದು, ಭಾರತದ 60 ಲಕ್ಷ ಮಂದಿ ಮಾಹಿತಿ, ಯುಎಸ್ 32 ಮಿಲಿಯನ್ ಹಾಗೂ ಯುಕೆಯೆ 11 ಮಿಲಿಯನ್ ಖಾತೆ ಮಾಹಿತಿ ಲೀಕ್ ಆಗಿದೆ.

ಹ್ಯಾಕರ್ಸ್ ಕಳೆದ ಜನವರಿಯಿಂದ ಅನೇಕ ಕದ್ದ ಮಾಹಿತಿಯನ್ನು ಹಂತ ಹಂತವಾಗಿ ಕಾಳಸಂತೆಯಲ್ಲಿ ಹರಾಜಿಗಿಟ್ಟು ಮಾರಾಟ ಮಾಡುತ್ತಿದ್ದಾರೆ ಎಂದು ಇಸ್ರೇಲಿ ಸೈಬರ್ ಕ್ರೈಂ ಗುಪ್ತಚರ ಸಂಸ್ಥೆಯ ಅಲಾನ್ ಗಾಲ್ ತಿಳಿಸಿದ್ದಾರೆ. ಆದರೆ, ಅಚ್ಚರಿಯೆಂದರೆ ಮಾಹಿತಿಗಳಿಗೆ ಅತ್ಯಂತ ಕಡಿಮೆ ಯುರೋ ಬೆಲೆ ಟ್ಯಾಗ್ ಮಾಡಿ ಹರಾಜಿಗಿಡಲಾಗಿದೆ.

ಲಭ್ಯ ಮಾಹಿತಿಯನ್ನು ಫೇಸ್ಬುಕ್ ಡೇಟಾಬೇಸ್ ಜೊತೆ ಹೋಲಿಕೆ ಮಾಡಿ ನೋಡಿ, ಸೋರಿಕೆಯಾಗಿರುವ ಮಾಹಿತಿ ಫೇಸ್ಬುಕ್ ನಿಂದಲೇ ಆಗಿದೆ ಎಂದು ಖಚಿತಪಡಿಸಿಕೊಳಲಾಗಿದೆ. ಆದರೆ, ಹ್ಯಾಕರ್ಸ್ ಗುಂಪಿನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚಿನ ಸ್ವ ವಿವರ ಹಂಚಿಕೊಳ್ಳದಿರುವುದು ಒಳ್ಳೆಯದು, ಆದಷ್ಟು ಸುರಕ್ಷಿತ ನಿಯಮಗಳನ್ನು ಪಾಲಿಸಿ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಸಲಹೆ ನೀಡಿದ್ದಾರೆ.

English summary
In a massive data leak, the personal information of more than 500 million Facebook users was published online on Saturday by a user in a low-level hacking forum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X