ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈನಿಂದ ಷೇರು ಪೇಟೆಯಲ್ಲಿ ಪಿಎಫ್ ಹಣ ಹೂಡಿಕೆ

|
Google Oneindia Kannada News

ನವದೆಹಲಿ, ಜೂ. 29 : ಕಾರ್ಮಿಕ ಸಂಘಟನೆಗಳು ಮೊದಲಿನಿಂದ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದರೂ ಜುಲೈನಿಂದ ಭವಿಷ್ಯ ನಿಧಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಲು ಭವಿಷ್ಯ ನಿಧಿ ಸಂಸ್ಥೆ (ಪಿಎಫ್ ಒ) ಮುಂದಾಗಿದೆ.

ಮೊದಲಿಗೆ ಶೇ.1ರಷ್ಟು ಹಣ ಹೂಡಿಕೆ ಮಾಡಲಿದ್ದು ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಶೇ.5ಕ್ಕೆ ಹೆಚ್ಚಿಸಲಾಗುವುದು ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಮಾಹಿತಿ ನೀಡಿದ್ದಾರೆ. ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್​ಗಳಲ್ಲಿ ಇಪಿಎಫ್​ಒ ಹೆಚ್ಚಿನ ಹೂಡಿಕೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.[ಪಿಎಫ್ ಹೊಸ ನಿಮಯ : ಟೇಕ್ ಹೋಮ್ ಸಂಬಳಕ್ಕೆ ಕುತ್ತು !]

pf

ಒಂದು ಹಣಕಾಸು ವರ್ಷದಲ್ಲಿ 1 ಲಕ್ಷ ಕೋಟಿ ರು. ಹೂಡಿಕೆ ಮಾಡಲಾಗುವುದು. ಇದರಲ್ಲಿ 5 ಸಾವಿರ ಕೋಟಿ ರು. ಷೇರುಗಳಲ್ಲಿ ತೊಡಗಿಸಲಾಗುವುದು ಎಂದು ಇಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ಸರ್ಕಾರದ ಬಂಡವಾಳ ಕ್ರೋಢಿಕರಣಕ್ಕೂ ನೆರವಾಗಲಿದೆ.[ಹಳೆ ನೋಟು ಬದಲಾವಣೆ ಗಡುವು ವಿಸ್ತರಣೆ]

ದೇಶದಲ್ಲಿ ಆರ್ಥಿಕ ಸುಧಾರಣೆ ತರುವ ನಿಟ್ಟಿನಲ್ಲಿ ತೆರಿಗೆ ನೀತಿ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಹಣ ಸದಾ ಚಲಾಚಣೆಯಲ್ಲಿ ಇರಬೇಕು. ಯಾವ ಕಾರಣಕ್ಕೂ ಒಂದೆ ಕಡೆ ನೆಲೆ ನಿಂತು ಪ್ರಯೋಜನಕ್ಕೆ ಬಾರದಂತೆ ಆಗಬಾರದು ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಥ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

English summary
Employees' Provident Fund Organisation, undeterred by resistance from trade unions, will start investing in equity markets on July. It is a part of a reform drive aimed at boosting the economy. With more than $100 billion of assets from some 80-million members, EPFO is one of the world's largest. It will begin by investing in exchange traded funds, with the goal of earning higher returns, the officers said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X