ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌, ರಾಜಸ್ಥಾನದ ವಿವಿಧೆಡೆ ಪೆಟ್ರೋಲ್‌ ಕೊರತೆ

|
Google Oneindia Kannada News

ಅಹಮದಾಬಾದ್‌, ಜೂ. 14: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಗುಜರಾತ್‌ನ ಅಹಮದಾಬಾದ್‌ ಹಾಗೂ ರಾಜಸ್ಥಾನದ ವಿವಿಧಡೆ ಹಲವಾರು ಪೆಟ್ರೋಲ್ ಪಂಪ್‌ಗಳು ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯನ್ನು ಎದುರಿಸುತ್ತಿದ್ದು, ನಗರದ ನಿವಾಸಿಗಳಿಗೆ ತೊಂದರೆ ಉಂಟಾಗಿದೆ.

ಅಹಮದಾಬಾದ್‌ನ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ಪೆಟ್ರೋಲ್ ಪಂಪ್ ಡೀಲರ್‌ಗಳ ಪ್ರಕಾರ, ಗ್ರಾಹಕರಿಗೆ ಕಳೆದ ಎರಡು- ಮೂರು ದಿನಗಳಿಂದ ಸಾಮಾನ್ಯ ಪೂರೈಕೆಯ 50% ಮಾತ್ರ ಲಭ್ಯವಾಗುತ್ತಿದೆ. ಕಡಿಮೆ ಪೂರೈಕೆಯಿಂದಾಗಿ ಪೆಟ್ರೋಲ್ ಬಂಕ್‌ಗಳು ಕೇವಲ ಅರ್ಧ-ದಿನದ ಮೌಲ್ಯದ ಮಾರಾಟವನ್ನು ಮಾಡುತ್ತಿವೆ. ಸಾಕಷ್ಟು ಪೂರೈಕೆಯನ್ನು ಮಾಡುವಂತೆ ಹಿಂದೂಸ್ತಾನ್‌ ಮತ್ತು ಭಾರತ್‌ ಪೆಟ್ರೊಲಿಯಂಗೆ ಬಂಕ್‌ಗಳು ವಿನಂತಿಸಿವೆ.

ಅಹಮದಾಬಾದ್‌ನ ಮಣಿನಗರದ ಸೂಪರ್ ಸರ್ವಿಸ್ ಸ್ಟೇಷನ್ ಮಾಲೀಕ ನಕುಲ್ ಪಟೇಲ್, ಪ್ರತಿದಿನ ಶೇಕಡ 50ರಷ್ಟು ಪೆಟ್ರೋಲ್‌ ಅನ್ನು ನಾವು ಪಡೆಯುತ್ತಿಲ್ಲ. ನಮ್ಮ ದೈನಂದಿನ ಪೆಟ್ರೋಲ್ ಬಳಕೆ ಸುಮಾರು 30,000 ಲೀಟರ್ ಆಗಿದೆ. ಆದರೆ ಇಂದಿನವರೆಗೆ ನಾವು ಹಿಂದೂಸ್ತಾನ್‌ನಿಂದ 10,000 ರಿಂದ 15,000 ಲೀಟರ್ ಮಾತ್ರ ಪಡೆಯುತ್ತಿದ್ದೇವೆ. ಕಂಪನಿಗಳು ಎದುರಿಸುತ್ತಿರುವ ಬೆಲೆ ಏರಿಕೆಯಿಂದಾಗಿ ಕಡಿಮೆ ಪೂರೈಕೆಯಾಗಿದೆ ಎಂದು ನಮಗೆ ಹೇಳಲಾಗುತ್ತದೆ. ಮಾರುಕಟ್ಟೆಯ ಮೂಲಗಳ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿನ ಏರಿಕೆಯಿಂದಾಗಿ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಎರಡಕ್ಕೂ ಪ್ರತಿ ಲೀಟರ್‌ಗೆ 18-20 ರೂಪಾಯಿ ವ್ಯತ್ಯಾಸವಿದೆ ಎಂದು ಅವರು ಹೇಳಿದರು.

Infographics: ಜೂನ್ 13ರಂದು ದಾವಣಗೆರೆಯಲ್ಲಿ ಪೆಟ್ರೋಲ್ ದುಬಾರಿInfographics: ಜೂನ್ 13ರಂದು ದಾವಣಗೆರೆಯಲ್ಲಿ ಪೆಟ್ರೋಲ್ ದುಬಾರಿ

ಈ ಹಿನ್ನೆಲೆಯಲ್ಲಿ ಸರ್ಕಾರ ಇಂಧನ ಬೆಲೆಯನ್ನು ಕಡಿತಗೊಳಿಸಿರುವುದರಿಂದ ಪೂರೈಕೆಯನ್ನು ನಿರ್ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಿಂದೂಸ್ತಾನ್‌ ಮತ್ತು ಭಾರತ್‌ ಪೆಟ್ರೋಲಿಯಂ ಪೆಟ್ರೋಲ್ ಪಂಪ್‌ಗಳು ಕೊರತೆಯನ್ನು ಎದುರಿಸುತ್ತಿರುವಾಗ, ನಗರದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಡೀಲರ್ ಪಂಪ್‌ಗಳು ಯಾವುದೇ ಪೂರೈಕೆ ಸಮಸ್ಯೆಗಳನ್ನು ಎದುರಿಸಿದಂತೆ ಕಂಡು ಬಂದಿಲ್ಲ. ಐಒಸಿಎಲ್ ಪಂಪ್ ಡೀಲರ್‌ ಒಬ್ಬರ ಪ್ರಕಾರ, ಅಹಮದಾಬಾದ್‌ನಂತಹ ನಗರಗಳಲ್ಲಿ ಕ್ಲಾಸ್ ಎ ಪೆಟ್ರೋಲ್ ಪಂಪ್‌ಗಳಿಗೆ ಪೆಟ್ರೋಲ್‌ ವ್ಯತ್ಯಯದ ಪರಿಣಾಮ ಇನ್ನೂ ಬೀರಿಲ್ಲ. ಆದರೆ ಸಣ್ಣ ನಗರಗಳಲ್ಲಿ ಇಂಡಿಯನ್‌ ನ 'ಕ್ಲಾಸ್ ಬಿ' ಮತ್ತು 'ಕ್ಲಾಸ್ ಸಿ' ಡೀಲರ್ ಪಂಪ್‌ಗಳು ಪೂರೈಕೆ ಕೊರತೆಯನ್ನು ಅನುಭವಿಸಲು ಪ್ರಾರಂಭಿಸಿವೆ. ರಾಜ್ಯಾದ್ಯಂತ ತಮ್ಮ ಡೀಲರ್‌ಗಳಿಗೆ ಪೂರೈಕೆ ಮಾಡುವ ವಿಚಾರದಲ್ಲಿ ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್‌ಗೆ ಹೋಲಿಸಿದರೆ ಐಒಸಿಎಲ್ ಉತ್ತಮ ಸ್ಥಾನದಲ್ಲಿದೆ ಎಂದು ಹೇಳಿದರು.

ನಿಮ್ಮ ಜೊತೆ ನಮಗೇನ್ ಒಪ್ಪಂದ: ಭಾರತದ ಕಂಪನಿಗಳಿಗೆ ಕಚ್ಚಾತೈಲ ನೀಡಲ್ಲ ಎಂದ ರಷ್ಯಾ!ನಿಮ್ಮ ಜೊತೆ ನಮಗೇನ್ ಒಪ್ಪಂದ: ಭಾರತದ ಕಂಪನಿಗಳಿಗೆ ಕಚ್ಚಾತೈಲ ನೀಡಲ್ಲ ಎಂದ ರಷ್ಯಾ!

ವ್ಯವಹಾರದ ಮೇಲೆ ಪರಿಣಾಮ

ವ್ಯವಹಾರದ ಮೇಲೆ ಪರಿಣಾಮ

ಫೆಡರೇಶನ್ ಆಫ್ ಗುಜರಾತ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ​​(ಎಫ್‌ಜಿಪಿಡಿಎ) ಅಧ್ಯಕ್ಷ ಅರವಿಂದ್ ಠಕ್ಕರ್ ಪೆಟ್ರೋಲ್‌ ಕೊರತೆ ಇರುವುದನ್ನು ಹೇಳಿದರು. 'ನಗರದ ಹಲವು ಪೆಟ್ರೋಲ್ ಪಂಪ್‌ಗಳು ಡೀಸೆಲ್ ಕೊರತೆ ಎದುರಿಸುತ್ತಿವೆ. ಇದು ಹಿಂದೂಸ್ತಾನ್‌ ಮತ್ತು ಭಾರತ್‌ ಪೆಟ್ರೋಲಿಯಂ ಪಂಪ್‌ಗಳನ್ನು ಒಳಗೊಂಡಿದೆ ಎಂದು ಠಕ್ಕರ್ ಹೇಳಿದರು. ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯ ಕೊರತೆಯು ಅವರ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು ಮತ್ತು ಜನರು ಪೆಟ್ರೋಲ್‌ ಪಂಪ್‌ಗಳ ಮೇಲೆ ತಮ್ಮ ಸೇವೆಗಳ ವಿಶ್ವಾಸವನ್ನು ಕಳೆದುಕೊಳ್ಳಬಹುದು ಎಂಬ ಕಾರಣದಿಂದ ಸಂಘವು ತನ್ನ ಮುಂದಿನ ನಡೆಯ ಬಗ್ಗೆ ಯೋಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

9 ಗಂಟೆ ನಂತರ ಪೂರೈಕೆ ಇಲ್ಲ

9 ಗಂಟೆ ನಂತರ ಪೂರೈಕೆ ಇಲ್ಲ

ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮಧ್ಯೆ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ರಾಜಸ್ಥಾನದಲ್ಲಿ ಇಂಧನದ ಕೊರತೆಯನ್ನು ಎದುರಿಸಿವೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಎರಡು ತೈಲ ಮಾರುಕಟ್ಟೆ ಕಂಪನಿಗಳಾದ ಹಿಂದೂಸ್ತಾನ್‌ ಮತ್ತು ಭಾರತ್ ಪೆಟ್ರೋಲಿಯಂ ಪೆಟ್ರೋಲ್ ಪಂಪ್ ಮಾಲೀಕರಿಗೆ ರಾತ್ರಿ 9 ಗಂಟೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವನ್ನು ಕಡಿಮೆ ಮಾಡುವಂತೆಕೇಳಿಕೊಂಡಿವೆ. ಇಂಧನ ಪೂರೈಕೆಯ ಕೊರತೆಯಿಂದಾಗಿ 9 ಗಂಟೆ ನಂತರ ಇಂಧನ ಮಾರಾಟವನ್ನು ಸೀಮಿತಗೊಳಿಸಲು ಕಾರಣ ಎಂದು ವರದಿಗಳು ತಿಳಿಸಿವೆ.

ಮೂರು ದಿನಗಳವರೆಗೆ ಕಾಯುವ ಮಾಲೀಕರು

ಮೂರು ದಿನಗಳವರೆಗೆ ಕಾಯುವ ಮಾಲೀಕರು

ವರದಿಗಳ ಪ್ರಕಾರ, ರಾಜಸ್ಥಾನದ 6,700 ಔಟ್‌ಲೆಟ್‌ ಬಂಕ್‌ಗಳಲ್ಲಿ ಸುಮಾರು 4,500 ಪೆಟ್ರೋಲ್ ಬಂಕ್‌ಗಳು ತೈಲದ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಇಂಧನಕ್ಕಾಗಿ ಈಗ ಡಿಮ್ಯಾಂಡ್ ಡ್ರಾಫ್ಟ್ ಬುಕಿಂಗ್‌ನಿಂದ ಹಿಡಿದು ಪೂರೈಕೆಯನ್ನು ಪಡೆಯುವವರೆಗೆ ಪೆಟ್ರೋಲ್ ಪಂಪ್ ಮಾಲೀಕರು ಮೂರು ದಿನಗಳವರೆಗೆ ಕಾಯಬೇಕಾಗುತ್ತದೆ ಎಂದು ವರದಿಗಳು ತಿಳಿಸಿವೆ. ಜೈಪುರ, ಜೋಧಪುರ, ಅಜ್ಮೀರ್ ಮತ್ತು ಕೋಟಾ ತೈಲ ಡಿಪೋಗಳು ತೈಲ ಪೂರೈಕೆಯನ್ನು ಪಡೆಯುವಲ್ಲಿ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿವೆ ಎನ್ನಲಾಗಿದೆ.

ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ

ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ

ಮೇ 21 ರಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಭಾರತ ಸರ್ಕಾರವು ಅಬಕಾರಿ ಸುಂಕದಲ್ಲಿ ಕಡಿತವನ್ನು ಘೋಷಿಸಿದಾಗ - ಏಪ್ರಿಲ್ ಮತ್ತು ಮೇ 2022ರಲ್ಲಿ ಇಂಧನಕ್ಕಾಗಿ ಹೆಚ್ಚಿನ ಬೆಲೆಗಳನ್ನು ಪಾವತಿಸಿದ ಸಾಮಾನ್ಯ ಜನರು ಹೈರಾಣಗಿದ್ದಾರೆ. ಇಂಧನ ಬೆಲೆ ಕಳೆದ ಕೆಲವು ದಿನಗಳಿಂದ ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದ್ದರೂ, ಈಗ ಸುಮಾರು ಮೂರು ವಾರಗಳವರೆಗೆ ಬೆಲೆಗಳು ಬದಲಾಗದೆ ಉಳಿದಿವೆ. ಕೇಂದ್ರ ಸರ್ಕಾರ ಕಳೆದ ತಿಂಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಈ ಪರಿಷ್ಕರಣೆಯು ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ರೂ 9.5 ರಷ್ಟು ಕಡಿಮೆ ಮಾಡಿತು ಮತ್ತು ಡೀಸೆಲ್ ಅನ್ನು ಲೀಟರ್‌ಗೆ 7 ರೂಪಾಯಿಯಷ್ಟು ಕಡಿಮೆ ಮಾಡಿದೆ.

Recommended Video

Yogi ಸರ್ಕಾರದ ಬುಲ್ಡೋಜರ್ ಆಟಾಟೋಪಕ್ಕೆ ಬ್ರೇಕ್ ಹಾಕುತ್ತಾ ಹೈಕೋರ್ಟ್ | *Politics | OneIndia Kannada

English summary
In the wake of rising petrol prices in the international market, several petrol pumps in Ahmedabad and rajastan are facing shortage of petrol and diesel, which is causing trouble for the residents of the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X