ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಪೆಟ್ರೋಲ್, ಡೀಸೆಲ್ ದರ: ಮುಂಬೈನಲ್ಲಿ ಪೆಟ್ರೋಲ್ ಲೀ. 92 ರೂಪಾಯಿ
ನವದೆಹಲಿ, ಜನವರಿ 22: ದೇಶದಲ್ಲಿ ಜನರು ಕೋವಿಡ್-19 ನಿಂದ ಪಟ್ಟ ಪಾಡು ಅಷ್ಟಿಷ್ಟಲ್ಲ. ಅದೆಲ್ಲಾ ಮುಗಿಯುವ ಹಂತಕ್ಕೆ ತಲುಪುತ್ತಿದೆ ಎನ್ನುವಷ್ಟರಲ್ಲಿ ದಿನನಿತ್ಯ ಅತ್ಯಂತ ಅಗತ್ಯವಾದ ಪೆಟ್ರೋಲ್ ಮತ್ತು ಡೀಸೆಲ್ ದರವು ಗಗನಕ್ಕೇರಿದ್ದು, ದೇಶದಲ್ಲಿ ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ತಲುಪಿ ಬಿಟ್ಟಿದೆ.
ದೆಹಲಿಯಲ್ಲಿ ಜನವರಿ 22ರಂದು ಬೆಳಿಗ್ಗೆ ಪೆಟ್ರೋಲ್ ಬೆಲೆಯು ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದು, ಲೀಟರ್ಗೆ 85.45 ರೂ. ದಾಖಲಾಗಿದೆ. ಮುಂಬೈಯಲ್ಲಿ ಪ್ರತಿ ಲೀಟರ್ಗೆ ಪೆಟ್ರೋಲ್ ಬೆಲೆಯು ದಾಖಲೆಯ ಗರಿಷ್ಠ 92.04 ರೂ. ಆಗಿದೆ. ಇನ್ನು ಡೀಸೆಲ್ ದರವು ಪ್ರತಿ ಲೀಟರ್ಗೆ 75.63 ರೂ.ಗೆ ಮಾರಾಟವಾಗುತ್ತಿದೆ, ಹಿಂದಿನ ಬೆಲೆಗಿಂತ 25 ಪೈಸೆ ಹೆಚ್ಚಾಗಿದೆ.
ಭಾರತದಲ್ಲಿ ಇಂಧನ ಬೆಲೆ ಏಕಾಏಕಿ ಏರಿಕೆಗೆ ಕಾರಣ ಕೊಟ್ಟ ಸಚಿವರು...
ಈ ತಿಂಗಳ ಜನವರಿ 18 ರಂದು ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 25 ಪೈಸೆ ಹೆಚ್ಚಿಸಿದ ನಂತರ ಜನವರಿ 18 ರ ಬೆಳಿಗ್ಗೆ ಇಂಧನ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ಲೀಟರ್ಗೆ 84.95 ರೂ. ತಲುಪಿತು.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜನವರಿ 22: 88.33 (26 ಪೈಸೆ ಏರಿಕೆ)
ಜನವರಿ 21: 88.07
ಜನವರಿ 20: 88.07
ಜನವರಿ 19: 88.07
ಡೀಸೆಲ್
(ಪ್ರತಿ
ಲೀಟರ್)
ಜನವರಿ 22: 80.20 (26 ಪೈಸೆ ಏರಿಕೆ)
ಜನವರಿ 21: 79.94
ಜನವರಿ 20: 79.94
ಜನವರಿ 19: 79.94
ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜನವರಿ 22: 85.45 (25 ಪೈಸೆ ಏರಿಕೆ)
ಜನವರಿ 21: 85.20
ಜನವರಿ 20: 85.20
ಜನವರಿ 19: 85.20
ಡೀಸೆಲ್
(ಪ್ರತಿ
ಲೀಟರ್)
ಜನವರಿ 22: 75.63 (25 ಪೈಸೆ ಏರಿಕೆ)
ಜನವರಿ 21: 75.38
ಜನವರಿ 20: 75.38
ಜನವರಿ 19: 75.38
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜನವರಿ 22: 92.04 (24 ಪೈಸೆ ಏರಿಕೆ)
ಜನವರಿ 21: 91.80
ಜನವರಿ 20: 91.80
ಜನವರಿ 19: 91.80
ಡೀಸೆಲ್
(ಪ್ರತಿ
ಲೀಟರ್)
ಜನವರಿ 22: 82.40 (27 ಪೈಸೆ ಏರಿಕೆ)
ಜನವರಿ 21: 82.13
ಜನವರಿ 20: 82.13
ಜನವರಿ 19: 82.13
ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜನವರಿ 22: 88.16 (31 ಪೈಸೆ ಏರಿಕೆ)
ಜನವರಿ 21: 87.85
ಜನವರಿ 20: 87.85
ಜನವರಿ 19: 87.85
ಡೀಸೆಲ್
(ಪ್ರತಿ
ಲೀಟರ್)
ಜನವರಿ 22: 80.99 (32 ಪೈಸೆ ಏರಿಕೆ)
ಜನವರಿ 21: 80.67
ಜನವರಿ 20: 80.67
ಜನವರಿ 19: 80.67
ಹೈದ್ರಾಬಾದ್ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜನವರಿ 22: 88.89 (26 ಪೈಸೆ ಏರಿಕೆ)
ಜನವರಿ 21: 88.63
ಜನವರಿ 20: 88.63
ಜನವರಿ 19: 88.63
ಡೀಸೆಲ್
(ಪ್ರತಿ
ಲೀಟರ್)
ಜನವರಿ 22: 82.53 (27 ಪೈಸೆ ಏರಿಕೆ)
ಜನವರಿ 21: 82.26
ಜನವರಿ 20: 82.26
ಜನವರಿ 19: 82.26
ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.