ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ವಾಹನ ಸವಾರರಿಗೆ ಶುಭ ಸುದ್ದಿ!

|
Google Oneindia Kannada News

ಬೆಂಗಳೂರು, ಜುಲೈ 6: ಜೂನ್ 7ರಿಂದ ಪ್ರತಿದಿನದಂದು ಇಂಧನ ದರವನ್ನು ಸರ್ಕಾರಿ ಸ್ವಾಮ್ಯದ ಪ್ರಮುಖ ಮೂರು ತೈಲ ಕಂಪನಿಗಳು ಪರಿಷ್ಕರಿಸುತ್ತಿವೆ. ಆದರೆ, ಕಳೆದ ಒಂದು ವಾರದಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿಲ್ಲ. ಈ ಮೂಲಕ ಸತತ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ವಾಹನ ಸವಾರರಿಗೆ ಶುಭ ಸುದ್ದಿ ಸಿಕ್ಕಿದೆ.

Recommended Video

Virat Kohli Conflict Of Interest Trouble | Oneindia Kannada

ಸತತವಾಗಿ 23ನೇ ದಿನಗಳ ಕಾಲ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪರಿಷ್ಕರಣೆ ಮಾಡಲಾಗಿತ್ತು. ಆದರೆ, ಜೂನ್ 28ರಿಂದ ಯಾವುದೇ ಏರಿಕೆ, ಇಳಿಕೆ ಮಾಡಿಲ್ಲ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲ್ ಸಂಸ್ಥೆಗಳು ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸುಮಾರು 10 ರುಪಾಯಿಯಷ್ಟು ಏರಿಕೆ ಮಾಡಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 20 ಯುಎಸ್ ಡಾಲರ್ ತನಕ ಕುಸಿದಿತ್ತು. ಆದರೂ ಭಾರತದಲ್ಲಿ ತೈಲ ಬೆಲೆ ಇಳಿಕೆ ಮಾಡಿರಲಿಲ್ಲ. ಇದರ ಜೊತೆಗೆ ಕೇಂದ್ರ ಸರ್ಕಾರ ಕೂಡಾ ಪೆಟ್ರೋಲ್ ಮೇಲೆ 7 ರು ಹಾಗೂ ಡೀಸೆಲ್ ಮೇಲೆ 13 ರು ಗಳಷ್ಟು ಅಬಕಾರಿ ಸುಂಕ ಏರಿಕೆ ಮಾಡಿದೆ. ಜೊತೆಗೆ ಆಯಾ ರಾಜ್ಯಗಳ ವ್ಯಾಟ್ ದರ ಏರಿಕೆಯಿಂದ ಇಂಧನ ಬೆಲೆ ನಿರಂತರವಾಗಿ ಏರುತ್ತಲೇ ಇತ್ತು.

Petrol prices unchanged for 7th day in a row. Check rates in major cities

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರ, ಅಮೆರಿಕ-ಚೀನಾ ನಡುವಿನ ವಹಿವಾಟು ಆರಂಭದ ಮಾತುಕತೆ,ಭಾರತ ಹಾಗೂ ಚೀನಾ ನಡುವಿನ ಆಪ್ ನಿಷೇಧ ಆರ್ಥಿಕ ಸಮರ, ಗಡಿ ಸಂಘರ್ಷದ ಮಾತುಕತೆ, ಕೊರೊನಾವೈರಸ್ ಆರ್ಥಿಕ ಹೊಡೆತ, ಭಾರತದಲ್ಲಿ ತೈಲದ ಮೇಲೆ ಹೆಚ್ಚಿದ ಅಬಕಾರಿ ಸುಂಕ ಎಲ್ಲವೂ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ.

ಜುಲೈ 06ರ ಇಂಧನ ದರ ಪಟ್ಟಿ(ಪ್ರತಿ ಲೀಟರ್, ಬೆಲೆ ರು ಗಳಲ್ಲಿ)
ದೆಹಲಿ: ಪೆಟ್ರೋಲ್ 80.43 ; ಡೀಸೆಲ್ 80. 53 ರು
ಬೆಂಗಳೂರು: ಪೆಟ್ರೋಲ್ 83.04 ; ಡೀಸೆಲ್ 76.58
ಮುಂಬೈ: ಪೆಟ್ರೋಲ್ 87.19 ; ಡೀಸೆಲ್ 78.83
ಚೆನ್ನೈ: ಪೆಟ್ರೋಲ್ 83.63 ; ಡೀಸೆಲ್ 77.72

ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಪಟ್ಟಿ ತಿಳಿಯಲು ಕ್ಲಿಕ್ ಮಾಡಿ

English summary
Petrol, diesel prices remained unchanged for 7th day in a row as the oil marketing companies (OMC) not revised daily price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X