ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಬೆಂಗಳೂರು, ಡಿ. 6: ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸತತ 5ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತದಲ್ಲೂ ಇಂಧನ ದರದಲ್ಲಿ ಸತತವಾಗಿ ವ್ಯತ್ಯಾಸ ಕಂಡು ಬಂದಿದೆ.
ದೆಹಲಿಯಲ್ಲಿ ಭಾನುವಾರದಂದು ಪೆಟ್ರೋಲ್ ದರ ಲೀಟರ್ಗೆ 28 ಪೈಸೆ ಹೆಚ್ಚಾಗಿ 83.41 ರೂಪಾಯಿಗೆ ತಲುಪಿದ್ದು, ಡೀಸೆಲ್ ದರವು ಲೀಟರ್ಗೆ 29 ಪೈಸೆ ಏರಿಕೆಗೊಂಡು 73.61 ರೂಪಾಯಿಗೆ ತಲುಪಿದೆ. 2018ರಲ್ಲಿ ಪೆಟ್ರೋಲ್ ಬೆಲೆ ದಾಖಲೆಯ 84ರು ಮುಟ್ಟಿತ್ತು. ಈ ದಾಖಲೆ ಈ ಬಾರಿ ಧೂಳಿಪಟವಾಗುವ ಸಾಧ್ಯತೆ ಕಂಡು ಬಂದಿದೆ.
ಕಳೆದ 17 ದಿನಗಳಲ್ಲಿ 14ದಿನಗಳು ಇಂಧನ ದರದಲ್ಲಿ ಏರಿಕೆ ಕಂಡು ಬಂದಿದೆ.ಎರಡು ತಿಂಗಳ ವಿರಾಮದ ಬಳಿಕ ದೇಶೀಯವಾಗಿ ನವೆಂಬರ್ 20ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಏರಿಕೆ ಮಾಡಿದವು. ನಂತರದ ದಿನಗಳಲ್ಲಿ ತೈಲ ದರವು ಸತತ ಏರಿಕೆ ಕಂಡು ಬಂದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಮುಂಬೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಡಿಸೆಂಬರ್ 06: 90.05 (27 ಪೈಸೆ ಏರಿಕೆ)
ಡಿಸೆಂಬರ್ 05: 89.78
ಡಿಸೆಂಬರ್ 04: 89.52
ಡಿಸೆಂಬರ್ 03: 89.33
ಡಿಸೆಂಬರ್ 02: 89.16
***
ಡೀಸೆಲ್ (ಪ್ರತಿ ಲೀಟರ್)
ಡಿಸೆಂಬರ್ 06: 80.23 (30ಪೈಸೆ ಏರಿಕೆ)
ಡಿಸೆಂಬರ್ 05: 79.93
ಡಿಸೆಂಬರ್ 04: 79.66
ಡಿಸೆಂಬರ್ 03: 79.42
ಡಿಸೆಂಬರ್ 02: 79.22

ಚೆನ್ನೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಡಿಸೆಂಬರ್ 06: 86.25 (25 ಪೈಸೆ ಏರಿಕೆ)
ಡಿಸೆಂಬರ್ 05: 86.01
ಡಿಸೆಂಬರ್ 04: 85.76
ಡಿಸೆಂಬರ್ 03: 85.69
ಡಿಸೆಂಬರ್ 02: 85.44
ಡೀಸೆಲ್ (ಪ್ರತಿ ಲೀಟರ್)
ಡಿಸೆಂಬರ್ 06: 78.97 (28 ಪೈಸೆ ಏರಿಕೆ)
ಡಿಸೆಂಬರ್ 05: 78.70
ಡಿಸೆಂಬರ್ 04: 78.45
ಡಿಸೆಂಬರ್ 03: 78.33
ಡಿಸೆಂಬರ್ 02: 78.06

ಬೆಂಗಳೂರಿನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಡಿಸೆಂಬರ್ 06: 86.20 (29 ಪೈಸೆ ಏರಿಕೆ)
ಡಿಸೆಂಬರ್ 05: 85.91
ಡಿಸೆಂಬರ್ 04: 85.63
ಡಿಸೆಂಬರ್ 03: 85.42
ಡಿಸೆಂಬರ್ 02: 85.25
***
ಡೀಸೆಲ್ (ಪ್ರತಿ ಲೀಟರ್)
ಡಿಸೆಂಬರ್ 06: 78.03 (30 ಪೈಸೆ ಏರಿಕೆ)
ಡಿಸೆಂಬರ್ 05: 77.73
ಡಿಸೆಂಬರ್ 04: 77.46
ಡಿಸೆಂಬರ್ 03: 77.22
ಡಿಸೆಂಬರ್ 02: 77.01

ನವದೆಹಲಿಯಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಡಿಸೆಂಬರ್ 06: 83.41(28 ಪೈಸೆ ಏರಿಕೆ)
ಡಿಸೆಂಬರ್ 05: 83.13
ಡಿಸೆಂಬರ್ 04: 82.86
ಡಿಸೆಂಬರ್ 03: 82.66
ಡಿಸೆಂಬರ್ 02: 82.49
ಡೀಸೆಲ್ (ಪ್ರತಿ ಲೀಟರ್)
ಡಿಸೆಂಬರ್ 06: 73.61 (29 ಪೈಸೆ ಏರಿಕೆ)
ಡಿಸೆಂಬರ್ 05: 73.32
ಡಿಸೆಂಬರ್ 04: 73.07
ಡಿಸೆಂಬರ್ 03: 72.84
ಡಿಸೆಂಬರ್ 02: 72.65