ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ, ಮಂಬೈನಲ್ಲಿ ಬೆಲೆ ಅಧಿಕ
ನವದೆಹಲಿ, ಜನವರಿ 13: ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸುಮಾರು ಒಂದು ತಿಂಗಳ ಅಂತರದ ಬಳಿಕ ಕಳೆದ ವಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದರೂ ಒಂದೆರಡು ದಿನ ಇಂಧನ ದರದಲ್ಲಿ ಸ್ಥಿರತೆ ಕಂಡು ಬಂದಿತ್ತು. ಆದರೆ, ಬುಧವಾರ(ಜನವರಿ 13) ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಂಡಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ 25 ಪೈಸೆ ಹೆಚ್ಚಳ ಕಂಡು ಪ್ರತಿ ಲೀಟರ್ ಬೆಲೆ 84.45 ರೂಪಾಯಿ ನಷ್ಟಾಗಿದೆ. ಡೀಸೆಲ್ ಬೆಲೆ 74.63 ರೂ ತಲುಪಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪರಿಷ್ಕೃತ ಬೆಲೆ 91.07 ರು ಹಾಗೂ 81.34 ರೂಪಾಯಿ ನಷ್ಟಿದೆ.
ಒಂದು ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
2018ರಲ್ಲಿ ಪೆಟ್ರೋಲ್ ಬೆಲೆ ದಾಖಲೆಯ 84ರು ಮುಟ್ಟಿತ್ತು. ಇದೇ ರೀತಿ ಡೀಸೆಲ್ ಕೂಡಾ 75.45 ರು ದಾಟಿದ್ದೇ ದಾಖಲೆಯಾಗಿತ್ತು. ಇದರ ಬೆನ್ನಲ್ಲೇ ಮುಂಬೈ ಸೇರಿದಂತೆ ಕೆಲ ಮೆಟ್ರೋಗಳಲ್ಲಿ 100 ರು ಗಡಿ ದಾಟಿತ್ತು.2020ರಲ್ಲಿ ಕೊರೊನಾ ಸಾಂಕ್ರಾಮಿಕದಿಂದ ಆರ್ಥಿಕ ಸಂಕಷ್ಟ ಉಂಟಾಗಿದ್ದರಿಂದ ಕೇಂದ್ರ ಸರ್ಕಾರ ವಿಧಿಯಿಲ್ಲದೆ ಇಂಧನ ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಹೆಚ್ಚಳ ಮಾಡಿತ್ತು. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಬೆಲೆ ಪರಿಷ್ಕರಣೆ ಮಾಡುವುದು ಅನಿರ್ವಾರ್ಯವಾಯಿತು.

ಮಾರ್ಚ್ 2020ರಲ್ಲಿ ಅಬಕಾರಿ ಸುಂಕ ಏರಿಕೆ
ಮಾರ್ಚ್ 2020ರಲ್ಲಿ ಅಬಕಾರಿ ಸುಂಕ ಏರಿಕೆ ಮಾಡಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 13ರು ಹಾಗೂ ಡೀಸೆಲ್ 15 ರು ಏರಿಕೆಗೆ ಕೇಂದ್ರ ಸರ್ಕಾರ ಕಾರಣವಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 1.6 ಲಕ್ಷ ಕೋಟಿ ರು ಸಂಗ್ರಹವಾಗಿತ್ತು. ಈಗ ಮತ್ತೊಮ್ಮೆ ಸುಂಕ ಏರಿಕೆ ಮಾಡುವ ಸಾಧ್ಯತೆಯಿಲ್ಲ ಆದರೆ ರಾಜ್ಯಗಳು ಸೆಸ್ ಕಡಿಮೆ ಮಾಡದಿದ್ದರೆ ಅಬಕಾರಿ ಸುಂಕ ಇಳೀಕೆ ಮಾಡುವ ಒತ್ತಡಕ್ಕೆ ಕೇಂದ್ರ ಸರ್ಕಾರ ಬೀಳಲಿದೆ.

ಸುಮಾರು 5 ರು ನಷ್ಟು ಇಳಿಕೆ ಸಾಧ್ಯತೆ
ಮೇ 2020ರಿಂದ ಇಲ್ಲಿ ತನಕ ಪೆಟ್ರೋಲ್ ಬೆಲೆ 14. 28 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 11.83 ರು ಪ್ರತಿ ಲೀಟರ್ ನಷ್ಟು ಏರಿಕೆ ಕಂಡಿದೆ. ಆದರೆ, ಈಗ ಸುಂಕ ಇಳಿಸುವಂತೆ ವಾಹನ ಸವಾರರು, ವಿಪಕ್ಷಗಳಿಂದ ಸತತವಾಗಿ ಆಗ್ರಹಿಸುತ್ತಿದ್ದು ಇಂಧನ ಇಲಾಖೆ ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ. ಇಂಧನ ದರದಲ್ಲಿ ಸುಮಾರು 5 ರು ನಷ್ಟು ಇಳಿಕೆ ಸಾಧ್ಯತೆಯಿದೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಬಜೆಟ್ ನಂತರ ಘೋಷಣೆಯಾಗಬಹುದು.

ಬುಧವಾರ (ಜನವರಿ 13)ದಂದು ಪ್ರಮುಖ ನಗರಗಳಲ್ಲಿ ದರ
ಬುಧವಾರ (ಜನವರಿ 13)ದ ದರ
ನಗರ-ಪೆಟ್ರೋಲ್-ಡೀಸೆಲ್
* ನವದೆಹಲಿ:
ಪೆಟ್ರೋಲ್: 84.45 ರು (25 ಪೈಸೆ ಏರಿಕೆ)
ಡಿಸೇಲ್: 74.63 ರು (25 ಪೈಸೆ ಏರಿಕೆ)
* ಮುಂಬೈ:
ಪೆಟ್ರೋಲ್: 91.07 ರು (24 ಪೈಸೆ ಏರಿಕೆ)
ಡಿಸೇಲ್: 81.34ರು (27ಪೈಸೆ ಏರಿಕೆ)
* ಚೆನ್ನೈ:
ಪೆಟ್ರೋಲ್: 87.28ರು (25 ಪೈಸೆ ಏರಿಕೆ)
ಡಿಸೇಲ್: 80.04 ರು (26 ಪೈಸೆ ಏರಿಕೆ)
* ಕೋಲ್ಕತಾ:
ಪೆಟ್ರೋಲ್: 85.92ರು (24 ಪೈಸೆ ಏರಿಕೆ)
ಡಿಸೇಲ್: 78.22 ರು (25ಪೈಸೆ ಏರಿಕೆ)
* ಬೆಂಗಳೂರು:
ಪೆಟ್ರೋಲ್: 87.30ರು (26 ಪೈಸೆ ಏರಿಕೆ)
ಡಿಸೇಲ್: 79.14ರು (27ಪೈಸೆ ಏರಿಕೆ)

ಬೆಲೆ ಏರಿಳಿತಕ್ಕೆ ವಿವಿಧ ಕಾರಣಗಳಿವೆ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ನಿಂದಾಗಿ ದೇಶದಲ್ಲಿ ಇಂಧನ ದರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ. ದೇಶದ ಇತರೆ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಹಾಗೂ ಎಲ್ ಪಿಜಿ ದರ ತಿಳಿಯಲು ಲಿಂಕ್ ಕ್ಲಿಕ್ ಮಾಡಿ