• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ 2 ವರ್ಷಗಳ ಬಳಿಕ ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್ ದರ

|

ನವದೆಹಲಿ, ಡಿಸೆಂಬರ್ 08: ಮಂಗಳವಾರ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾಗದಿದ್ದರೂ, ದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ತುಂಬಾ ಹೆಚ್ಚಾಗಿದೆ.

ಮಂಗಳವಾರ ಅಂತರರಾಷ್ಟ್ರೀಯ ತೈಲ ಬೆಲೆ ಏರಿಕೆಯಾದ ನಂತರ, ಡೀಸೆಲ್ ಬೆಲೆ ಲೀಟರ್‌ಗೆ 3.41 ರೂ ಮತ್ತು ಪೆಟ್ರೋಲ್ ಮೂರು ವಾರಗಳಲ್ಲಿ ಪ್ರತಿ ಲೀಟರ್‌ಗೆ 2.65 ರೂ.ಗೆ ಏರಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 83.71 ರೂ.ಗೆ ಹೆಚ್ಚಿಸಲಾಗಿದ್ದು, ಮುಂಬೈಯಲ್ಲಿ ಪೆಟ್ರೋಲ್ ಲೀಟರ್‌ಗೆ 90.34 ರೂ.ಗೆ ಮಾರಾಟವಾಗುತ್ತಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 86.51 ರೂಪಾಯಿಗೆ ಮುಟ್ಟಿದೆ.

ಇನ್ನು ಡೀಸೆಲ್ ದರ ಲೀಟರ್‌ಗೆ ದೆಹಲಿಯಲ್ಲಿ 73.87 ರೂ.ನಷ್ಟಿದ್ದು, ಮುಂಬೈನಲ್ಲಿ 80.51 ರೂಗಳಷ್ಟಿದೆ. ಬೆಂಗಳೂರಿನಲ್ಲಿ ಡೀಸೆಲ್ ಲೀಟರ್‌ಗೆ 78.31 ರೂಪಾಯಿನಷ್ಟಿದೆ.

ಕಳೆದ ಎರಡು ವರ್ಷಗಳಲ್ಲಿ ಪೆಟ್ರೋಲ್ ಬೆಲೆ ತುಂಬಾ ದುಬಾರಿಯಾಗಿದೆ. ಎಕನಾಮಿಕ್‌ ಟೈಮ್ಸ್‌ ವರದಿ ಪ್ರಕಾರ, ಅಕ್ಟೋಬರ್ 4, 2018ರ ಬಳಿಕ ಈಗ ಪೆಟ್ರೋಲ್ ಬೆಲೆ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಡೀಸೆಲ್ ದರ ಈ ವರ್ಷ ಜುಲೈ 30ರ ಬಳಿಕ ಅತಿ ಹೆಚ್ಚಿನ ಮಟ್ಟಕ್ಕೆ ತಲುಪಿದೆ.

ಅದರಲ್ಲೂ ಲಾಕ್‌ಡೌನ್ ಸಡಿಲಿಕೆ ಬಳಿಕ ಎರಡು ತಿಂಗಳ ವಿರಾಮದ ಬಳಿಕ ದೇಶೀಯವಾಗಿ ನವೆಂಬರ್ 20ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಏರಿಕೆ ಮಾಡಿದವು. ನಂತರದ ದಿನಗಳಲ್ಲಿ ತೈಲ ದರವು ಸತತ ಏರಿಕೆ ಕಂಡು ಬಂದಿದೆ.

ವರದಿಯ ಪ್ರಕಾರ, ತ್ರೈಮಾಸಿಕದಲ್ಲಿ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯಾದ ನಂತರ ನವೆಂಬರ್ ಆರಂಭದಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಾಗಿದೆ. ಕಚ್ಚಾ ತೈಲವು ಪ್ರಸ್ತುತ ಬ್ಯಾರೆಲ್‌ಗೆ 48 ಅಮೆರಿಕಾ ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ.

English summary
India's Petrol Prices reached Highest in more than two years and diesel july 30 this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X