ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಧನ ದರ ಕುಸಿತ: ಈಗ 9 ತಿಂಗಳಲ್ಲೇ ಅತ್ಯಧಿಕ ಕಡಿಮೆ ಮೊತ್ತ

|
Google Oneindia Kannada News

ಬೆಂಗಳೂರು, ಜನವರಿ 01 : ಹೊಸ ವರ್ಷಾಚರಣೆ ಸಂದರ್ಭದಲ್ಲಿ ವಾಹನ ಸವಾರರಿಗೆ ಶುಭ ಸುದ್ದಿ ಸಿಕ್ಕಿದೆ. ಕಳೆದ ಒಂಭತ್ತು ತಿಂಗಳಲ್ಲೆ ಅತ್ಯಧಿಕ ಕಡಿಮೆ ಮೊತ್ತಕ್ಕೆ ಇಂಧನ ದರ ಕುಸಿದಿದೆ. ಪೆಟ್ರೋಲ್ ದರ ಸರಾಸರಿ 19 -21 ಪೈಸೆ ಹಾಗೂ ಡೀಸೆಲ್ ದರ 23-25 ಪೈಸೆ ದರದಂತೆ ಇಳಿಕೆ ಕಂಡಿದೆ.

ನವದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ 68.84 ಹಾಗೂ ಲೀಟರ್​ ಡೀಸೆಲ್​ಗೆ 46 ಪೈಸೆ ಇಳಿಕೆಯಾಗಿ 62.86 ರೂ.ಗೆ ತಲುಪಿದೆ.

ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕುಸಿತದಾಖಲೆ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕುಸಿತ

ಅಕ್ಟೋಬರ್​ನಲ್ಲಿ ಇಂಧನ ಬೆಲೆ ಗಗನಕ್ಕೇರಿತ್ತು. ದೆಹಲಿಯಲ್ಲಿ ಗರಿಷ್ಠ 84ಕ್ಕೆ ತಲುಪಿದರೆ, ವಾಣಿಜ್ಯ ನಗರಿಯಲ್ಲಿ ಗರಿಷ್ಠ 91.34 ರೂ.ಗೆ ಏರಿಕೆಯಾಗಿತ್ತು. ಇದೀಗ ಆ ದರ ದೆಹಲಿಯಲ್ಲಿ ಕನಿಷ್ಠ 68.84ಕ್ಕೆ ತಲುಪಿದರೆ, ಮುಂಬೈನಲ್ಲಿ 74.47ಕ್ಕೆ ಕುಸಿದಿದೆ.

ಇರಾನ್​ ಮೇಲೆ ಹೇರಿದ್ದ ನಿಷೇಧವನ್ನು ಅಮೆರಿಕದ ಟ್ರಂಪ್ ಸರ್ಕಾರವು ತಾತ್ಕಾಲಿಕವಾಗಿ ಸಡಿಲಿಕೆ ಮಾಡಿದ್ದು, ತೈಲ ಉತ್ಪಾದನೆ ಮೇಲೆ ನಿಯಂತ್ರಣ ಸಾಧಿಸಿದ್ದು, ಪ್ರತಿ ಬ್ಯಾರೆಲ್ ಗೆ 86.74 ಯುಎಸ್ ಡಾಲರ್ ನಷ್ಟು ತಲುಪಿದ್ದ ಕಚ್ಚಾತೈಲ ಬೆಲೆ ಈಗ ಶೇ 40 ರಷ್ಟು ಕುಸಿತ ಕಂಡಿದ್ದರಿಂದ ತೈಲ ದರ ಇಳಿಕೆ ಸಾಧ್ಯವಾಗಿದೆ.

ಬೆಂಗಳೂರಿನಲ್ಲಿ ಇಂಧನ ದರ ಎಷ್ಟಿದೆ?

ಬೆಂಗಳೂರಿನಲ್ಲಿ ಇಂಧನ ದರ ಎಷ್ಟಿದೆ?

ಪೆಟ್ರೋಲ್ ದರ
ಮಂಗಳವಾರ (ಜನವರಿ 01) ದಂದು ಪೆಟ್ರೋಲ್ 69.21ರು (18 ಪೈಸೆ ಇಳಿಕೆ)
ಸೋಮವಾರ ಪೆಟ್ರೋಲ್ 69.39 ರು(21 ಪೈಸೆ ಇಳಿಕೆ)
ಭಾನುವಾರದಂದು ಪೆಟ್ರೋಲ್ 69.60ರು (22ಪೈಸೆ ಕಡಿತ)

ಡೀಸೆಲ್ ಬೆಲೆ
ಮಂಗಳವಾರ(ಜನವರಿ 01)ದಂದು ಡೀಸೆಲ್ 63.01 ರು (19 ಪೈಸೆ ಇಳಿಕೆ) ಸೋಮವಾರದಂದು ಡೀಸೆಲ್ 63.20 ರು (23 ಪೈಸೆ ಇಳಿಕೆ)
ಭಾನುವಾರದಂದು ಡೀಸೆಲ್ 63.43 ರು (24 ಪೈಸೆ ಇಳಿಕೆ)

ಚೆನ್ನೈಯಲ್ಲಿ ಇಂಧನ ದರ ಇಳಿಕೆ

ಚೆನ್ನೈಯಲ್ಲಿ ಇಂಧನ ದರ ಇಳಿಕೆ

ಮಂಗಳವಾರ (ಜನವರಿ 01) ದಂದು ಪೆಟ್ರೋಲ್ 71.22ರು (19 ಪೈಸೆ ಇಳಿಕೆ)
ಸೋಮವಾರ ಪೆಟ್ರೋಲ್71.41 ರು(21 ಪೈಸೆ ಇಳಿಕೆ)
ಭಾನುವಾರದಂದು ಪೆಟ್ರೋಲ್ 71.62ರು (23ಪೈಸೆ ಕಡಿತ)

ಡೀಸೆಲ್ ಬೆಲೆ
ಮಂಗಳವಾರ(ಜನವರಿ 01)ದಂದು ಡೀಸೆಲ್ 66.14 ರು (21 ಪೈಸೆ ಇಳಿಕೆ) ಸೋಮವಾರದಂದು ಡೀಸೆಲ್ 66.35 ರು (24 ಪೈಸೆ ಇಳಿಕೆ)
ಭಾನುವಾರದಂದು ಡೀಸೆಲ್ 66.59 ರು (25 ಪೈಸೆ ಇಳಿಕೆ)

ಮುಂಬೈಯಲ್ಲಿ ಇಂಧನ ದರ

ಮುಂಬೈಯಲ್ಲಿ ಇಂಧನ ದರ

ಮಂಗಳವಾರ (ಜನವರಿ 01) ದಂದು ಪೆಟ್ರೋಲ್ 65.56ರು (20 ಪೈಸೆ ಇಳಿಕೆ)
ಸೋಮವಾರ ಪೆಟ್ರೋಲ್ 65.76 ರು(25 ಪೈಸೆ ಇಳಿಕೆ)
ಭಾನುವಾರದಂದು ಪೆಟ್ರೋಲ್ 66.01ರು (24 ಪೈಸೆ ಕಡಿತ)

ಡೀಸೆಲ್ ಬೆಲೆ
ಮಂಗಳವಾರ(ಜನವರಿ 01)ದಂದು ಡೀಸೆಲ್ 65.56 ರು (20 ಪೈಸೆ ಇಳಿಕೆ) ಸೋಮವಾರದಂದು ಡೀಸೆಲ್ 65.76 ರು (25 ಪೈಸೆ ಇಳಿಕೆ)
ಭಾನುವಾರದಂದು ಡೀಸೆಲ್ 66.01 ರು (24 ಪೈಸೆ ಇಳಿಕೆ)

ಕೋಲ್ಕತ್ತಾದಲ್ಲಿ ಇಂಧನ ದರ

ಕೋಲ್ಕತ್ತಾದಲ್ಲಿ ಇಂಧನ ದರ

ಮಂಗಳವಾರ (ಜನವರಿ 01) ದಂದು ಪೆಟ್ರೋಲ್ 70.78ರು (18 ಪೈಸೆ ಇಳಿಕೆ)
ಸೋಮವಾರ ಪೆಟ್ರೋಲ್ 70.96 ರು(31 ಪೈಸೆ ಇಳಿಕೆ)
ಭಾನುವಾರದಂದು ಪೆಟ್ರೋಲ್ 71.27ರು (10ಪೈಸೆ ಕಡಿತ)

ಡೀಸೆಲ್ ಬೆಲೆ
ಮಂಗಳವಾರ(ಜನವರಿ 01)ದಂದು ಡೀಸೆಲ್ 64.42ರು (19 ಪೈಸೆ ಇಳಿಕೆ) ಸೋಮವಾರದಂದು ಡೀಸೆಲ್ 64.61 ರು (35 ಪೈಸೆ ಇಳಿಕೆ)
ಭಾನುವಾರದಂದು ಡೀಸೆಲ್ 63.96 ರು (11 ಪೈಸೆ ಇಳಿಕೆ)

English summary
Petrol and diesel prices continued their downward trend, with rates cut around 19 paise to 25 paise per litre in top cities. Petrol prices fell to their lowest level in 2018, after rates were cut by 19-21 paise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X