ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮಹಾರಾಷ್ಟ್ರದಲ್ಲಿ ಪೆಟ್ರೋಲ್ 5, ಡೀಸೆಲ್ 3 ರೂ ಇಳಿಕೆ

|
Google Oneindia Kannada News

ಮುಂಬೈ, ಜುಲೈ 14: ಮಹಾರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆ ಏರಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಾಹನ ಸವಾರರಿಗೆ ಬಂಪರ್ ಕೊಡುಗೆಯನ್ನು ಕೊಟ್ಟಿದ್ದಾರೆ. ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಇಳಿಕೆ ಆದೇಶ ಹೊರಡಿಸಿದ್ದಾರೆ.

Petrol price slashed by Rs 5 per litre, diesel price by Rs 3 per litre in maharashtra announces CM Eknath Shinde

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಇಂಧನದ ಮೇಲಿನ ಮೌಲ್ಯವರ್ಧಿತ ತೆರಿಗೆ(ವ್ಯಾಟ್) ಕಡಿತವನ್ನು ಘೋಷಿಸಿದ ನಂತರ ಪೆಟ್ರೋಲ್ ದರದಲ್ಲಿ 5 ರೂಪಾಯಿ ಹಾಗೂ ಡೀಸೆಲ್ ದರದಲ್ಲಿ 3 ರೂಪಾಳಿ ಇಳಿಕೆಯಾಗಿದೆ.

ರಾಜ್ಯದಲ್ಲಿ ರಾಜಕೀಯ ತಿಕ್ಕಾಟ ನಡೆಯುತ್ತಿದ್ದ ಸಂದರ್ಭದಲ್ಲಿಯೇ ತನ್ನ ಬಣವು ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿತಗೊಳಿಸುವುದಾಗಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮೊದಲೇ ಭರವಸೆ ನೀಡಿದ್ದರು. ಈ ಹಿಂದೆ ಮಾತು ಕೊಟ್ಟಂತೆ ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದ್ದಾರೆ.

ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಟ್ವೀಟ್:
"ಮಹಾರಾಷ್ಟ್ರ ಮತ್ತು ಮರಾಠಿ ಮನುಸ್‌ಗಳಿಗೆ ದೊಡ್ಡ ಪರಿಹಾರ!, ಸಿಎಂ ಏಕನಾಥರಾವ್ ಶಿಂಧೆ ನೇತೃತ್ವದ ಹೊಸ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕ್ರಮವಾಗಿ 5 ರೂಪಾಯಿ, ಡೀಸೆಲ್ 3 ರೂಪಾಯಿ ಕಡಿಮೆ ಮಾಡಲು ನಿರ್ಧರಿಸಿದೆ ಎಂದು ಘೋಷಿಸಲು ಸಂತೋಷವಾಗಿದೆ," ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಟ್ವೀಟ್ ಮಾಡಿದ್ದಾರೆ.

Recommended Video

ಕುತೂಹಲ ಮೂಡಿಸುತ್ತಿದೆ ಬಿಗ್ ಬಾಸ್ ಹೊಸ ಸೀಸನ್ | *Entertainment | OneIndia Kannada

ಮಹಾರಾಷ್ಟ್ರದಲ್ಲಿ ಸಿಎನ್‌ಜಿ ಮತ್ತು ಪಿಎನ್‌ಜಿ ದರ ಏರಿಕೆ:
ಮಹಾರಾಷ್ಟ್ರದ ಸರ್ಕಾರಿ ಸ್ವಾಮ್ಯದ ಮಹಾನಗರ ಗ್ಯಾಸ್ ಮಂಗಳವಾರ ಮೆಗಾಪೊಲಿಸ್‌ನಲ್ಲಿ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ಮತ್ತು ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಚಿಲ್ಲರೆ ಬೆಲೆಯಲ್ಲಿ ಏರಿಕೆ ಮಾಡಿತ್ತು. ಒಂದು ಕೆಜಿ ಸಿಎನ್‌ಜಿ ದರದಲ್ಲಿ 4 ರೂಪಾಯಿ, ಎಸ್‌ಸಿಎಂ (ಸ್ಟ್ಯಾಂಡರ್ಡ್) ದರದಲ್ಲಿ 3 ರೂಪಾಯಿ ಹೆಚ್ಚಿಸಲಾಗಿತ್ತು. ಈ ಪರಿಷ್ಕೃತ ದರವು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ವರದಿಯಾಗಿತ್ತು.
ರಾಜ್ಯದಲ್ಲಿ ಹೆಚ್ಚುತ್ತಿರುವ ಇನ್‌ಪುಟ್ ಗ್ಯಾಸ್ ಬೆಲೆ ಮತ್ತು ರೂಪಾಯಿ ಮೌಲ್ಯದ ಕುಸಿತದಿಂದಾಗಿ ಬೆಲೆಯಲ್ಲಿ ನಿರಂತರ ಏರಿಕೆಯಾಗಿದೆ ಎಂದು ವಿತರಕರು ಹೇಳಿದ್ದಾರೆ. ದೇಶೀಯ ಅನಿಲ ಹಂಚಿಕೆಯಲ್ಲಿನ ಕೊರತೆಯನ್ನು ಪೂರೈಸಲು ಕಂಪನಿಯು ಸಾಗರೋತ್ತರ ಮಾರುಕಟ್ಟೆಯಿಂದ ಅನಿಲವನ್ನು ಪಡೆಯುತ್ತಿದೆ. ಅದರಂತೆ, ಎಂಜಿಎಲ್ ಸಿಎನ್‌ಜಿಯ ಚಿಲ್ಲರೆ ಬೆಲೆಯನ್ನು 4 ರೂಪಾಯಿ ಹೆಚ್ಚಿಸುವುದರಿಂದ 80ಕ್ಕೆ ಮತ್ತು 3 ರೂಪಾಯಿ ಬೆಲೆ ಏರಿಕೆಯಿಂದ ದೇಶೀಯ ಪಿಎನ್‌ಜಿ ದರವು 48.50ಕ್ಕೆ ಏರಿಕೆಯಾಗಿದೆ.

English summary
The price of petrol & diesel reduced by Rs 5 per litre & Rs 3 per litre respectively after Maharashtra CM Eknath Shinde Announces VAT Cut on Fuel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X