• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

|

ನವದೆಹಲಿ, ಜನವರಿ 6: ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸುಮಾರು ಒಂದು ತಿಂಗಳ ಅಂತರದ ಬಳಿಕ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತದಲ್ಲೂ ಇಂಧನ ದರದಲ್ಲಿ ಸತತವಾಗಿ ವ್ಯತ್ಯಾಸ ಕಂಡು ಬಂದಿದೆ.

ದೆಹಲಿಯಲ್ಲಿ ಬುಧವಾರದಂದು ಪೆಟ್ರೋಲ್ ದರ ಲೀಟರ್‌ಗೆ 26 ಪೈಸೆ ಹೆಚ್ಚಾಗಿ 83.97ರೂಪಾಯಿಗೆ ತಲುಪಿದ್ದು, ಡೀಸೆಲ್ ದರವು ಲೀಟರ್‌ಗೆ 25 ಪೈಸೆ ಏರಿಕೆಗೊಂಡು 74.12ರೂಪಾಯಿಗೆ ತಲುಪಿದೆ. 2018ರಲ್ಲಿ ಪೆಟ್ರೋಲ್ ಬೆಲೆ ದಾಖಲೆಯ 84ರು ಮುಟ್ಟಿತ್ತು. ಇದೇ ರೀತಿ ಡೀಸೆಲ್ ಕೂಡಾ 75.45 ರು ದಾಟಿದ್ದೇ ದಾಖಲೆಯಾಗಿತ್ತು. ಆದರೆ, ಈ ದಾಖಲೆ ಈ ಬಾರಿ ಧೂಳಿಪಟವಾಗಿ ಹಲವು ಮೆಟ್ರೋಗಳಲ್ಲಿ 100 ರು ಗಡಿ ದಾಟಿತ್ತು.

ಮಾರ್ಚ್ 2020ರಲ್ಲಿ ಅಬಕಾರಿ ಸುಂಕ ಏರಿಕೆ ಮಾಡಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 13ರು ಹಾಗೂ ಡೀಸೆಲ್ 15 ರು ಏರಿಕೆಗೆ ಕೇಂದ್ರ ಸರ್ಕಾರ ಕಾರಣವಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 1.6 ಲಕ್ಷ ಕೋಟಿ ರು ಸಂಗ್ರಹವಾಗಿತ್ತು.

ಮೇ 2020ರಿಂದ ಇಲ್ಲಿ ತನಕ ಪೆಟ್ರೋಲ್ ಬೆಲೆ 14. 28 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 11.83 ರು ಪ್ರತಿ ಲೀಟರ್ ನಷ್ಟು ಏರಿಕೆ ಕಂಡಿದೆ.

ಬುಧವಾರ(ಜನವರಿ 6)ದ ದರ

ನಗರ-ಪೆಟ್ರೋಲ್-ಡೀಸೆಲ್

* ದೆಹಲಿ: 83.97ರು- 83.71 ರು

   Rohit Sharma ಒಂದು ವರ್ಷದ ಬಳಿಕ ಕಣಕ್ಕಿಳಿಯಲು ಸಜ್ಜು | Oneindia Kannada

   * ಮುಂಬೈ: 90.60 ರು - 90.34 ರು

   * ಚೆನ್ನೈ: 86.76ರು -86.51 ರು

   * ಕೋಲ್ಕತಾ: 85.44ರು -85.19 ರು

   * ಬೆಂಗಳೂರು: 86.79ರು-86.51 ರು

   ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

   English summary
   Petrol price on Wednesday neared all-time high after state-owned fuel retailers hiked rates after a nearly month-long hiatus.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X