ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವರ್ಷದಲ್ಲಿ ಪೆಟ್ರೋಲ್ 63 ಬಾರಿ, ಡೀಸೆಲ್ 61 ಬಾರಿ ಏರಿಕೆ!

|
Google Oneindia Kannada News

ನವದೆಹಲಿ, ಜುಲೈ 20: ದೆಹಲಿಯಲ್ಲಿ ಈ ವರ್ಷದಲ್ಲಿ ಈ ಬಾರಿ 63 ಬಾರಿ, ಡೀಸೆಲ್ 61 ಬಾರಿ ಏರಿಕೆಯಾಗಿದೆ. ಅಡುಗೆ ಅನಿಲ ದರ 5 ಬಾರಿ ಹೆಚ್ಚಳವಾಗಿದೆ. ಪೆಟ್ರೋಲ್, ಡೀಸೆಲ್ ದರ 4 ಬಾರಿ ದೆಹಲಿಯಲ್ಲಿ ಈ ವರ್ಷ ಕಡಿಮೆಯಾಗಿದೆ.

2021-22 ಆರ್ಥಿಕ ವರ್ಷದಲ್ಲಿ ದೇಶದಲ್ಲಿ 39 ಬಾರಿ ಪೆಟ್ರೋಲ್ ಹಾಗೂ 36 ಡೀಸೆಲ್ ಏರಿಕೆಯಾಗಿದ್ದು, ಪೆಟ್ರೋಲ್ ಒಮ್ಮೆ ಹಾಗೂ ಡೀಸೆಲ್ ಎರಡು ಬಾರಿ ಇಳಿಕೆಯಾಗಿದೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ರಾಮೇಶ್ವರ್ ತೇಲಿ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

2020-2021ರ ಆರ್ಥಿಕ ವರ್ಷದಲ್ಲಿ ದೇಶದಲ್ಲಿ 76 ಬಾರಿ ಪೆಟ್ರೋಲ್ ಹಾಗೂ 73 ಡೀಸೆಲ್ ಏರಿಕೆಯಾಗಿದ್ದು, ಪೆಟ್ರೋಲ್ 10 ಬಾರಿ ಹಾಗೂ ಡೀಸೆಲ್ 24 ಬಾರಿ ಇಳಿಕೆಯಾಗಿದೆ.

Petrol price in Delhi rose 63 times, diesel 61 this year: Govt

ಮಾರ್ಚ್ 31ರ ಅಂತ್ಯಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಗಳಿಕೆ ಶೇ 88ರಷ್ಟು ಏರಿಕೆಯಾಗಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 19.98% ಹಾಗು ಡೀಸೆಲ್ ಬೆಲೆ 15.83% ಏರಿಕೆಯಾಗಿದ್ದು, 3.35 ಲಕ್ಷ ಕೋಟಿ ರು 2020-21ರಲ್ಲಿ ಬಂದಿದೆ.

Recommended Video

ಜಪಾನ್ ಗೆ ಸಹಾಯ ಮಾಡದಂತೆ ಖಡಕ್ ವಾರ್ನಿಗ್ ಕೊಟ್ಟ ಚೀನಾ! | Oneindia Kannada

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ. ಅಂತಾರಾಷ್ಟ್ರೀಯ ದರ, ವಿನಿಮಯ ದರ, ತೆರಿಗೆ ವಿಧಾನ ಎಲ್ಲವೂ ಗಣನೆಗೆ ಬರುತ್ತದೆ ಎಂದು ವಿವರಿಸಿದರು.

English summary
Prices of petrol have been raised 39 times during the current fiscal 2021-22, while those of diesel have been raised on 36 occasions, the government informed the Lok Sabha today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X