ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ

By Mahesh
|
Google Oneindia Kannada News

ನವದೆಹಲಿ, ಏಪ್ರಿಲ್ 01: ಕಳೆದ 4 ವರ್ಷಗಳಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿ, ದಾಖಲೆ ಬರೆದಿದೆ.

ಭಾನುವಾರದಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 18 ಪೈಸೆ ಏರಿಕೆಯಾದ ಬಳಿಕ ದೆಹಲಿಯಲ್ಲಿ ಭಾನುವಾರದಂದು ಪೆಟ್ರೋಲ್ ಪ್ರತಿ ಲೀಟರ್ ಗೆ 73.73 ರೂ. ತಲುಪಿದೆ. ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದ್ದು, ಪ್ರತಿ ಲೀಟರ್ ಗೆ 64.58 ರೂ. ಮುಟ್ಟಿದೆ.

ಪೆಟ್ರೋಲ್ ಉತ್ಪನ್ನಕ್ಕೆ ಜಿಎಸ್ ಟಿ : ರಾಜ್ಯಗಳ ಮೇಲೆ ಗೂಬೆ ಕೂರಿಸಿದ ಜೇಟ್ಲಿಪೆಟ್ರೋಲ್ ಉತ್ಪನ್ನಕ್ಕೆ ಜಿಎಸ್ ಟಿ : ರಾಜ್ಯಗಳ ಮೇಲೆ ಗೂಬೆ ಕೂರಿಸಿದ ಜೇಟ್ಲಿ

2014 ರ ಸೆಪ್ಟಂಬರ್ 14 ರಂದು 76.06 ರೂ. ಇದ್ದ ಪೆಟ್ರೋಲ್, ನಂತರದಲ್ಲಿ ಕೊಂಚ ತಗ್ಗಿತ್ತು. ಆದರೆ, ಭಾನುವಾರದದು ಏರಿಕೆಯಾದ ಬಳಿಕ 4 ವರ್ಷಗಳಲ್ಲಿನ ಹೆಚ್ಚಿನ ಬೆಲೆಯನ್ನು ದಾಖಲಿಸಿದೆ.

Petrol price hits 4-year high, diesel at highest level

ಫೆಬ್ರವರಿ 07, 2018ರಂದು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 64.22 ರೂ. ತಲುಪಿ, ದಾಖಲೆ ಬರೆದಿತ್ತು. ಈಗ ಲೀಟರ್ 64.58 ರೂ. ತಲುಪಿ ಮತ್ತೆ ಹೊಸ ದಾಖಲೆ ಬರೆದಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತ, ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಬೆಲೆ ಸಮತೋಲನ ಕಾಯ್ದುಕೊಳ್ಳಲಾಗಿದೆ. ಒಟ್ಟಾರೆ, ಅರುಣ್ ಜೇಟ್ಲಿ ಅವರು ಕೇಂದ್ರ ವಿತ್ತ ಸಚಿವರಾದ ಬಳಿಕ 9 ಸಲ ಅಬಕಾರಿ ಸುಂಕ ಏರಿಕೆ ಮಾಡಲಾಗಿದೆ.

'ಪೆಟ್ರೋಲ್ ಹಾಗೂ ಡೀಸೆಲ್ ತೆರಿಗೆ ಕಡಿಮೆ ಮಾಡಲ್ಲ' : ಸಿದ್ದರಾಮಯ್ಯ'ಪೆಟ್ರೋಲ್ ಹಾಗೂ ಡೀಸೆಲ್ ತೆರಿಗೆ ಕಡಿಮೆ ಮಾಡಲ್ಲ' : ಸಿದ್ದರಾಮಯ್ಯ

ಅಬಕಾರಿ ಸುಂಕ ಇಳಿಕೆಗೆ ಸಲಹೆ: ಪ್ರತಿ ಲೀಟರ್ ಪೆಟ್ರೋಲ್ ಗೆ 2 ರೂ. ಅಬಕಾರಿ ಸುಂಕ ಕಡಿಮೆ ಮಾಡಿ, ವ್ಯಾಟ್ ಇಳಿಕೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲಾಗಿತ್ತು.

ಆದರೆ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಸುಂಕ ಇಳಿಕೆ ಮಾಡಿದ್ದರೂ, ಉಳಿದ ರಾಜ್ಯಗಳು ವ್ಯಾಟ್ ಇಳಿಕೆ ಮಾಡಲಿಲ್ಲ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಹಾಗೂ ಹಿಂದುಸ್ತಾನ್ ಕಾರ್ಪೊರೇಷನ್ ಸಂಸ್ಥೆಗಳು ಕಳೆದ ಜೂನ್ ತಿಂಗಳಿನಲ್ಲಿ 15 ವರ್ಷಗಳ ಪದ್ಧತಿಯನ್ನು ಕೈಬಿಡಲಾಯಿತು. ಪ್ರತಿ ತಿಂಗಳ ಮೊದಲ ದಿನ ಹಾಗೂ 16ನೇ ದಿನದಂದು ಬೆಲೆ ಏರಿಕೆ ಮಾಡುವುದನ್ನು ಬಿಟ್ಟು ಪ್ರತಿದಿನ ಬೆಲೆ ಏರಿಳಿತಕ್ಕೆ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)

English summary
Petrol price on Sunday(April 01) hit a four-year high of Rs 73.73 a litre while diesel rates touched an all-time high of Rs 64.58 in the national capital, renewing calls for the government to cut excise tax rates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X