ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 12ನೇ ದಿನವೂ ಪೆಟ್ರೋಲ್ ಬೆಲೆ ಇಳಿಕೆ

By Mahesh
|
Google Oneindia Kannada News

ಬೆಂಗಳೂರು, ಜೂನ್ 10: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು, ಸತತ 12ನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಮಾಡುವ ಮೂಲಕ, ಗ್ರಾಹಕರಿಗೆ ತುಸು ನೆಮ್ಮದಿ ತಂದಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ನಂತರ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಸತತ ಏರಿಕೆ ಕಂಡಿತ್ತು. ಪೆಟ್ರೋಲ್ ನಲ್ಲಿ 4 ರೂಪಾಯಿ ಹಾಗೂ ಡಿಸೇಲ್ ನಲ್ಲಿ 3.50 ರೂಪಾಯಿ ಏರಿಕೆಯಾಗಿತ್ತು.

Petrol price cut for the twelfth day in a row

ಭಾನುವಾರದಂದು ದೆಹಲಿಯಲಿ ಪೆಟ್ರೋಲ್ 24 ಪೈಸೆ ಹಾಗೂ ಡಿಸೇಲ್ 18 ಪೈಸೆ ಇಳಿಕೆಯಾಗಿದೆ. ಕಳದ್ 12 ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 1 ರೂಪಾಯಿ 65 ಪೈಸೆ ಇಳಿಕೆಯಾಗಿದೆ. ಡೀಸೆಲ್ ಬೆಲೆಯಲ್ಲಿ ಒಂದು ರೂಪಾಯಿ 21 ಪೈಸೆ ಇಳಕೆಯಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ 76.78 ರೂಪಾಯಿ ಇದ್ದರೆ, ಡಿಸೇಲ್ ಬೆಲೆ 68 ರೂಪಾಯಿ 10 ಪೈಸೆಯಷ್ಟಿದೆ. ಆದರೆ, ಸತತ ಬೆಲೆ ಇಳಿಕೆ ನಂತರ ಮೆಟ್ರೋಸಿಟಿಗಳ ಪೈಕಿ, ಮುಂಬೈಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿದೆ.

ಕಳೆದ 12 ದಿನಗಳಲ್ಲಿ ಒಟ್ಟಾರೆ ಪೆಟ್ರೋಲ್ ದರ ದೆಹಲಿಯಲ್ಲಿ 1.65 ರು, ಕೋಲ್ಕತ್ತಾದಲ್ಲಿ 1.62ರು, ಮುಂಬೈಯಲ್ಲಿ 1.74ರು ಇಳಿಕೆ ಕಂಡಿದೆ. ಇದೇ ರೀತಿ ಡೀಸೆಲ್ ದರ ದೆಹಲಿಯಲ್ಲಿ 1.21ರು, ಕೋಲ್ಕತ್ತಾದಲ್ಲಿ 1.28ರು, ಚೆನ್ನೈಯಲ್ಲಿ 1.29ರು ಇಳಿಕೆಯಾಗಿದೆ.

ಇಂಧನ ದರ (ಭಾನುವಾರ ಜೂನ್ 10)
ನಗರ-ಪೆಟ್ರೋಲ್-ಡೀಸೆಲ್[ಪ್ರತಿ ಲೀಟರ್ ಗೆ ರು ನಂತೆ)
ದೆಹಲಿ-76.78-68.1
ಕೋಲ್ಕತ್ತಾ-79.44-70.65
ಮುಂಬೈ-84.61-72.51
ಚೆನ್ನೈ-79.69-71.89
ಬೆಂಗಳೂರು-78.03-69.27

English summary
Petrol prices came down by 24 paise in Delhi and Kolkata on Sunday, while in Mumbai, the petrol prices came down by 23 paise and by 26 paise in Chennai. The petrol price cut took place for the twelfth day in a row
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X