ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

19 ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರು ಪ್ಲಸ್, ತೆರಿಗೆ ಎಲ್ಲಿ ಹೆಚ್ಚು?

|
Google Oneindia Kannada News

ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಬುಧವಾರ (ಜುಲೈ 21) ದಂದು ಡೀಸೆಲ್ ದರದಲ್ಲಿ ಬದಲಾವಣೆಯಾಗಿಲ್ಲ. ಮೇ 4ರಿಂದ ಇಂದಿನ ತನಕ ಪೆಟ್ರೋಲ್ ಒಟ್ಟು 40 ಬಾರಿ ಹಾಗೂ ಡೀಸೆಲ್ 37 ಬಾರಿ ಏರಿಕೆಯಾಗಿದ್ದು, ಜೂನ್ ತಿಂಗಳಲ್ಲೇ 21 ಬಾರಿ ಬೆಲೆ ಏರಿಕೆ ಮಾಡಲಾಗಿದೆ. ಮೇ 4ರಿಂದ ಪೆಟ್ರೋಲ್ 11.15 ರು ಪ್ರತಿ ಲೀಟರ್ ಹಾಗೂ ಡೀಸೆಲ್ 10.88 ರು ಪ್ರತಿ ಲೀಟರ್ ಆಗಿದೆ. ದೆಹಲಿಯಲ್ಲಿ ಈ ವರ್ಷದಲ್ಲಿ ಈ ಬಾರಿ 63 ಬಾರಿ, ಡೀಸೆಲ್ 61 ಬಾರಿ ಏರಿಕೆಯಾಗಿದೆ. ಅಡುಗೆ ಅನಿಲ ದರ 5 ಬಾರಿ ಹೆಚ್ಚಳವಾಗಿದೆ. ಪೆಟ್ರೋಲ್, ಡೀಸೆಲ್ ದರ 4 ಬಾರಿ ದೆಹಲಿಯಲ್ಲಿ ಈ ವರ್ಷ ಕಡಿಮೆಯಾಗಿದೆ.

100 ಪ್ಲಸ್ ಏರಿಕೆಯಾದ ರಾಜ್ಯಗಳು: ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಲಡಾಕ್, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ ಹಾಗೂ ನಾಗಾಲ್ಯಾಂಡ್.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ. ಅಂತಾರಾಷ್ಟ್ರೀಯ ದರ, ವಿನಿಮಯ ದರ, ತೆರಿಗೆ ವಿಧಾನ ಎಲ್ಲವೂ ಗಣನೆಗೆ ಬರುತ್ತದೆ.

Petrol Price Crosses Rs 100 in 19 States

ವ್ಯಾಟ್ ಅಧಿಕ ಹೇರಿರುವ ರಾಜ್ಯಗಳು: ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ ಹಾಗೂ ಒಡಿಶಾ ಹೆಚ್ಚು ವ್ಯಾಟ್, ಸೆಸ್ ವಿಧಿಸುತ್ತಿವೆ. ದೇಶದಲ್ಲಿ ಈ ರಾಜ್ಯಗಳಲ್ಲೇ ಇಂಧನ ದರ ದುಬಾರಿಯಾಗಿದೆ. ಅರುಣಾಚಲ ಪ್ರದೇಶ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಇಂಧನ ದರದ ಮೇಲೆ ತೆರಿಗೆ ಅತ್ಯಂತ ಕಡಿಮೆ ಇದೆ.

ರಾಜಸ್ಥಾನದಲ್ಲಿ ಶೇ 36ರಷ್ಟು ವ್ಯಾಟ್, 1500 ಪ್ರತಿ ಕಿ.ಲೀಟರ್ ರಸ್ತೆ ಸೆಸ್ ಹಾಕಲಾಗುತ್ತಿದೆ. ಕರ್ನಾಟಕದಲ್ಲಿ ಶೇ 35ರಷ್ಟು ಸೇಲ್ಸ್ ತೆರಿಗೆ ಹಾಕುತ್ತಿದ್ದರೆ, ತೆಲಂಗಾಣದಲ್ಲಿ ಶೇ 35.20 ವ್ಯಾಟ್, ಒಡಿಶಾದಲ್ಲಿ ಶೇ 32ರಷ್ಟು ವ್ಯಾಟ್ ವಿಧಿಸಲಾಗುತ್ತಿದೆ.

ಲಕ್ಷದೀಪದಲ್ಲಿ ಪೆಟ್ರೋಲ್ ಮೇಲೆ ಯಾವುದೇ ತೆರಿಗೆ ವಿಧಿಸಲಾಗುತ್ತಿಲ್ಲ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಶೇ 6ರಷ್ಟು ವ್ಯಾಟ್ ಇದ್ದರೆ, ದಾದ್ರಾ ಮತ್ತು ನಗರ್ ಹವೇಲಿ, ಡಮನ್ ಮತ್ತು ಡಿಯುನಲ್ಲಿ ಶೇ 20ರಷ್ಟು ವ್ಯಾಟ್ ಇದೆ. ಅರುಣಾಚಲ ಪ್ರದೇಶದಲ್ಲಿ ಶೇ 20ರಷ್ಟು ವ್ಯಾಟ್, ಮೇಘಾಲಯದಲ್ಲಿ ಶೇ 20ರಷ್ಟು ಅಥವಾ 15 ರು ಪ್ರತಿ ಲೀಟರ್ ನಷ್ಟಿದೆ.

ಮೇ 2020ರಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲೆ 13 ರು ಹಾಗೂ ಡೀಸೆಲ್ ಮೇಲೆ 16 ರು ನಷ್ಟು ಅಬಕಾರಿ ಸುಂಕ ಏರಿಕೆ ಮಾಡಿದ್ದರಿಂದ ಇಂಧನ ದರ ದುಬಾರಿಯಾಗಿದೆ. 19.98 ರು ಪ್ರತಿ ಲೀಟರ್ ನಿಂದ 32.9 ರು ಗೇರಿದೆ. ಡೀಸೆಲ್ ಅಬಕಾರಿ ಸುಂಕ 15.83 ರು ನಿಂದ 31.8 ರು ಗೇರಿದೆ. ಸುಂಕ ಏರಿಕೆ ಬಳಿಕ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ 3.35 ಲಕ್ಷ ಕೋಟಿ ರು ದಕ್ಕಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ರಾಮೇಶ್ವರ ತೇಲಿ ಸಂಸತ್ತಿನಲ್ಲಿ ವಿವರಿಸಿದ್ದಾರೆ.

English summary
Petrol price has breached ₹100-for-a-litre mark in at least 19 states and Union Territories in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X