• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಳೆದ 9 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಎಷ್ಟಾಯ್ತು?

|

ನವದೆಹಲಿ, ನ. 29: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಏರುಪೇರು, ಲಸಿಕೆ ಸಂಶೋಧನೆ ಸುದ್ದಿ, ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡುತ್ತಿವೆ. ಭಾನುವಾರ(ನ.29) ಕೂಡಾ ಇಂಧನ ದರ ಏರಿಕೆಯಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಮಾಹಿತಿ ಪ್ರಕಾರ, ಕಳೆದ 9 ದಿನಗಳಲ್ಲಿ 8 ದಿನ ಬೆಲೆ ಏರಿಕೆ ಕಾಣಲಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್ 82ರು ದಾಟಿದ್ದರೆ, ಡೀಸೆಲ್ ದರ 72 ರು ದಾಟಿದೆ. ಶನಿವಾರದಂದು ಪೆಟ್ರೋಲ್ 24 ಪೈಸೆ/ಲೀಟರ್ ಹಾಗೂ ಡೀಸೆಲ್ 27 ಪೈಸೆ/ಲೀಟರ್ ಏರಿಕೆ ಕಂಡಿತ್ತು.

ಮತ್ತಷ್ಟು ತುಟ್ಟಿಯಾದ ಪೆಟ್ರೋಲ್, ಡೀಸೆಲ್ : ಪ್ರಮುಖ ನಗರಗಳ ದರ ಇಲ್ಲಿದೆ

ಪರಿಷ್ಕೃತ ದರದ ಪ್ರಕಾರ ದೆಹಲಿಯಲ್ಲಿ 81.89ರು/ಲೀಟರ್ ಇದ್ದ ಪೆಟ್ರೋಲ್ ದರ 82.13ರು ಆಗಿದೆ. ಇದೇ ವೇಳೆ ಡೀಸೆಲ್ ದರ ಪ್ರತಿ ಲೀಟರ್ 71.86ರು ನಿಂದ 72.13ರು ಪ್ರತಿ ಲೀಟರ್ ಆಗಿದೆ.

ನವೆಂಬರ್ 20 ರಿಂದ ರೀಟೈಲರ್ಸ್ ಬೆಲೆ ಏರಿಕೆ ಮಾಡುತ್ತಿದ್ದು, ಒಟ್ಟಾರೆ, 9ದಿನಗಳಲ್ಲಿ ಪೆಟ್ರೋಲ್ ಬೆಲೆ 1.07ರು ಪ್ರತಿ ಲೀಟರ್ ಹಾಗೂ ಡೀಸೆಲ್ 1.67 ರು ಪ್ರತಿ ಲೀಟರ್ ಏರಿಕೆ ಕಂಡಿದೆ. ಸೆಪ್ಟೆಂಬರ್ 22ರಿಂದ ಪೆಟ್ರೋಲ್ ದರ ಹಾಗೂ ಅಕ್ಟೋಬರ್ 2ರಿಂದ ಡೀಸೆಲ್ ದರದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿರಲಿಲ್ಲ. ಆದರೆ, ಈಗ ಸತತ ಏರಿಕೆಯಿಂದ ವಾಹನ ಸವಾರರು ಕಂಗಾಲಾಗಿದ್ದಾರೆ.

ಕೊವಿಡ್ 19 ಸಾಂಕ್ರಾಮಿಕ ಸಂದರ್ಭದಲ್ಲಿ ಜೂನ್ 30 ರಿಂದ ಆಗಸ್ಟ್ 15ರ ಅವಧಿಯಲ್ಲಿ ತೈಲ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಸತತ 85ದಿನಗಳ ಕಾಲ (ಮಾರ್ಚ್ 17 ರಿಂದ ಜೂನ್ 6 ಸೇರಿಸಿ) ವಾಹನ ಸವಾರರ ಹಿತ ಕಾಯಲಾಗಿತ್ತು.

English summary
Petrol price crossed Rs 82-mark in Delhi and diesel surpassed Rs 72 a litre on November 19.In nine days, petrol price has gone up by Rs 1.07 per litre and diesel rate has risen by Rs 1.67.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X