ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದಲ್ಲಿ ಎಷ್ಟಿದೆ ನೋಡಿ?
ಬೆಂಗಳೂರು, ಸೆ. 6: ಶನಿವಾರದಂದು ಡಿಸೇಲ್ ಬೆಲೆ ಕೆಲ ನಗರಗಳಲ್ಲಿ ತುಸು ಇಳಿಕೆ ಕಂಡಿದ್ದು ಬಿಟ್ಟರೆ, ಪೆಟ್ರೋಲ್, ಡೀಸೆಲ್ ದರ ಮೂರು ದಿನಗಳಿಂದ ಸ್ಥಿರವಾಗಿದೆ. ಭಾನುವಾರ(ಸೆ. 6)ದಂದು ನವದೆಹಲಿ, ಕೋಲ್ಕತಾ, ಮುಂಬೈ, ಚೆನ್ನೈನಗರಗಳಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 82.09ರು ಹಾಗೂ ಡೀಸೆಲ್ ದರ ಬಹುದಿನಗಳಿಂದ 73.27ರು(13 ಪೈಸೆ ಏರಿಕೆ) ನಂತೆ ಮುಂದುವರೆದಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.
ಪೆಟ್ರೋಲ್, ಡೀಸೆಲ್: ಯಾವ ನಗರದಲ್ಲಿ ಎಷ್ಟಿದೆ ದರ?
ದೆಹಲಿಯಲ್ಲಿ ಒಟ್ಟಾರೆ ಕಳೆದ 20 ದಿನಗಳಲ್ಲಿ 17 ದಿನಗಳ ಕಾಲ ಪೆಟ್ರೋಲ್ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಕಾಣುತ್ತಿದ್ದು, ಬ್ರೆಂಟ್ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಬೆಲೆ 42.66 ಯುಎಸ್ ಡಾಲರ್ ನಷ್ಟಿದೆ.
ಸೆಪ್ಟೆಂಬರ್ 06ರ ದರ ಪಟ್ಟಿ ಪೆಟ್ರೋಲ್ ಹಾಗೂ ಡೀಸೆಲ್ (ಪ್ರತಿ ಲೀಟರ್, ಬೆಲೆ ರು ಗಳಲ್ಲಿ)
ನಗರ-ಪೆಟ್ರೋಲ್-ಡೀಸೆಲ್
ದೆಹಲಿ-82.08-73.27
ಕೋಲ್ಕತಾ-83.57-76.77
ಮುಂಬೈ-88.73-79.81
ಚೆನ್ನೈ-85.11-78.58
ಬೆಂಗಳೂರು-84.75-77.58
ಡೀಸೆಲ್ ಬೆಲೆ :
ಬೆಂಗಳೂರಲ್ಲಿ ಸೋಮವಾರದಂದು 28 ಪೈಸೆ ಇಳಿಕೆಯಾಗಿ 77.88 ರು ಆಗಿತ್ತು. ಮಂಗಳವಾರ ಯಾವುದೇ ಬದಲಾವಣೆಯಾಗಿಲ್ಲ. ಸೆ. 3ರಂದು 17 ಪೈಸೆ ಇಳಿಕೆಯಾಗಿತ್ತು. ಸೆ. 5ರಂದು 13 ಪೈಸೆ ಇಳಿಕೆಯಾಗಿ ಇಂದು(ಸೆ. 6) ರಂದು 77.58 ರು ಪ್ರತಿ ಲೀಟರ್ ನಂತೆ ಮಾರಾಟವಾಗುತ್ತಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳಲ್ಲಿನ ಇಂಧನ ದರ ಎಷ್ಟಿದೆ ತಿಳಿದುಕೊಳ್ಳಲು ಕ್ಲಿಕ್ ಮಾಡಿ