ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲೆ ಏರಿಕೆ ಬಳಿಕ ಪೆಟ್ರೋಲ್, ಡೀಸೆಲ್ ಸ್ಥಿರ, ಬದಲಾವಣೆಯಿಲ್ಲ

|
Google Oneindia Kannada News

ನವದೆಹಲಿ, ಜನವರಿ 10: ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸುಮಾರು ಒಂದು ತಿಂಗಳ ಅಂತರದ ಬಳಿಕ ಕಳೆದ ವಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತದಲ್ಲೂ ಇಂಧನ ದರದಲ್ಲಿ ಸತತವಾಗಿ ವ್ಯತ್ಯಾಸ ಕಂಡು ಬಂದಿತ್ತು. ಆದರೆ, ಇಂಧನ ದರ ಸ್ಥಿರತೆ ಪಡೆದುಕೊಂಡಿದ್ದು, ಭಾನುವಾರ (ಜನವರಿ 10)ದಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ದೆಹಲಿಯಲ್ಲಿ ಭಾನುವಾರದಂದು ಪೆಟ್ರೋಲ್ ದರ ಪ್ರತಿ ಲೀಟರ್ 84.20 ರು ಹಾಗೂ ಡೀಸೆಲ್ ದರ 74.38 ರು ಪ್ರತಿ ಲೀಟರ್ ನಷ್ಟಿದೆ.

ಜನವರಿ 7ರಂದು ಪೆಟ್ರೋಲ್ ದರ ಲೀಟರ್‌ಗೆ 26 ಪೈಸೆ ಹೆಚ್ಚಾಗಿ 83.97ರೂಪಾಯಿಗೆ ತಲುಪಿತ್ತು, ಡೀಸೆಲ್ ದರವು ಲೀಟರ್‌ಗೆ 25 ಪೈಸೆ ಏರಿಕೆಗೊಂಡು 74.12ರೂಪಾಯಿಗೆ ತಲುಪಿತ್ತು. 2018ರಲ್ಲಿ ಪೆಟ್ರೋಲ್ ಬೆಲೆ ದಾಖಲೆಯ 84ರು ಮುಟ್ಟಿತ್ತು. ಇದೇ ರೀತಿ ಡೀಸೆಲ್ ಕೂಡಾ 75.45 ರು ದಾಟಿದ್ದೇ ದಾಖಲೆಯಾಗಿತ್ತು. ಇದರ ಬೆನ್ನಲ್ಲೇ ಮುಂಬೈ ಸೇರಿದಂತೆ ಕೆಲ ಮೆಟ್ರೋಗಳಲ್ಲಿ 100 ರು ಗಡಿ ದಾಟಿತ್ತು.

Petrol, Diesel Rates on major cities Sunday Jan 10

ಮಾರ್ಚ್ 2020ರಲ್ಲಿ ಅಬಕಾರಿ ಸುಂಕ ಏರಿಕೆ ಮಾಡಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 13ರು ಹಾಗೂ ಡೀಸೆಲ್ 15 ರು ಏರಿಕೆಗೆ ಕೇಂದ್ರ ಸರ್ಕಾರ ಕಾರಣವಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 1.6 ಲಕ್ಷ ಕೋಟಿ ರು ಸಂಗ್ರಹವಾಗಿತ್ತು.

ಮೇ 2020ರಿಂದ ಇಲ್ಲಿ ತನಕ ಪೆಟ್ರೋಲ್ ಬೆಲೆ 14. 28 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 11.83 ರು ಪ್ರತಿ ಲೀಟರ್ ನಷ್ಟು ಏರಿಕೆ ಕಂಡಿದೆ. ಆದರೆ, ಈಗ ಸುಂಕ ಇಳಿಸುವಂತೆ ವಾಹನ ಸವಾರರು, ವಿಪಕ್ಷಗಳಿಂದ ಸತತವಾಗಿ ಆಗ್ರಹಿಸುತ್ತಿದ್ದು ಇಂಧನ ಇಲಾಖೆ ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ. ಇಂಧನ ದರದಲ್ಲಿ ಸುಮಾರು 5 ರು ನಷ್ಟು ಇಳಿಕೆ ಸಾಧ್ಯತೆಯಿದೆ ಎಂಬ ಸುದ್ದಿ ಹಬ್ಬಿದೆ.

ಭಾನುವಾರ (ಜನವರಿ 10)ದ ದರ

ನಗರ-ಪೆಟ್ರೋಲ್-ಡೀಸೆಲ್

* ದೆಹಲಿ: 84.207ರು- 74.38 ರು
* ಮುಂಬೈ: 90.83 ರು - 81.07 ರು
* ಚೆನ್ನೈ: 86.97ರು -79.72 ರು
* ಕೋಲ್ಕತಾ: 85.68ರು -77.97 ರು
* ಬೆಂಗಳೂರು: 87.04ರು-78.87ರು

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತುಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary
Petrol price on Sunday (Jan 10) unchanged after reaching all-time high recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X