ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 4ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ: ತೈಲ ಬೆಲೆ ಎಲ್ಲಿಗೆ ಹೋಗಿ ತಲುಪುತ್ತೆ?

|
Google Oneindia Kannada News

ನವದೆಹಲಿ, ಡಿಸೆಂಬರ್ 05: ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸತತ 4ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿವೆ. ಈ ಮೂಲಕ ದೇಶದ ಪ್ರಮುಖ ನಗರಗಳಲೆಲ್ಲಾ ತೈಲ ದರವು ಮತ್ತಷ್ಟು ತುಟ್ಟಿಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 27 ಪೈಸೆ ಹೆಚ್ಚಾಗಿ 83.13 ರೂಪಾಯಿಗೆ ತಲುಪಿದ್ದು, ಡೀಸೆಲ್ ದರವು ಲೀಟರ್‌ಗೆ 25 ಪೈಸೆ ಏರಿಕೆಗೊಂಡು 73.32 ರೂಪಾಯಿಗೆ ತಲುಪಿದೆ.

ಎರಡು ತಿಂಗಳ ವಿರಾಮದ ಬಳಿಕ ದೇಶೀಯವಾಗಿ ನವೆಂಬರ್ 20ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಏರಿಕೆ ಮಾಡಿದವು. ನಂತರದ ದಿನಗಳಲ್ಲಿ ತೈಲ ದರವು ಸತತ ಏರಿಕೆ ಕಂಡು ಬಂದಿದೆ.

 ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ತುಟ್ಟಿ: ಬೆಂಗಳೂರಿನಲ್ಲಿ ಲೀಟರ್‌ಗೆ 90 ರೂ. ತಲುಪುತ್ತಾ? ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ತುಟ್ಟಿ: ಬೆಂಗಳೂರಿನಲ್ಲಿ ಲೀಟರ್‌ಗೆ 90 ರೂ. ತಲುಪುತ್ತಾ?

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಡಿಸೆಂಬರ್ 05: 85.91 (28 ಪೈಸೆ ಏರಿಕೆ)

ಡಿಸೆಂಬರ್ 04: 85.63

ಡಿಸೆಂಬರ್ 03: 85.42

ಡಿಸೆಂಬರ್ 02: 85.25

ಡೀಸೆಲ್ (ಪ್ರತಿ ಲೀಟರ್)

ಡಿಸೆಂಬರ್ 05: 77.73 (27 ಪೈಸೆ ಏರಿಕೆ)

ಡಿಸೆಂಬರ್ 04: 77.46

ಡಿಸೆಂಬರ್ 03: 77.22

ಡಿಸೆಂಬರ್ 02: 77.01

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಡಿಸೆಂಬರ್ 05: 83.13 (27 ಪೈಸೆ ಏರಿಕೆ)

ಡಿಸೆಂಬರ್ 04: 82.86

ಡಿಸೆಂಬರ್ 03: 82.66

ಡಿಸೆಂಬರ್ 02: 82.49


ಡೀಸೆಲ್ (ಪ್ರತಿ ಲೀಟರ್)

ಡಿಸೆಂಬರ್ 05: 73.32 (25 ಪೈಸೆ ಏರಿಕೆ)

ಡಿಸೆಂಬರ್ 04: 73.07

ಡಿಸೆಂಬರ್ 03: 72.84

ಡಿಸೆಂಬರ್ 02: 72.65

ಏರುತ್ತಲೇ ಸಾಗಿದ ಪೆಟ್ರೋಲ್, ಡೀಸೆಲ್ ದರ: ಬೆಂಗಳೂರು ಸೇರಿ ಯಾವ ನಗರದಲ್ಲಿ ಎಷ್ಟಿದೆ ರೇಟ್?ಏರುತ್ತಲೇ ಸಾಗಿದ ಪೆಟ್ರೋಲ್, ಡೀಸೆಲ್ ದರ: ಬೆಂಗಳೂರು ಸೇರಿ ಯಾವ ನಗರದಲ್ಲಿ ಎಷ್ಟಿದೆ ರೇಟ್?

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಡಿಸೆಂಬರ್ 05: 89.78 (26 ಪೈಸೆ ಏರಿಕೆ)

ಡಿಸೆಂಬರ್ 04: 89.52

ಡಿಸೆಂಬರ್ 03: 89.33

ಡಿಸೆಂಬರ್ 02: 89.16


ಡೀಸೆಲ್ (ಪ್ರತಿ ಲೀಟರ್)

ಡಿಸೆಂಬರ್ 05: 79.93 (27 ಪೈಸೆ ಏರಿಕೆ)

ಡಿಸೆಂಬರ್ 04: 79.66

ಡಿಸೆಂಬರ್ 03: 79.42

ಡಿಸೆಂಬರ್ 02: 79.22

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಡಿಸೆಂಬರ್ 05: 86.01 (15 ಪೈಸೆ ಏರಿಕೆ)

ಡಿಸೆಂಬರ್ 04: 85.76

ಡಿಸೆಂಬರ್ 03: 85.69

ಡಿಸೆಂಬರ್ 02: 85.44


ಡೀಸೆಲ್ (ಪ್ರತಿ ಲೀಟರ್)

ಡಿಸೆಂಬರ್ 05: 78.70 (16 ಪೈಸೆ ಏರಿಕೆ)

ಡಿಸೆಂಬರ್ 04: 78.45

ಡಿಸೆಂಬರ್ 03: 78.33

ಡಿಸೆಂಬರ್ 02: 78.06

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಡಿಸೆಂಬರ್ 05: 86.46 (28 ಪೈಸೆ ಏರಿಕೆ)

ಡಿಸೆಂಬರ್ 04: 86.18

ಡಿಸೆಂಬರ್ 03: 85.97

ಡಿಸೆಂಬರ್ 02: 85.80


ಡೀಸೆಲ್ (ಪ್ರತಿ ಲೀಟರ್)

ಡಿಸೆಂಬರ್ 05: 80.00 (27 ಪೈಸೆ ಏರಿಕೆ)

ಡಿಸೆಂಬರ್ 04: 79.73

ಡಿಸೆಂಬರ್ 03: 79.48

ಡಿಸೆಂಬರ್ 02: 79.27

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary
Petrol Diesel Rate up on Saturday, Petrol Up By 27 Paise Per Ltr and Diesel 25 Paise Per Ltr . India's Major cities latest Petrol and diesel rates here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X