ಸತತ 5ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ
ನವದೆಹಲಿ, ನವೆಂಬರ್ 24: ಭಾರತದಲ್ಲಿ ಎರಡು ತಿಂಗಳು ಕಾಲ ತಟಸ್ಥವಾಗಿದ್ದ ತೈಲ ದರಗಳು ದಿಢೀರನೆ ಏರಲಾರಂಭಿಸಿದ್ದು, ಸತತ ಐದನೇ ದಿನ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಿಸಿವೆ.
ದೆಹಲಿಯಲ್ಲಿ ಲೀಟರ್ಗೆ ಪೆಟ್ರೋಲ್ ದರವು 06 ಪೈಸೆ ಏರಿಕೆಗೊಂಡು 81.59 ರೂಪಾಯಿಗೆ ತಲುಪಿದೆ. ಡೀಸೆಲ್ ದರವು 16 ಪೈಸೆ ಹೆಚ್ಚಾಗಿ 71.41 ರೂಪಾಯಿಗೆ ಮುಟ್ಟಿದೆ.
ತೈಲ ದರ ಮತ್ತೆ ಹೆಚ್ಚಳ: ಸತತ 4ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ
ಆಗಸ್ಟ್ ತಿಂಗಳವರೆಗೂ ಸತತ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ದರಗಳು ನಂತರದ ದಿನಗಳಲ್ಲಿ ಇಳಿಮುಖ ಸಾಧಿಸಿದ್ದವು. ಎರಡು ತಿಂಗಳು ಕಾಲ ತೈಲ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡಿರಲಿಲ್ಲ. ಆದರೆ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ನವೆಂಬರ್ 20ರಂದು ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಎರಡು ತಿಂಗಳ ವಿರಾಮದ ನಂತರ ಹೆಚ್ಚಿಸಿದವು.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಸತತ ಮೂರನೇ ದಿನದಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನವೆಂಬರ್ 24: 84.31 (06 ಪೈಸೆ ಏರಿಕೆ)
ನವೆಂಬರ್ 23: 84.25
ನವೆಂಬರ್ 22: 84.18
ನವೆಂಬರ್ 21: 84.10
ಡೀಸೆಲ್
(ಪ್ರತಿ
ಲೀಟರ್)
ನವೆಂಬರ್ 24: 75.70 (17 ಪೈಸೆ ಏರಿಕೆ)
ನವೆಂಬರ್ 23: 75.53
ನವೆಂಬರ್ 22: 75.34
ನವೆಂಬರ್ 21: 75.14
ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನವೆಂಬರ್ 24: 81.59 (06 ಪೈಸೆ ಏರಿಕೆ)
ನವೆಂಬರ್ 23: 81.53
ನವೆಂಬರ್ 22: 81.46
ನವೆಂಬರ್ 21: 81.38
ಡೀಸೆಲ್
(ಪ್ರತಿ
ಲೀಟರ್)
ನವೆಂಬರ್ 24: 71.41 (16 ಪೈಸೆ ಏರಿಕೆ)
ನವೆಂಬರ್ 23: 71.25
ನವೆಂಬರ್ 22: 71.07
ನವೆಂಬರ್ 21: 70.88
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನವೆಂಬರ್ 24: 88.29 (06 ಪೈಸೆ ಏರಿಕೆ)
ನವೆಂಬರ್ 23: 88.23
ನವೆಂಬರ್ 22: 88.16
ನವೆಂಬರ್ 21: 88.09
ಡೀಸೆಲ್
(ಪ್ರತಿ
ಲೀಟರ್)
ನವೆಂಬರ್ 24: 77.90 (17 ಪೈಸೆ ಏರಿಕೆ)
ನವೆಂಬರ್ 23: 77.73
ನವೆಂಬರ್ 22: 77.54
ನವೆಂಬರ್ 21: 77.34
ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನವೆಂಬರ್ 24: 84.64 (05 ಪೈಸೆ ಏರಿಕೆ)
ನವೆಂಬರ್ 23: 84.59
ನವೆಂಬರ್ 22: 84.53
ನವೆಂಬರ್ 21: 84.46
ಡೀಸೆಲ್
(ಪ್ರತಿ
ಲೀಟರ್)
ನವೆಂಬರ್ 24: 76.98 (16 ಪೈಸೆ ಏರಿಕೆ)
ನವೆಂಬರ್ 23: 76.72
ನವೆಂಬರ್ 22: 76.55
ನವೆಂಬರ್ 21: 76.37
ಹೈದ್ರಾಬಾದ್ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನವೆಂಬರ್ 24: 84.86 (06 ಪೈಸೆ ಏರಿಕೆ)
ನವೆಂಬರ್ 23: 84.80
ನವೆಂಬರ್ 22: 84.73
ನವೆಂಬರ್ 21: 84.64
ಡೀಸೆಲ್
(ಪ್ರತಿ
ಲೀಟರ್)
ನವೆಂಬರ್ 24: 77.93 (18 ಪೈಸೆ ಏರಿಕೆ)
ನವೆಂಬರ್ 23: 77.75
ನವೆಂಬರ್ 22: 77.56
ನವೆಂಬರ್ 21: 77.35
Recommended Video
ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.