ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಚ್ಚಾತೈಲ ದರ 110 USD, ಭಾರತದಲ್ಲಿ ಇಂಧನ ದರ ಏರಿಕೆ?

|
Google Oneindia Kannada News

ರಷ್ಯಾ- ಉಕ್ರೇನ್ ಯುದ್ಧದ ಹಿನ್ನೆಲೆ ಏರಿಕೆ ಕಂಡಿದ್ದ ಜಾಗತಿಕ ಕಚ್ಚಾತೈಲ ಬೆಲೆ ಕಳೆದ 30 ದಿನಗಳಲ್ಲಿ ಏರಿಳಿತ ಕಂಡರೂ ಭಾರತ ಇಂಧನ ದರ ಸ್ಥಿರವಾಗಿದೆ. ಆದರೆ, ಈಗ ಕಚ್ಚಾತೈಲ ಬೆಲೆ 110 ಯುಎಸ್ ಡಾಲರ್ ಪ್ರತಿ ಬ್ಯಾರೆಲ್ ದಾಟಿದ್ದು, ಇಂಧನ ದರ ಏರಿಕೆ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಪಂಚ ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ದೇಶದ ಮೂರು ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರ ಪರಿಷ್ಕರಣೆಯನ್ನು ಸ್ಥಗಿತ ಮಾಡಿದ್ದವು. ಆದರೆ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ದೇಶದಲ್ಲಿ ಪ್ರತಿದಿನ ಇಂಧನ ದರ ಪರಿಷ್ಕರಣೆ ಮಾಡಲು ಆರಂಭ ಮಾಡಿದರೂ ಹೆಚ್ಚಿನ ಪರಿಷ್ಕರಣೆ ಕಂಡು ಬಂದಿರಲಿಲ್ಲ.

ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಕಳೆದ ಮಾರ್ಚ್ 22ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು. ಸುಮಾರು 10 ರು ಬೆಲೆ ಏರಿಕೆ ಬಳಿಕ ಇಂಧನ ದರ ಬಹುತೇಕ ಒಂದು ತಿಂಗಳಿನಿಂದ ಸ್ಥಿರವಾಗಿದೆ. ಭಾರತದಲ್ಲಿ ಇಂಧನ ಆಮದು ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ರಾಜ್ಯಗಳಲ್ಲಿ ಅಬಕಾರಿ ಸುಂಕಗಳನ್ನು ಸೇರಿಸಲಾಗುತ್ತದೆ, ನಂತರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ನಡುವೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡುವ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ.

ಸೆಸ್ ತಗ್ಗಿಸುವಂತೆ ರಾಜ್ಯಗಳಿಗೆ ಮನವಿ

ಸೆಸ್ ತಗ್ಗಿಸುವಂತೆ ರಾಜ್ಯಗಳಿಗೆ ಮನವಿ

ಪ್ರಧಾನಿ ಮೋದಿ ಕೂಡಾ ಇತ್ತೀಚೆಗೆ ಅಬಕಾರಿ ಸುಂಕ, ಸೆಸ್ ತಗ್ಗಿಸುವಂತೆ ರಾಜ್ಯಗಳಿಗೆ ಮನವಿ ಮಾಡಿದ್ದಾರೆ. ಆದರೆ, ಈಗಾಗಲೇ ಅನೇಕ ರಾಜ್ಯಗಳು ಒಂದು ಸುತ್ತು ತೆರಿಗೆ ಕಡಿತಗೊಳಿಸಿದ್ದು, ಮತ್ತೊಮ್ಮೆ ಸೆಸ್ ಇಳಿಸಿದರೆ ಬೊಕ್ಕಸಕ್ಕೆ ಬರುವ ಮೊತ್ತಕ್ಕೆ ಕುತ್ತಾಗುತ್ತದೆ ಎಂದು ಪ್ರತಿಕ್ರಿಯಿಸಿವೆ. ಭಾರತದಲ್ಲೇ ಅತ್ಯಧಿಕ ಇಂಧನ ದರ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ದಾಖಲಾಗಿದೆ. ಪೆಟ್ರೋಲ್ 122.67 ರು ಪ್ರತಿ ಲೀಟರ್ ಹಾಗೂ ಡೀಸೆಲ್ 105.11 ರು ನಷ್ಟಿದೆ.

ಪ್ರತಿ ಬ್ಯಾರೆಲ್‌ಗೆ 140 ಯುಎಸ್ ಡಾಲರ್ ಗಡಿ ಸಮೀಪಿಸಿತ್ತು

ಪ್ರತಿ ಬ್ಯಾರೆಲ್‌ಗೆ 140 ಯುಎಸ್ ಡಾಲರ್ ಗಡಿ ಸಮೀಪಿಸಿತ್ತು

ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ದಶಕದ ಬಳಿಕ ಮೊದಲ ಬಾರಿಗೆ ಪ್ರತಿ ಬ್ಯಾರೆಲ್‌ಗೆ 140 ಯುಎಸ್ ಡಾಲರ್ ಗಡಿ ಸಮೀಪಿಸಿತ್ತು. ಪರಿಣಾಮವಾಗಿ ಭಾರತದ ಸರ್ಕಾರಿ ತೈಲ ಕಂಪನಿಗಳು ಇಂಧನ ದರವನ್ನು ಏರಿಕೆ ಮಾಡುತ್ತಿದ್ದವು. ಆದರೆ ಇಂದು (ಶುಕ್ರವಾರ, ಮೇ 6) ಇಂಧನ ದರ ಏರಿಕೆಯಾಗಿಲ್ಲ.

ವರದಿಗಳ ಪ್ರಕಾರ, ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 111.7 ಯುಎಸ್ ಡಾಲರ್ ನಂತೆ ವ್ಯವಹಾರ ನಡೆಸುತ್ತಿದೆ. ಇದೇ ವೇಳೆ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಮೇಟ್ (WTI) ಕಚ್ಚಾತೈಲ 80 ಸೆಂಟ್ ಏರಿಕೆಯಾಗಿ, 109.0 ಪ್ರತಿ ಬ್ಯಾರೆಲ್ ನಂತೆ ವ್ಯವಹರಿಸಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

 ಬೆಲೆ ಏರಿಕೆ ಸೂಚನೆ ನೀಡಿದ್ದರು

ಬೆಲೆ ಏರಿಕೆ ಸೂಚನೆ ನೀಡಿದ್ದರು

ಮುಖ್ಯ ಆರ್ಥಿಕ ಸಲಹೆಗಾರರು ಕಳೆದ ತಿಂಗಳು ಹಣದುಬ್ಬರ ಹಾಗೂ ಇಂಧನ ಪೂರೈಕೆ ವ್ಯತ್ಯಯದ ಬಗ್ಗೆ ಮಾತನಾಡಿ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ USD 110 ಕ್ಕಿಂತ ಕಡಿಮೆ ಇರುವವರೆಗೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗುವುದಿಲ್ಲ ಎಂದು ಹೇಳಿದ್ದರು. ಕಚ್ಚಾ ತೈಲದ ಬೆಲೆ USD 110 ಕ್ಕಿಂತ ಹೆಚ್ಚಿದ್ದರೆ, ಆಗ ಸರ್ಕಾರ, ತೈಲ ಕಂಪನಿಗಳು ಮತ್ತು ಗ್ರಾಹಕರು ಒಟ್ಟಾಗಿ ಹೊರೆಯನ್ನು ಹೊರಬೇಕಾಗುತ್ತದೆ ಎಂದು ಬೆಲೆ ಏರಿಕೆ ಸೂಚನೆ ನೀಡಿದ್ದರು.

ಇತ್ತೀಚಿನ ಬೆಲೆಯನ್ನು ಪರಿಶೀಲಿಸುವುದು ಹೇಗೆ?

ಇತ್ತೀಚಿನ ಬೆಲೆಯನ್ನು ಪರಿಶೀಲಿಸುವುದು ಹೇಗೆ?

ನೀವು ಎಸ್‌ಎಂಎಸ್ ಮೂಲಕ ಪೆಟ್ರೋಲ್, ಡೀಸೆಲ್‌ನ ದೈನಂದಿನ ದರವನ್ನು ಸಹ ತಿಳಿಯಬಹುದು (ಪ್ರತಿದಿನ ಡೀಸೆಲ್ ಪೆಟ್ರೋಲ್ ಬೆಲೆಯನ್ನು ಹೇಗೆ ಪರಿಶೀಲಿಸುವುದು). ಇಂಡಿಯನ್ ಆಯಿಲ್ ಗ್ರಾಹಕರು RSP ಎಂದು ಟೈಪಿಸಿ 9224992249 ಸಂಖ್ಯೆಗೆ ಕಳುಹಿಸುವ ಮೂಲಕ ಮತ್ತು BPCL ಗ್ರಾಹಕರು RSP ಎಂದು ಟೈಪಿಸಿ 9223112222 ಸಂಖ್ಯೆಗೆ ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಇದೇ ರೀತಿ, HPCL ಗ್ರಾಹಕರು HPPrice ಎಂದು ಟೈಪಿಸಿ 9222201122 ಸಂಖ್ಯೆಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು. ಪ್ರಮುಖ ನಗರಗಳ ಬೆಲೆ ವಿವರ ಇಲ್ಲಿದೆ ನೋಡಿ

Recommended Video

ಚೆನ್ನೈ ಮತ್ತು ಮುಂಬೈಗೆ ಸಿಕ್ಕಿರೋ ಪ್ಲೇಆಫ್ ಕೊನೇ ಅವಕಾಶದಲ್ಲಿ ಸಕ್ಸಸ್ ಯಾರದಾಗುತ್ತೆ? | Oneindia Kannada

English summary
Chief Economic Advisor in statement last month said as long as price of crude is less than USD 110 per barrel, petrol-diesel prices will not increase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X