ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 13: ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತೆ ಏರಿಕೆ ಕಂಡಿದೆ.

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 5 ಪೈಸೆ ಏರಿಕೆಯಾಗಿದೆ. ಈ ಮೂಲಕ ಲೀಟರ್​​ ಪೆಟ್ರೋಲ್​​ಗೆ 74.16 ರೂ., ಡೀಸೆಲ್‌ ದರ 67.36 ರೂ. ಆಗಿದೆ. ಕಳೆದ ಐದು ದಿನಗಳಿಂದ ಪೆಟ್ರೋಲ್-ಡೀಸೆಲ್​​ ಬೆಲೆಗಳು ಏರಿಕೆಯಾಗುತ್ತಿದೆ.

ಭಾರತ ಹಾಗೂ ನೇಪಾಳ ನಡುವೆ ಪೆಟ್ರೋಲಿಯಂ ಪೈಪ್ ಲೈನ್ಭಾರತ ಹಾಗೂ ನೇಪಾಳ ನಡುವೆ ಪೆಟ್ರೋಲಿಯಂ ಪೈಪ್ ಲೈನ್

ಪೆಟ್ರೋಲ್ ಬೆಲೆ ಏರಿಕೆಗೆ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಆಗುತ್ತಿರುವ ಏರಿಕೆಯೇ ಪ್ರಮುಖ ಕಾರಣವಾಗಿದೆ. ಪ್ರಮುಖ ತೈಲ ಮಾರುಕಟ್ಟೆಯಾದ ಬ್ರೆಂಟ್ ಕ್ರೂಡ್​ನಲ್ಲಿ ಬ್ಯಾರೆಲ್ ತೈಲವು ರೂ. 3967.00 ಕ್ಕೆ ತಲುಪಿದೆ.

Petrol Diesel Prices To Rise In Karnataka

ಪೆಟ್ರೋಲ್​​-ಡೀಸೆಲ್​​ ದರ ಸ್ವಲ್ಪ ಹೆಚ್ಚಾಗಿದ್ದು, ನಿರೀಕ್ಷೆಯಂತೆ ವಾಹನ ಸವಾರರಿಗೆ ತೊಂದರೆ ಆರಂಭವಾಗಿದೆ. ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 71.76 ರೂ., ಡೀಸೆಲ್‌ ದರ 65.14 ರೂ. ಇದೆ.

ಚೆನ್ನೈನಲ್ಲಿ ಪೆಟ್ರೋಲ್‌ ದರ 74.56 ರೂ. ಮತ್ತು ಡೀಸೆಲ್‌ ದರ 68.84 ರೂ. ಆಗಿದೆ. ಅಲ್ಲದೇ ದೀದಿ ನಾಡು ಪಶ್ಚಿಮ ಬಂಗಾಳ ಕೋಲ್ಕತಾದಲ್ಲಿ ಪೆಟ್ರೋಲ್‌ ಲೀಟರ್​​ಗೆ 74.49 ರೂ. ಡೀಸೆಲ್‌ ಲೀಟರ್​​ಗೆ 67.55 ರೂ. ಇದೆ. ಹಾಗೆಯೇ ಮುಂಬೈನಲ್ಲಿ ಪೆಟ್ರೋಲ್‌ ದರ 77.45 ರೂ., ಡೀಸೆಲ್‌ ದರ 68.32 ರೂ. ಇದೆ.

ಪೆಟ್ರೋಲ್‌ಗೆ ಹೆಲ್ಮೆಟ್ ಕಡ್ಡಾಯ: ಕ್ಯಾರೇ ಎನ್ನದ ಸವಾರರು, ಬಂಕ್ ಮಾಲೀಕರುಪೆಟ್ರೋಲ್‌ಗೆ ಹೆಲ್ಮೆಟ್ ಕಡ್ಡಾಯ: ಕ್ಯಾರೇ ಎನ್ನದ ಸವಾರರು, ಬಂಕ್ ಮಾಲೀಕರು

ಇತ್ತೀಚೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಿಲ್ಲದ ಕಾರಣ ಕೊಂಚ ನಿರಾಳವಾಗಿದ್ದ ವಾಹನ ಸವಾರರಿಗೆ ಕಹಿಸುದ್ದಿ ಸಿಕ್ಕಿತ್ತು. ಮೂರು ತಿಂಗಳ ಮುನ್ನ ಬೆಲೆ ಏರಿಕೆಗೆ ತತ್ತರಿಸಿ ಹೋಗಿದ್ದ ವಾಹನ ಸವಾರರಿಗೆ ಮತ್ತೆ ಸಂಕಷ್ಟ ಎದುರಾಗಲಿದೆ ಎನ್ನಲಾಗಿತ್ತು.

ಈ ಆಮದು ಮೇಲಿನ ನಿರ್ಬಂಧ ಹೇರಿದ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 5 ರಿಂದ 10 ರೂ.ವರೆಗೆ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ದಿನಗಳಲ್ಲಿ ಇಂಧನ ದರದಲ್ಲಿ ಭಾರೀ ಏರಿಕೆಯಾಗಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಲೀಟರ್​​ಗೆ 5 ರೂ.ನಿಂದ 10 ರೂ. ಏರಿಕೆಯಾಗಬಹುದು ಎಂದು ಹೇಳಲಾಗುತ್ತಿತ್ತು.

ಇರಾನ್​​ನಿಂದ ತೈಲ ಆಮದು ಮಾಡಿಕೊಳ್ಳಲು ಅಮೆರಿಕ ನೀಡಿದ್ದ ವಿನಾಯಿತಿ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಕಾರಣವಾಗಿದೆ.

English summary
Petrol and Diesel Price increased In Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X