ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ, ನಿಮ್ಮೂರಲ್ಲಿ ಎಷ್ಟಿದೆ?

|
Google Oneindia Kannada News

ನವದೆಹಲಿ, ಮಾರ್ಚ್ 11: ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ನಿರೀಕ್ಷೆಯಂತೆ ಪೆಟ್ರೋಲ್- ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ತೈಲ ಬೆಲೆ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ. ಸತತ 6ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆ.

ಕಳೆದ 15 ದಿನದಲ್ಲಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ಎರಡು ರುಪಾಯಿಯಷ್ಟು ಇಳಿಕೆಯಾಗಿದೆ. ಸತತ ಆರು ದಿನಗಳ ಕಾಲ ತೈಲ ಬೆಲೆ ಇಳಿಕೆಯಾಗಿದೆ. ಇನ್ನೊಂದು ವಾರಗಳ ಕಾಲ ತೈಲ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ. ಒಟ್ಟಾರೆ, ಈ ವರ್ಷದಲ್ಲಿ ಪೆಟ್ರೋಲ್ ಬೆಲೆ 4.55 ರು ಪ್ರತಿ ಲೀಟರ್ ಹಾಗೂ ಡೀಸೆಲ್ 4.7 ರು ಪ್ರತಿ ಲೀಟರ್ ನಂತೆ ಕಡಿಮೆಯಾಗಿದೆ.

ಕುಸಿತ ಕಂಡ ಕಚ್ಚಾತೈಲ ದರ, ಇನ್ನೊಂದು ವಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಕುಸಿತ ಕಂಡ ಕಚ್ಚಾತೈಲ ದರ, ಇನ್ನೊಂದು ವಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ಬುಧವಾರದಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ 2.69ರು ಕಡಿತಗೊಂಡು ಪ್ರತಿ ಲೀಟರ್ ಗೆ 70.29 ರು ನಷ್ಟಿದೆ. ಡೀಸೆಲ್ ಬೆಲೆ 2.33 ರು ಇಳಿಕೆಯಾಗಿ ಪ್ರತಿ ಲೀಟರ್ ಬೆಲೆ 63.01ರು ನಷ್ಟಾಗಿದೆ.

Petrol, diesel prices slashed Check rates on March 11

ಒಪೆಕ್ ರಾಷ್ಟ್ರಗಳ ಜೊತೆ ರಷ್ಯಾ ಜೊತೆಗಿನ ಮಾತುಕತೆ ವಿಫಲವಾಗಿದೆ. ಹೀಗಾಗಿ, ಜಾಗತಿಕವಾಗಿ ಕಚ್ಚಾತೈಲ ಬೆಲೆ ಶೇ 31ರಷ್ಟು ಇಳಿಮುಖ ಕಂಡಿದೆ. ಕೊರೊನಾ ವೈರಸ್ ಭೀತಿಯಿಂದ ತೈಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ, ತೈಲ ಉತ್ಪಾದನೆ ಹೆಚ್ಚಳಕ್ಕೆ ಸೌದಿ ಅರೇಬಿಯಾ ಮುಂದಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 72. 70 ರು ಹಾಗೂ ಡೀಸೆಲ್ ಬೆಲೆ 65. 16ರು ನಷ್ಟಿದೆ. ನಿಮ್ಮ ಊರಿನ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದರಗಳನ್ನು ತಿಳಿಯಲು ಕ್ಲಿಕ್ ಮಾಡಿ

English summary
Petrol, diesel prices slashed today(March 11) for the consecutive 6thday and prices are all set to be slashed further this week. Check rate in your cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X