ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 10ನೇ ದಿನ ಕೂಡಾ ಪೆಟ್ರೋಲ್, ಡೀಸೆಲ್ ದರ ಏರಿಕೆ

|
Google Oneindia Kannada News

ನವದೆಹಲಿ, ಫೆಬ್ರವರಿ 18: ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಗುರುವಾರ (ಫೆ.18) ಮತ್ತೊಮ್ಮೆ ತೈಲ ದರ ಏರಿಕೆ ಮಾಡಿದ್ದು, ಸತತವಾಗಿ ಹತ್ತನೇ ದಿನ ಕೂಡಾ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ. ಸರಿ ಸುಮಾರು 30-35 ಪೈಸೆಯಂತೆ ಪೆಟ್ರೋಲ್ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 25-30 ಪೈಸೆ ಪ್ರತಿ ಲೀಟರ್ ನಂತೆ ಏರಿಕೆ ಕಂಡಿದೆ. ಒಟ್ಟಾರೆ 10 ದಿನಗಳಲ್ಲಿ ಪೆಟ್ರೋಲ್ 2.91 ರು ಹಾಗೂ ಡೀಸೆಲ್ 3.43 ರು ಏರಿಕೆ ಕಂಡಿದೆ.

ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 34 ಪೈಸೆ ಏರಿಕೆಯಾಗಿ 89.88 ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 32 ಪೈಸೆ ಏರಿಕೆ ಕಂಡು 80.27 ರೂಪಾಯಿಗೆ ಮುಟ್ಟಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ.

ಈ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 100 ರುಗೆ ಏರಿಕೆಯಾಗಲು ಏನು ಕಾರಣ? ಈ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 100 ರುಗೆ ಏರಿಕೆಯಾಗಲು ಏನು ಕಾರಣ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ

ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ

ದಾಖಲೆ ಪ್ರಮಾಣದಲ್ಲಿ ಇಂಧನ ದರ ಏರಿಕೆಗೆ ಅನೇಕ ಕಾರಣಗಳಿದ್ದರೂ ಸದ್ಯಕ್ಕೆ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವೇ ಬೆಲೆ ಏರಿಕೆಗೆ ಕಾರಣ ಎಂದು ತಿಳಿದು ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 62.95 ಯುಎಸ್ ಡಾಲರ್ ನಷ್ಟಾಗಿದೆ. ಇಂಧನ ಬೇಡಿಕೆ ಸುಧಾರಣೆಯ ನಿರೀಕ್ಷೆಯಲ್ಲಿ ತೈಲ ಸಂಸ್ಥೆಗಳು ಪೂರೈಕೆ ತಡೆ ಹಿಡಿದಿರುವುದು ಜಾಗತಿಕವಾಗಿ ತೈಲ ಬೆಲೆಯಲ್ಲಿ ಭಾರಿ ವ್ಯತ್ಯಾಸಕ್ಕೆ ಕಾರಣವಾಗಿದೆ.

ವಾಹನ ಸವಾರರಿಗೆ ಕಹಿ ಸುದ್ದಿ, ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಲ್ಲ!ವಾಹನ ಸವಾರರಿಗೆ ಕಹಿ ಸುದ್ದಿ, ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಲ್ಲ!

ಅಬಕಾರಿ ಸುಂಕ ಇಳಿಕೆ ಸಾಧ್ಯವಿಲ್ಲ

ಅಬಕಾರಿ ಸುಂಕ ಇಳಿಕೆ ಸಾಧ್ಯವಿಲ್ಲ

ಈ ನಡುವೆ ಇಂಧನ ಮೇಲಿನ ಅಬಕಾರಿ ಸುಂಕ ಇಳಿಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಿವೆ. ಕೆಲ ರಾಜ್ಯಗಳು ಮಾತ್ರ ತಮ್ಮ ಪಾಲಿನ ವ್ಯಾಟ್, ಸೆಸ್ ಕಡಿಮೆ ಮಾಡಿ ಜನತೆಗೆ ನೆಮ್ಮದಿ ಸುದ್ದಿ ನೀಡಿವೆ. ರಾಜ್ಯಗಳು ಹಾಕುವ ಸೆಸ್ ಕಡಿಮೆ ಮಾಡುವುದರಿಂದ ಕನಿಷ್ಠ 2 ರಿಂದ 5 ರು ತನಕವಾದರೂ ಪ್ರತಿ ಲೀಟರ್ ಮೇಲಿನ ಬೆಲೆ ಹೊರೆಯನ್ನು ತಗ್ಗಿಸಬಹುದಾಗಿದೆ. ಕೇಂದ್ರ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ 32. 98ರು ನಷ್ಟಿದೆ. ದೆಹಲಿಯಲ್ಲಿ 19 ರು ಪ್ರತಿ ಲೀಟರ್ ವ್ಯಾಟ್, ಡೀಲರ್ ಕಮಿಷನ್ 3.67 ರು ಪ್ರತಿ ಲೀಟರ್ ಸೇರಿ ಬೆಲೆ ಇನ್ನಷ್ಟು ಏರಿಕೆಗೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಫೆಬ್ರವರಿ 18: 92.94 (30 ಪೈಸೆ ಏರಿಕೆ)

ಫೆಬ್ರವರಿ 17: 92.54

ಫೆಬ್ರವರಿ 16: 92.28

ಫೆಬ್ರವರಿ 15: 91.97
++++
ಡೀಸೆಲ್ (ಪ್ರತಿ ಲೀಟರ್)

ಫೆಬ್ರವರಿ 18: 85 (25 ಪೈಸೆ ಏರಿಕೆ)

ಫೆಬ್ರವರಿ 17: 84.75

ಫೆಬ್ರವರಿ 16: 84.49

ಫೆಬ್ರವರಿ 15: 84.12

Explained: ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿ ಏಕೆ?Explained: ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿ ಏಕೆ?

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಫೆಬ್ರವರಿ 18: 89.88 (34 ಪೈಸೆ ಏರಿಕೆ)

ಫೆಬ್ರವರಿ 17: 89.54

ಫೆಬ್ರವರಿ 16: 88.29

ಫೆಬ್ರವರಿ 15: 88.99
++++
ಡೀಸೆಲ್ (ಪ್ರತಿ ಲೀಟರ್)

ಫೆಬ್ರವರಿ 18: 80.27 (32 ಪೈಸೆ ಏರಿಕೆ)

ಫೆಬ್ರವರಿ 17: 79.95

ಫೆಬ್ರವರಿ 16: 79.70

ಫೆಬ್ರವರಿ 15: 79.35

Recommended Video

ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದಿಂದ ಬಂದ ನಾಲ್ವರಲ್ಲಿ ರೂಪಾಂತರಿ ವೈರಸ್ ಪತ್ತೆ | Oneindia Kannada
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 17: 96.00 (25 ಪೈಸೆ ಏರಿಕೆ)
ಫೆಬ್ರವರಿ 16: 95.75
ಫೆಬ್ರವರಿ 15: 95.46
ಫೆಬ್ರವರಿ 14: 95.21
++++
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 17: 86.98 (26 ಪೈಸೆ ಏರಿಕೆ)
ಫೆಬ್ರವರಿ 16: 86.72
ಫೆಬ್ರವರಿ 15: 86.34
ಫೆಬ್ರವರಿ 14: 86.04

English summary
Petrol Diesel Price Rate on Thursday Feb 18: A litre of petrol now costs Rs 89.88 in Delhi increase by 34 paise. Diesel is retailing at Rs 80.27 a litre increase by 32 paise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X