ಮತ್ತಷ್ಟು ತುಟ್ಟಿಯಾದ ಪೆಟ್ರೋಲ್, ಡೀಸೆಲ್ : ಪ್ರಮುಖ ನಗರಗಳ ದರ ಇಲ್ಲಿದೆ
ನವದೆಹಲಿ, ನವೆಂಬರ್ 28: ದಿನೇ ದಿನೇ ಪೆಟ್ರೋಲ್, ಡೀಸೆಲ್ ದರಗಳು ಏರುತ್ತಲೇ ಸಾಗಿದ್ದು, ವಾಹನ ಸವಾರರ ಜೇಬಿಗೆ ಹೊರೆಯಾಗತೊಡಗಿದೆ. ಸರ್ಕಾರಿ ತೈಲ ಸಂಸ್ಥೆಗಳು ಮತ್ತೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತೀವ್ರವಾಗಿ ಏರಿಕೆ ಮಾಡಿವೆ. ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 24 ಪೈಸೆ ಏರಿಕೆಗೊಂಡು 82.13 ರೂಪಾಯಿಗೆ ತಲುಪಿದ್ದು, ಡೀಸೆಲ್ ದರವು ಲೀಟರ್ಗೆ 27 ಪೈಸೆ ಹೆಚ್ಚಾಗಿ 72.13 ರೂಪಾಯಿಗೆ ಮುಟ್ಟಿದೆ.
ಆಗಸ್ಟ್ ತಿಂಗಳವರೆಗೂ ಸತತ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ದರಗಳು ನಂತರ ಎರಡು ತಿಂಗಳದ ವಿರಾಮದ ಬಳಿಕ, ಮೊದಲ ಬಾರಿಗೆ ನವೆಂಬರ್ 20ರಂದು ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಹೆಚ್ಚಿಸಿದವು. ನಂತರದ ದಿನಗಳಲ್ಲಿ ತೈಲ ದರವು ಸತತ ಏರಿಕೆ ದಾಖಲಿಸುತ್ತಲೇ ಸಾಗಿದೆ.
ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ: ನವೆಂಬರ್ 27ರ ದರ ಹೀಗಿದೆ
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನವೆಂಬರ್ 28: 84.87 (24 ಪೈಸೆ ಏರಿಕೆ)
ನವೆಂಬರ್ 27: 84.63
ನವೆಂಬರ್ 26: 84.43
ನವೆಂಬರ್ 25: 84.31
ಡೀಸೆಲ್ (ಪ್ರತಿ ಲೀಟರ್)
ನವೆಂಬರ್ 28: 76.46 (28 ಪೈಸೆ ಏರಿಕೆ)
ನವೆಂಬರ್ 27: 76.18
ನವೆಂಬರ್ 26: 75.92
ನವೆಂಬರ್ 25: 75.70

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನವೆಂಬರ್ 28: 82.13 (24 ಪೈಸೆ ಏರಿಕೆ)
ನವೆಂಬರ್ 27: 81.89
ನವೆಂಬರ್ 26: 81.70
ನವೆಂಬರ್ 25: 81.59
ಡೀಸೆಲ್ (ಪ್ರತಿ ಲೀಟರ್)
ನವೆಂಬರ್ 28: 72.13 (72.13 ಪೈಸೆ ಏರಿಕೆ)
ನವೆಂಬರ್ 27: 71.86
ನವೆಂಬರ್ 26: 71.62
ನವೆಂಬರ್ 25: 71.41
ಸತತ 5ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನವೆಂಬರ್ 28: 88.81 (23 ಪೈಸೆ ಏರಿಕೆ)
ನವೆಂಬರ್ 27: 88.58
ನವೆಂಬರ್ 26: 88.40
ನವೆಂಬರ್ 25: 88.29
ಡೀಸೆಲ್ (ಪ್ರತಿ ಲೀಟರ್)
ನವೆಂಬರ್ 28: 78.66 (28 ಪೈಸೆ ಏರಿಕೆ)
ನವೆಂಬರ್ 27: 78.36
ನವೆಂಬರ್ 26: 78.12
ನವೆಂಬರ್ 25: 77.90

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನವೆಂಬರ್ 28: 85.12 (21 ಪೈಸೆ ಏರಿಕೆ)
ನವೆಂಬರ್ 27: 85.00
ನವೆಂಬರ್ 26: 84.74
ನವೆಂಬರ್ 25: 84.78
ಡೀಸೆಲ್ (ಪ್ರತಿ ಲೀಟರ್)
ನವೆಂಬರ್ 28: 77.56 (26 ಪೈಸೆ ಏರಿಕೆ)
ನವೆಂಬರ್ 27: 77.39
ನವೆಂಬರ್ 26: 77.08
ನವೆಂಬರ್ 25: 77.01

ಹೈದ್ರಾಬಾದ್ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನವೆಂಬರ್ 28: 85.42 (0.25 ಪೈಸೆ ಏರಿಕೆ)
ನವೆಂಬರ್ 27: 85.17
ನವೆಂಬರ್ 26: 84.98
ನವೆಂಬರ್ 25: 84.86
ಡೀಸೆಲ್ (ಪ್ರತಿ ಲೀಟರ್)
ನವೆಂಬರ್ 28: 78.71 (30 ಪೈಸೆ ಏರಿಕೆ)
ನವೆಂಬರ್ 27: 78.41
ನವೆಂಬರ್ 26: 78.15
ನವೆಂಬರ್ 25: 77.93

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.