• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ; ಜೂನ್ 12ರ ದರ ಎಷ್ಟಿದೆ?

|
Google Oneindia Kannada News

ನವದೆಹಲಿ, ಜೂನ್ 12: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಶನಿವಾರ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಿಸಿ ಮತ್ತೆ ಬೆಲೆ ಏರಿಕೆ ಮಾಡಿವೆ. ಈ ಮೂಲಕ ಮೇ 4ರಿಂದ ಸತತ 24ನೇ ಬಾರಿಗೆ ಇಂಧನ ಬೆಲೆ ಏರಿಕೆ ಮಾಡಲಾಗಿದೆ.

ಮೇ ತಿಂಗಳಿನಲ್ಲಿ ದೇಶದೆಲ್ಲೆಡೆ ಪೆಟ್ರೋಲ್ ಲೀಟರ್‌ಗೆ 16 ರೂಪಾಯಿ ಏರಿಕೆಯಾಗಿದ್ದರೆ, ಡೀಸೆಲ್ 18 ರೂ ಏರಿಕೆಯಾಗಿತ್ತು. ಇದೀಗ ಶನಿವಾರ ಪೆಟ್ರೋಲ್ ಲೀಟರ್‌ಗೆ 27 ಪೈಸೆ ಹಾಗೂ ಡೀಸೆಲ್ ಲೀಟರಿಗೆ 24 ಪೈಸೆ ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 96.12 ರೂ ಇದ್ದರೆ, ಡೀಸೆಲ್‌ಗೆ 86.98 ರೂ ಆಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಮುಂಬೈನಲ್ಲಿ ಪೆಟ್ರೋಲ್ 102 ರುಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಮುಂಬೈನಲ್ಲಿ ಪೆಟ್ರೋಲ್ 102 ರು

ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ದುಪ್ಪಟ್ಟಾಗಿದೆ. ಡೀಸೆಲ್ ತೆರಿಗೆ ಎಂಟು ಪಟ್ಟು ಹೆಚ್ಚಾಗಿದೆ. ರಾಜಸ್ಥಾನದಲ್ಲಿ ಅತಿ ಹೆಚ್ಚಿನ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಸದ್ಯಕ್ಕೆ ದೇಶದ ಆರು ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ. ಜೂನ್ 12ರಂದು ಪ್ರಮುಖ ನಗರಗಳಲ್ಲಿ ಇಂಧನ ದರ ಎಷ್ಟು ಏರಿಕೆಯಾಗಿದೆ? ಮುಂದೆ ಓದಿ...

 ಜೂನ್‌ನಲ್ಲಿ ಎಷ್ಟು ಏರಿಕೆಯಾಗಿದೆ?

ಜೂನ್‌ನಲ್ಲಿ ಎಷ್ಟು ಏರಿಕೆಯಾಗಿದೆ?

ಜೂನ್ 7 ರಂದು ಪೆಟ್ರೋಲ್ ಹಾಗೂ ಡೀಸೆಲ್ ಪ್ರತಿ ಲೀಟರ್ ಸರಾಸರಿ 27-28 ಪೈಸೆ ಏರಿಕೆಯಾಗಿತ್ತು. ಜೂನ್ 8 ದರ ಸ್ಥಿರವಾಗಿತ್ತು. ಜೂನ್ 9ರಂದು ಸರಾಸರಿ 23-25 ಪೈಸೆ ಏರಿಕೆಯಾಗಿತ್ತು. ಜೂನ್ 11ರಂದು ಪೆಟ್ರೋಲ್ ಬೆಲೆ 31 ಪೈಸೆ ಪ್ರತಿ ಲೀಟರ್ ಹಾಗೂ ಡೀಸೆಲ್ 28 ಪೈಸೆ ಪ್ರತಿ ಲೀಟರ್ ನಂತೆ ಏರಿಕೆಯಾಗಿದ್ದು, ಶನಿವಾರ ಪೆಟ್ರೋಲ್ ಲೀಟರ್‌ಗೆ 27 ಪೈಸೆ ಹಾಗೂ ಡೀಸೆಲ್ ಲೀಟರಿಗೆ 24 ಪೈಸೆ ಹೆಚ್ಚಳ ಮಾಡಲಾಗಿದೆ.

 ಪ್ರಮುಖ ನಗರಗಳಲ್ಲಿ ತೈಲ ಬೆಲೆ

ಪ್ರಮುಖ ನಗರಗಳಲ್ಲಿ ತೈಲ ಬೆಲೆ

ನಗರ-ಇಂಧನ ದರ ಪ್ರತಿ ಲೀಟರ್ ರೂಗಳಲ್ಲಿ
ನವದೆಹಲಿ: ಪೆಟ್ರೋಲ್ 96.12 ರೂ- ಡೀಸೆಲ್ 86.98 ರೂ
ಕೋಲ್ಕತಾ: ಪೆಟ್ರೋಲ್ 96.06 ರೂ- ಡೀಸೆಲ್ 94.39 ರೂ
ಮುಂಬೈ: ಪೆಟ್ರೋಲ್ 102.30 ರೂ- ಡೀಸೆಲ್ 94.39 ರೂ
ಚೆನ್ನೈ: ಪೆಟ್ರೋಲ್ 97.43 ರೂ- ಡೀಸೆಲ್ 91.64 ರೂ
ಬೆಂಗಳೂರು: ಪೆಟ್ರೋಲ್ 99.33 ರೂ- ಡೀಸೆಲ್ 92.21ರೂ
ತಿರುವನಂತಪುರಂ: ಪೆಟ್ರೋಲ್ 97.83 ರೂ- ಡೀಸೆಲ್ 93.18 ರೂ
ಪಾಟ್ನಾ: ಪೆಟ್ರೋಲ್ 98.21 ರೂ- ಡೀಸೆಲ್ 92.29 ರೂ
ಹೈದರಾಬಾದ್: ಪೆಟ್ರೋಲ್ 99.90 ರೂ- ಡೀಸೆಲ್ 94.82 ರೂ
ನೋಯ್ಡಾ: ಪೆಟ್ರೋಲ್ 93.46 ರೂ- ಡೀಸೆಲ್ 87.46 ರೂ

ಮೋದಿ ಜನರಿಗೆ ನರಕ ತೋರಿಸುತ್ತಿದ್ದಾರೆ; ಕಿಡಿಕಾರಿದ ಸಿದ್ದರಾಮಯ್ಯಮೋದಿ ಜನರಿಗೆ ನರಕ ತೋರಿಸುತ್ತಿದ್ದಾರೆ; ಕಿಡಿಕಾರಿದ ಸಿದ್ದರಾಮಯ್ಯ

 ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಕಂಡು 72.14ಯುಎಸ್ ಡಾಲರ್(1 USD=72.94ರು) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್, ಏಪ್ರಿಲ್ ತಿಂಗಳಲ್ಲಿ 66 ಡಾಲರ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 68 ಡಾಲರ್ ನಷ್ಟಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ ಹಾಗೂ ಡೀಸೆಲ್ ಮೇಲೆ 31.80 ರೂ ನಷ್ಟಿದೆ.

  ತೈಲ ಬೆಲೆ ಹೆಚ್ಚಳ - ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ | oneindia kannada
   ಕಚ್ಚಾ ತೈಲ ಬೆಲೆ ನೋಡಿಕೊಂಡು ಬೆಲೆ ನಿರ್ಧಾರ

  ಕಚ್ಚಾ ತೈಲ ಬೆಲೆ ನೋಡಿಕೊಂಡು ಬೆಲೆ ನಿರ್ಧಾರ

  ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರೂಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ.

  English summary
  Petrol Diesel Price Rate Hiked on Saturday (June 12) across India. Check out prices of other Metro cities,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X