ಒಂದು ದಿನದ ವಿರಾಮವಷ್ಟೇ: ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ
ನವದೆಹಲಿ, ಜೂನ್ 19: ನಿನ್ನೆ(ಭಾನುವಾರ) ತೈಲ ದರವು ಯಾವುದೇ ಪರಿಷ್ಕರಣೆಗೊಳ್ಳದೆ ಒಂದು ದಿನ ವಿರಾಮದ ಬಳಿಕ ಮತ್ತೆ ಏರಿಕೆ ಮುಂದುವರಿಸಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಸೋಮವಾರ ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 5 ಪೈಸೆಯಂತೆ 80.43 ರುಪಾಯಿಗೆ ಏರಿಕೆ ಮಾಡಿದ್ದು, ದೆಹಲಿಯಲ್ಲಿ ಡೀಸೆಲ್ ದರವನ್ನು ಲೀಟರ್ಗೆ 13 ಪೈಸೆ ಹೆಚ್ಚಿಸಿ 80.53 ರುಪಾಯಿ ದಾಖಲಿಸಿವೆ.
ಕಳೆದ 22 ದಿನಗಳಲ್ಲಿ, ಪೆಟ್ರೋಲ್ ಬೆಲೆ ಲೀಟರ್ಗೆ 9.17 ರುಪಾಯಿಯಷ್ಟು ಏರಿಕೆಯಾಗಿದೆ ಮತ್ತು ಡೀಸೆಲ್ನ ಬೆಲೆ ಲೀಟರ್ಗೆ 11.14 ರುಪಾಯಿಯಷ್ಟು ಹೆಚ್ಚಾಗಿದೆ. ಭಾನುವಾರ (ಜೂನ್ 7) ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಅಂದಿನಿಂದ ಸತತ ತೈಲ ಬೆಲೆ ಏರಿಕೆ ಕಂಡಿದೆ.
ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
20ನೇ ದಿನವೂ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 29: 83.04 (05 ಪೈಸೆ ಏರಿಕೆ)
ಜೂನ್ 28: 82.99
ಜೂನ್ 27: 82.99
ಜೂನ್ 26: 82.74
ಡೀಸೆಲ್ (ಪ್ರತಿ ಲೀಟರ್)
ಜೂನ್ 29: 76.58 (13 ಪೈಸೆ ಏರಿಕೆ)
ಜೂನ್ 28: 76.45
ಜೂನ್ 27: 76.45
ಜೂನ್ 26: 76.25
ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 29: 80.43 (05 ಪೈಸೆ ಏರಿಕೆ)
ಜೂನ್ 28: 80.38
ಜೂನ್ 27: 80.38
ಜೂನ್ 26: 80.13
10 ಸಾವಿರ ಉದ್ಯೋಗ ಕಡಿತ, BP ತೈಲ ಕಂಪನಿ ಕುಸಿತ
ಡೀಸೆಲ್ (ಪ್ರತಿ ಲೀಟರ್)
ಜೂನ್ 29: 80.53 (13 ಪೈಸೆ ಏರಿಕೆ)
ಜೂನ್ 28: 80.40
ಜೂನ್ 27: 80.40
ಜೂನ್ 26: 80.19
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 29: 87.19 (05 ಪೈಸೆ ಏರಿಕೆ)
ಜೂನ್ 28: 87.14
ಜೂನ್ 27: 87.14
ಜೂನ್ 26: 86.91
ಡೀಸೆಲ್
(ಪ್ರತಿ
ಲೀಟರ್)
ಜೂನ್ 29: 78.83 (12 ಪೈಸೆ ಏರಿಕೆ)
ಜೂನ್ 28: 78.71
ಜೂನ್ 27: 78.71
ಜೂನ್ 26: 78.51
ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 29: 83.63 (04 ಪೈಸೆ ಏರಿಕೆ)
ಜೂನ್ 28: 83.59
ಜೂನ್ 27: 83.60
ಜೂನ್ 26: 83.37
ತೈಲ ಬೆಲೆಯನ್ನು 20 ವರ್ಷಗಳಲ್ಲೇ ಭಾರೀ ಏರಿಕೆ ಮಾಡಿದ ಸೌದಿ ಅರೇಬಿಯಾ
ಡೀಸೆಲ್ (ಪ್ರತಿ ಲೀಟರ್)
ಜೂನ್ 29: 77.72 (11 ಪೈಸೆ ಏರಿಕೆ)
ಜೂನ್ 28: 77.61
ಜೂನ್ 27: 77.62
ಜೂನ್ 26: 77.44
ಹೈದ್ರಾಬಾದ್ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 29: 83.49 (05 ಪೈಸೆ ಏರಿಕೆ)
ಜೂನ್ 28: 83.44
ಜೂನ್ 27: 83.44
ಜೂನ್ 26: 83.18
ಡೀಸೆಲ್ (ಪ್ರತಿ ಲೀಟರ್)
ಜೂನ್ 29: 78.69 (12 ಪೈಸೆ ಏರಿಕೆ)
ಜೂನ್ 28: 78.57
ಜೂನ್ 27: 78.57
ಜೂನ್ 26: 78.36