ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರಿಕೆಯಾಯ್ತು ಪೆಟ್ರೋಲ್, ಡೀಸೆಲ್ ಬೆಲೆ: ಮತ್ತಷ್ಟು ಹೆಚ್ಚಳದ ಭೀತಿ, ಎಲ್ಲೆಲ್ಲಿ ಎಷ್ಟು ದರ?

|
Google Oneindia Kannada News

ನವದೆಹಲಿ, ಜನವರಿ 4: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸತತ ಮೂರನೇ ದಿನ ಏರಿಕೆಯಾಗಿದೆ. ಇರಾನ್‌ನ ಪ್ರಮುಖ ಸೇನಾಧಿಕಾರಿ ಖಾಸಿಂ ಸೋಲೆಮನಿಯನ್ನು ಅಮೆರಿಕದ ಪಡೆಗಳು ಇರಾಕ್‌ನಲ್ಲಿ ವಾಯುದಾಳಿ ಮೂಲಕ ಹತ್ಯೆಮಾಡಿರುವ ಘಟನೆ ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆಯನ್ನು ಸೃಷ್ಟಿಸಿದೆ.

ಭಾರತದ ಮುಖ್ಯ ತೈಲ ಪೂರೈಕೆದಾರ ದೇಶವಾಗಿರುವ ಇರಾನ್‌ನಲ್ಲಿ ಸಂಘರ್ಷಮಯ ವಾತಾವರಣ ಉಂಟಾಗಿರುವುದು ಮತ್ತು ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಎದುರಾಗಿರುವುದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಗಗನಕ್ಕೇರುವ ಆತಂಕ ಮೂಡಿಸಿದೆ.

ಕಚ್ಚಾತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ 4.5ರಷ್ಟು ಹೆಚ್ಚಾಗಿದ್ದು, ಬ್ಯಾರೆಲ್‌ಗೆ $69.20 ದರವಿದೆ. ಇದು ಸೆಪ್ಟೆಂಬರ್‌ನಲ್ಲಿ ಸೌದಿ ಅರೇಬಿಯಾದ ಕಚ್ಚಾತೈಲದ ಘಟಕದ ಮೇಲೆ ದಾಳಿ ನಡೆದ ಸಂದರ್ಭದಿಂದ ಅತಿ ಹೆಚ್ಚಿನ ಬೆಲೆಯಾಗಿದೆ.

ಕಳೆದ ಮೂರು ದಿನಗಳಲ್ಲಿ ಪೆಟ್ರೋಲ್ ಬೆಲೆಯು 15-21 ಪೈಸೆ ಮತ್ತು ಡೀಸೆಲ್ ದರವು 23-29 ಪೈಸೆಗಳಷ್ಟು ತುಟ್ಟಿಯಾಗಿದೆ.

10-16 ಪೈಸೆಗಳಷ್ಟು ಹೆಚ್ಚಳ

10-16 ಪೈಸೆಗಳಷ್ಟು ಹೆಚ್ಚಳ

ಶನಿವಾರ ಪೆಟ್ರೋಲ್ ದರವು ಪ್ರತಿ ಲೀಟರ್ ಮೇಲೆ ದೆಹಲಿ, ಮುಂಬೈ ಮತ್ತು ಕೋಲ್ಕತಾಗಳಲ್ಲಿ 10 ಪೈಸೆಯಷ್ಟು ಹೆಚ್ಚಾಗಿದ್ದರೆ, ಚೆನ್ನೈನಲ್ಲಿ 11 ಪೈಸೆ ಹೆಚ್ಚಳವಾಗಿದೆ. ಡೀಸೆಲ್ ಬೆಲೆ ದೆಹಲಿ ಮತ್ತು ಕೋಲ್ಕತಾದಲ್ಲಿ 15 ಪೈಸೆ, ಚೆನ್ನೈ ಮತ್ತು ಮುಂಬೈನಲ್ಲಿ 16 ಪೈಸೆ ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ತಿಳಿಸಿದೆ.

ದೆಹಲಿ ಮತ್ತು ಮುಂಬೈನಲ್ಲಿ

ದೆಹಲಿ ಮತ್ತು ಮುಂಬೈನಲ್ಲಿ

ದೆಹಲಿಯಲ್ಲಿ ಪೆಟ್ರೋಲ್ ಬೆಲೆ 75.45 ರೂ.ಗೆ ತಲುಪಿದ್ದರೆ, ಡೀಸೆಲ್ ದರ ಪ್ರತಿ ಲೀಟರ್ 68.4 ರೂ.ಗೆ ಮುಟ್ಟಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 81.04 ರೂ, ಡೀಸೆಲ್ ದರ 71.72 ರೂ. ಇದೆ.

ಕೋಲ್ಕತಾ, ಚೆನ್ನೈನಲ್ಲಿ ದರ

ಕೋಲ್ಕತಾ, ಚೆನ್ನೈನಲ್ಲಿ ದರ

ಕೋಲ್ಕತಾದಲ್ಲಿ ಡೀಸೆಲ್ ದರ ಲೀಟರ್‌ಗೆ 78.04 ಮತ್ತು ಡೀಸೆಲ್ ಬೆಲೆ 70.76 ರೂ. ತಲುಪಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 78.39 ರೂ ಇದ್ದರೆ, ಡೀಸೆಲ್ ದರವು 72.28 ರೂ ಇದೆ.

ಬೆಂಗಳೂರಿನಲ್ಲಿ ತೈಲ ಬೆಲೆ

ಬೆಂಗಳೂರಿನಲ್ಲಿ ತೈಲ ಬೆಲೆ

ಬೆಂಗಳೂರಿನಲ್ಲಿ ಶುಕ್ರವಾರ 77.87 ರೂ. ಇದ್ದ ಪ್ರತಿ ಲೀಟರ್ ಪೆಟ್ರೋಲ್ ದರ ಶನಿವಾರ ಹತ್ತು ಪೈಸೆ ಹೆಚ್ಚಳ ಕಂಡು 77.97 ರೂ.ನಂತೆ ಮಾರಾಟವಾಗಿದೆ. ಜ.1ರಂದು ಪೆಟ್ರೋಲ್ ಬೆಲೆ 77.71ರಷ್ಟಿತ್ತು. ಮೂರು ದಿನಗಳಲ್ಲಿ 26 ಪೈಸೆ ಹೆಚ್ಚಳವಾಗಿದೆ. ಡೀಸೆಲ್ ದರಲ್ಲಿ 16 ಪೈಸೆ ಏರಿಕೆಯಾಗಿದ್ದು, ಶುಕ್ರವಾರ 70.52 ರೂ.ದಷ್ಟಿದ್ದ ಬೆಲೆ, ಶನಿವಾರ 70.68ಕ್ಕೆ ತಲುಪಿತ್ತು. ಕಳೆದ ಮೂರು ದಿನಗಳಲ್ಲಿ ಡೀಸೆಲ್ ಬೆಲೆ 40 ಪೈಸೆ ಹೆಚ್ಚಳವಾಗಿದೆ.

English summary
Petrol and diesel prices were rises 10-16 paise per liter for third day in a row.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X