ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ವಾರಗಳ ಬಳಿಕ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಸ್ವಲ್ಪ ಇಳಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 03: ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಅಲ್ಪಪ್ರಮಾಣದಲ್ಲಿ ಇಳಿಕೆಯಾಗಿದೆ. ಕಳೆದ ಮೂರು ವಾರದಿಂದ ಸತತ ಬೆಲೆ, ಏರಿಕೆ ಕಂಡು ಬಂದಿತ್ತು. ಜಾಗತಿಕವಾಗಿ ಕಚ್ಚಾ ತೈಲ ಬೆಲೆಯಲ್ಲಿ ಸಮಸ್ಥಿತಿ ಕಾಯ್ದುಕೊಂಡಿದ್ದು, ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆಗೆ ಕಾರಣವಾಗಿದೆ.

"ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಗುರುವಾರದಂದು ಸರಾಸರಿ 8 ರಿಂದ ಪೈಸೆಯಷ್ಟು ಪೆಟ್ರೋಲ್ ದರ ಹಾಗೂ ಸರಾಸರಿ 5 ರಿಂದ 6 ಪೈಸೆಯಷ್ಟು ಡೀಸೆಲ್ ದರ ಇಳಿಕೆ ಮಾಡಲಾಗಿದೆ" ಎಂದು ಸರ್ಕಾರಿ ಸ್ವಾಮ್ಯ ತೈಲ (ಐಒಸಿ) ಪ್ರಕಟಿಸಿದೆ.

ಪೆಟ್ರೋಲ್, ಡೀಸೆಲ್ ಬೆಲೆ ತ್ವರಿತ ಏರಿಕೆ, ಮುಂಬೈನಲ್ಲಿ ಅಧಿಕಪೆಟ್ರೋಲ್, ಡೀಸೆಲ್ ಬೆಲೆ ತ್ವರಿತ ಏರಿಕೆ, ಮುಂಬೈನಲ್ಲಿ ಅಧಿಕ

ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಏರಿಕೆ ಮಾಡಿರಲಿಲ್ಲ, ಮೇ 20ರ ನಂತರ ಸತತ ಏರಿಕೆ ಮಾಡಲಾಯಿತು. ಇರಾನ್ ಮೇಲೆ ಅಮೆರಿಕ ಹೇರುವ ನಿರ್ಬಂಧದ ಮೇಲೆ ಭಾರತ, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಟರ್ಕಿ, ಇಟಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ತೈವಾನ್ ದೇಶಗಳ ಭವಿಷ್ಯ ನಿಂತಿದೆ. ಹೀಗಾಗಿ, ಪೂರೈಕೆ ಕೊರತೆಯಿಂದ ಇಂಧನ ಬೆಲೆ ಏರಿಕೆ ಅನಿವಾರ್ಯ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ.

Petrol, diesel prices finally fall: Check latest rates in metro cities

ಸೆಪ್ಟೆಂಬರ್ 17ರಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಾಣುತ್ತಲೇ ಇತ್ತು. 2017ರಿಂದ ಇಲ್ಲಿ ತನಕ ಸತತ ಏರಿಕೆಯಾಗಿ ದಾಖಲೆ ಬರೆದಿತ್ತು. ಬಜೆಟ್ ಪೂರ್ವದಲ್ಲಿ ಏರಿಕೆ ಕಂಡಿದ್ದ ಇಂಧನ ದರ ನಂತರ ಇಳಿಕೆಯಾಗಿತ್ತು. ಈಗ ಇಂಧನ ಏರಿಕೆಯಾಗಲು ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯೇ ಕಾರಣವಾಗಿತ್ತು. ಜೊತೆಗೆ ಸೌದಿಯಲ್ಲಿ ದಾಳಿ ನಂತರ ಶೇ 5ರಷ್ಟು ಜಾಗತಿಕ ತೈಲ ಪೂರೈಕೆ ಕುಂಠಿತವಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಗಮನಿಸಬೇಕಾದ ಐದು ಅಂಶಗಳುಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಗಮನಿಸಬೇಕಾದ ಐದು ಅಂಶಗಳು

ಭಾರತದ ತನ್ನ ಇಂಧನ ಬಳಕೆಯ ಶೇ80ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ 15 ದಿನಗಳ ಮಾನದಂಡದ ಆಧಾರದ ಮೇಲೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬೆಲೆಯನ್ನು ನಿರ್ಧರಿಸಲಿವೆ. ಪೆಟ್ರೋಲ್, ಡೀಸೆಲ್ ದರ ನಿಗದಿಯಲ್ಲಿ ಯುಎಸ್ ಡಾಲರ್ ಹಾಗೂ ರುಪಾಯಿ ವಿನಿಮಯ ದರ ಕೂಡಾ ಪ್ರಮುಖ ಪಾತ್ರವಹಿಸಲಿದೆ. ಡಾಲರ್ ದರ ಹೆಚ್ಚಾದರೆ ಭಾರತಕ್ಕೆ ಇನ್ನಷ್ಟು ಆರ್ಥಿಕ ಹೊರೆ ಬೀಳಲಿದೆ. ಗಲ್ಫ್ ರಾಷ್ಟ್ರಗಳಿಂದ ಇಂಧನ ಆಮದು ಮಾಡಿಕೊಳ್ಳಲು ಡಾಲರ್ ಕರೆನ್ಸಿಯನ್ನೇ ಭಾರತ ಬಳಸುತ್ತಿದೆ.

English summary
Prices of petrol and diesel have come down on Thursday, October 3, the first time in the last three weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X