ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

|
Google Oneindia Kannada News

ನವದೆಹಲಿ, ಜನವರಿ 06: ಕಳೆದ ಎರಡು ದಿನಗಳ ಇಳಿಕೆ ಕಂಡ ಬಳಿಕ ದೇಶಾದ್ಯಂತ ಪೆಟ್ರೋಲ್‌ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾನುವಾರದಂದು ಡೀಸೆಲ್‌ ಬೆಲೆ ಮಾತ್ರ 10-11 ಪೈಸೆಗಳಷ್ಟು ಇಳಿಕೆ ಕಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾದ ಬೆನ್ನಲ್ಲೇ ಕಳೆದ ಅಕ್ಟೋಬರ್‌ಗೆ ಹೋಲಿಸಿದರೆ ಕಡಿಮೆ ಮಟ್ಟಕ್ಕೆ ಪೆಟ್ರೋಲ್ ಬೆಲೆ ಇಳಿದಿದೆ.

ಪೆಟ್ರೋಲ್, ಡೀಸೆಲ್ ಸೆಸ್ ಹೆಚ್ಚಳ ಸಮರ್ಥಿಸಿಕೊಂಡ ಕುಮಾರಸ್ವಾಮಿ ಪೆಟ್ರೋಲ್, ಡೀಸೆಲ್ ಸೆಸ್ ಹೆಚ್ಚಳ ಸಮರ್ಥಿಸಿಕೊಂಡ ಕುಮಾರಸ್ವಾಮಿ

ಕರ್ನಾಟಕದಲ್ಲಿ ಜನವರಿ 01ರಿಂದ ಸೆಸ್ ಏರಿಕೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 1.30 ರೂ.ನಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ 69.21 ರೂ.ನಿಂದ 70.84 ರೂ.ಗೆ ಏರಿಕೆಯಾಗಿದೆ. ಡೀಸೆಲ್ ದರವು 63.01 ನಿಂದ 64.66ರಷ್ಟು ತುಟ್ಟಿಯಾಗಿದೆ. ಇದರಿಂದ ರಾಜ್ಯದ ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬಿದ್ದಂತಾಗಿದೆ.

Petrol, diesel prices drop again. Check today’s rates here

ಪೆಟ್ರೋಲ್ ಮೇಲಿನ ತೆರಿಗೆಯನ್ನು 3.25% ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು 3.27% ರಷ್ಟು ಹೆಚ್ಚಳ ಮಾಡಿ ಕುಮಾರಸ್ವಾಮಿ ಸೂಚನೆ ಹೊರಡಿಸಿದ್ದರು.

ಬೆಂಗಳೂರಿನಲ್ಲಿ ಜನವರಿ 03ರದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 70.53ರು ನಷ್ಟಿದೆ. ಜನವರಿ 05ರಂದು 1.52ರು ಏರಿಕೆ ಕಂಡು 70.53ರುಗೆ ಏರಿಕೆಯಾಗಿತ್ತು. ಜನವರಿ 04ರಂದು 20ಪೈಸೆ ಏರಿಕೆಯಾಗಿ 69.01ರು ಆಗಿತ್ತು.

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಶುಕ್ರವಾರದಂದು ಇಳಿಕೆಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಶುಕ್ರವಾರದಂದು ಇಳಿಕೆ

ಇದೇ ರೀತಿ ಡೀಸೆಲ್ ಬೆಲೆ 11 ರು ಇಳಿಕೆ ಕಂಡು ಪ್ರತಿ ಲೀಟರ್ ಬೆಲೆ 64.19ರು ಆಗಿದೆ. ಜನವರಿ 05ರಂದು 1.50 ರು ಏರಿಕೆ ಕಂಡು 64.30ರಿ ಆಗಿತ್ತು. ಜನವರಿ 04ರಂದು 21ಪೈಸೆ ಇಳಿಕೆಯಾಗಿ 62.80ರು ನಷ್ಟಿತ್ತು.

English summary
Fuel prices continued to drop on Sunday as well. While petrol price remained unchanged in major cities, diesel became cheaper by 10 paise. After Sunday's price revision, petrol in Delhi is retailing at Rs 68.29 while diesel is sold at Rs 62.16 per litre, 10 paise cheaper compared to Rs 62.16 on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X