ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

16 ದಿನಗಳ ಏರಿಕೆ ನಂತರ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ

By Mahesh
|
Google Oneindia Kannada News

ಬೆಂಗಳೂರು, ಮೇ 30: ಸುಮಾರು 16 ದಿನಗಳ ಕಾಲ ನಿರಂತರವಾಗಿ ಏರಿಕೆ ಕಂಡಿದ್ದ ತೈಲ ಬೆಲೆ, ಬುಧವಾರದಂದು ಕೊಂಚ ಇಳಿಕೆಯಾಗಿದೆ. ಆದರೆ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಅಂಕಿ ಅಂಶ ಗೊಂದಲದಿಂದ 60 ಪೈಸೆ ಬದಲಿಗೆ ಕೇವಲ 1 ಪೈಸೆಯಷ್ಟು ಮಾತ್ರ ಇಳಿಕೆಯಾಗಿದೆ.

ಪೆಟ್ರೋಲ್ ಬೆಲೆಯಲ್ಲಿ 60 ಪೈಸೆ ಹಾಗೂ ಡಿಸೇಲ್ ಬೆಲೆಯಲ್ಲಿ 56 ಪೈಸೆ ಇಳಿಕೆಯಾಗಿದೆ ಎಂದು ಮೊದಲಿಗೆ ಪ್ರಕಟಿಸಲಾಗಿತ್ತು. ಆದರೆ, ಸುದ್ದಿ ಹೊರ ಬಂದ ಒಂದು ಗಂಟೆಯಲ್ಲೇ ಮತ್ತೊಮ್ಮೆ ಪ್ರಕಟಣೆ ಹೊರಡಿಸಿ, ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಕೇವಲ 1 ಪೈಸೆ ಇಳಿಕೆಯಾಗಿದೆ ಎಂದು ಘೋಷಿಸಿವೆ.

Petrol, diesel prices cut by 1 paisa, not 60 paise

ತಾಂತ್ರಿಕ ಸಮಸ್ಯೆಯಿಂದ ತಪ್ಪಾಗಿ ಅಂಕಿ ಅಂಶ ಪ್ರಕಟವಾಗಿತ್ತು ಎಂದು ತೈಲ ಸಂಸ್ಥೆಗಳು ಹೇಳಿವೆ. ಬೆಂಗಳೂರಿನಲ್ಲಿ ಇಂದಿನ ತೈಲ ದರ : ಪೆಟ್ರೋಲ್​ -79.10 ರೂ ಹಾಗೂ ಡಿಸೇಲ್​ - 69.93 ರೂ. ನಷ್ಟಿದೆ.

ಉಳಿದಂತೆ, ಮೆಟ್ರೋಪಾಲಿಟನ್​ ನಗರಗಳಲ್ಲಿ ಲೀಟರ್​ ಪೆಟ್ರೋಲ್​ ದರ: ದೆಹಲಿ-77.83 ರೂ., ಮುಂಬೈ-85.65 ರೂ., ಕೋಲ್ಕತ್ತಾ-80.47 ರೂ., ಚೆನ್ನೈ 80.80 ರೂ.

ಲೀಟರ್​ ಡಿಸೇಲ್​ ದರ: ದೆಹಲಿ-68.75ರೂ., ಮುಂಬೈ-73.20ರೂ., ಕೋಲ್ಕತ್ತಾ-71.30 ರೂ., ಚೆನ್ನೈ - 72.58 ರೂ.

English summary
Petrol and diesel prices were actually cut by 1 paisa per litre each in the capital city of Delhi on Wednesday instead of a bigger cut that was reported earlier by India's largest fuel retailer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X