ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್ ದರ

|
Google Oneindia Kannada News

ನವದೆಹಲಿ, ಆಗಸ್ಟ್ 28: ದಿನವೂ ಪೆಟ್ರೋಲ್- ಡೀಸೆಲ್ ಬೆಲೆ ಪರಿಷ್ಕರಣೆ ಆರಂಭವಾದ ಮೇಲೆ ಬೆಲೆ ಗಮನಿಸಿದಿರಾ? ನವದೆಹಲಿಯಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಎಷ್ಟಾಗಿದೆ ಅನ್ನೋದರ ಆಧಾರದಲ್ಲಿ ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಜಲೈನಿಂದ ಈಚೆಗೆ ಪೆಟ್ರೋಲ್ ಬೆಲೆ ಆರು ರುಪಾಯಿ ಹೆಚ್ಚಾಗಿದೆ. ಇದು ಕಳೆದ ಮೂರು ವರ್ಷದಲ್ಲೇ ಅತಿ ಹೆಚ್ಚಿನ ದರ.

ಇನ್ನು ಡೀಸೆಲ್ ಬೆಲೆ ಮೂರು ರುಪಾಯಿ ಅರವತ್ತೇಳು ಪೈಸೆ ಹೆಚ್ಚಾಗಿ ಸದ್ಯಕ್ಕೆ ರು. 57.03 ಇದೆ. ಇದು ದೆಹಲಿಯಲ್ಲಿ ಡೀಸೆಲ್ ನ ಲೀಟರ್ ಬೆಲೆ. ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ನೀಡಿದ ಮಾಹಿತಿ ಪ್ರಕಾರ, ಕಳೆದ ನಾಲ್ಕು ತಿಂಗಳಲ್ಲೇ ಗರಿಷ್ಠ ದರವಿದು.

Recommended Video

Oil Marketing companies allows daily changes in the price of Petrol

ಇನ್ನು ಪೆಟ್ರೋಲ್ ಬಂಕ್ ಗಳಲ್ಲಿ ಔಷಧ, ದಿನಸಿ ಮಾರಾಟ ವ್ಯವಸ್ಥೆ!ಇನ್ನು ಪೆಟ್ರೋಲ್ ಬಂಕ್ ಗಳಲ್ಲಿ ಔಷಧ, ದಿನಸಿ ಮಾರಾಟ ವ್ಯವಸ್ಥೆ!

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ನ ದರ ರು. 69.04 ಇದೆ. 2014ರ ಆಗಸ್ಟ್ ದ್ವಿತೀಯಾರ್ಧದಲ್ಲಿ ರು. 70.33 ತಲುಪಿತ್ತು. ಆ ನಂತರ ಈಗಿನ ದರವೇ ಗರಿಷ್ಠ ಆಗಿದೆ. ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಕಳೆದ ಹದಿನೈದು ವರ್ಷಗಳಿಂದ ರೂಢಿಯಲ್ಲಿದ್ದ ಪೆಟ್ರೋಲ್-ಡೀಸೆಲ್ ದರ ಪರಿಷ್ಕರಣೆ ನಿಯಮವನ್ನು ಬದಲಾಯಿಸಿಕೊಂಡಿದ್ದವು.

ನಿರಂತರ ಏರಿಕೆ ಆದ ದರ

ನಿರಂತರ ಏರಿಕೆ ಆದ ದರ

ಹದಿನೈದು ದಿನಕ್ಕೊಮ್ಮೆ ಆಗುತ್ತಿದ್ದ ದರ ಪರಿಷ್ಕರಣೆ ಬದಲಾಗಿ ನಿತ್ಯವೂ ಆಗುತ್ತಿದೆ. ಆರಂಭದ ಮೊದಲ ಹದಿನೈದು ದಿನ ಪೆಟ್ರೋಲ್- ಡೀಸೆಲ್ ದರ ಕಡಿಮೆ ಆಗಿತ್ತು. ಆದರೆ ಜುಲೈ ಮೂರರಿಂದ ಸತತವಾಗಿ ಏರಿಕೆ ಆಗುತ್ತಿದೆ. ಜೂನ್ ಹದಿನಾರರಂದು ದೆಹಲಿಯಲ್ಲಿ ಪೆಟ್ರೋಲ್ ದರ 65.48 ಇದ್ದದ್ದು ಜುಲೈ 2ರಂದು 63.06 ತಲುಪಿತು. ಆ ನಂತರ ನಾಲ್ಕು ಸಂದರ್ಭಗಳಲ್ಲಿ 2ರಿಂದ 9 ಪೈಸೆ ಕಡಿಮೆ ಆಗಿದ್ದು ಬಿಟ್ಟರೆ ನಿರಂತರವಾಗಿ ಏರಿಕೆ ಆಗುತ್ತಲೇ ಹೋಗಿದೆ.

ಡೀಸೆಲ್ ಬೆಲೆಯಲ್ಲೂ ಹೆಚ್ಚಳ

ಡೀಸೆಲ್ ಬೆಲೆಯಲ್ಲೂ ಹೆಚ್ಚಳ

ಅದೇ ರೀತಿ ಡೀಸೆಲ್ ಬೆಲೆ ಕೂಡ ಆಗಿದೆ. ಜೂನ್ ಹದಿನಾರರಂದು 54.49 ಇದ್ದದ್ದು ಜುಲೈ 2ರಂದು 53.36 ತಲುಪಿತು. ಆ ನಂತರ ಹಲವು ಬಾರಿ ಡೀಸೆಲ್ ಬೆಲೆಯಲ್ಲಿ ಇಳಿಕೆಯಾದರೂ ಒಟ್ಟಾರೆ ನೋಡಿದಾಗ ದರ ಏರಿಕೆಯಾಗಿದೆ.

ಪೈಸೆಗಳ ಲೆಕ್ಕದಲ್ಲಿ ಮಾಡುವ ಏರಿಕೆ ಗಮನಿಸುತ್ತಿಲ್ಲ

ಪೈಸೆಗಳ ಲೆಕ್ಕದಲ್ಲಿ ಮಾಡುವ ಏರಿಕೆ ಗಮನಿಸುತ್ತಿಲ್ಲ

"ಈ ಹಿಂದೆ ಒಂದು ಸಲಕ್ಕೆ ಎರಡ್ಮೂರು ರುಪಾಯಿ ಹೆಚ್ಚಾದರೆ ಅದರ ಪರಿಣಾಮ ಅರಿವಿಗೆ ಬರುತ್ತಿತ್ತು. ಆದರೆ ಈಗ ದಿನವೂ ಒಂದರಿಂದ ಹದಿನೈದು ಪೈಸೆ ಹೆಚ್ಚಳವಾಗುತ್ತದೆ. ಆದರೆ ಇದು ಯಾರ ಗಮನಕ್ಕೂ ಬರುವುದಿಲ್ಲ" ಎಂದು ತೈಲ ಕಂಪೆನಿಯೊಂದರ ಅಧಿಕಾರಿ ಅಭಿಪ್ರಾಯ ಪಡುತ್ತಾರೆ.

2002ರಿಂದ ಹದಿನೈದು ದಿನಕ್ಕೊಮ್ಮೆ ಪರಿಷ್ಕರಣೆ

2002ರಿಂದ ಹದಿನೈದು ದಿನಕ್ಕೊಮ್ಮೆ ಪರಿಷ್ಕರಣೆ

ಏಪ್ರಿಲ್ ಒಂದು, 2002ರಿಂದ ಹದಿನೈದು ದಿನಕ್ಕೊಮ್ಮೆ ಪೆಟ್ರೋಲ್-ಡೀಸೆಲ್ ದರ ಪರಿಷ್ಕರಣೆ ಮಾಡುವ ನಿಯಮ ಜಾರಿಗೆ ಬಂದಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹಾಗೂ ಡಾಲರ್ ಎದುರು ರುಪಾಯಿ ಮೌಲ್ಯವನ್ನು ಆಧರಿಸಿ ದರ ನಿಗದಿ ಮಾಡಲಾಗುತ್ತಿತ್ತು.

ಐದು ನಗರಗಳಲ್ಲಿ ಪ್ರಾಯೋಗಿಕ ಜಾರಿ

ಐದು ನಗರಗಳಲ್ಲಿ ಪ್ರಾಯೋಗಿಕ ಜಾರಿ

ಪೆಟ್ರೋಲ್ ಹಾಗೂ ಡೀಸೆಲ್ ದರಗಳ ನಿತ್ಯ ಪರಿಷ್ಕರಣೆಯನ್ನು ಮೊದಲಿಗೆ ಉದಯ್ ಪುರ್, ಜಮ್ಷೆಡ್ ಪುರ್, ಪುದುಚೆರಿ, ಚಂಡಿಗಡ ಹಾಗೂ ವಿಶಾಖಪಟ್ಟಣದಲ್ಲಿ ಮೇ ಒಂದರಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಯಿತು.

English summary
Petrol price has been hiked by Rs 6 per litre since the beginning of July and is now priced at its highest rate in three years with rates being revised in small dosages daily.Diesel price has increased by Rs 3.67 a litre and now costs Rs 57.03 a litre in Delhi, the highest in four months, according to data from state-owned oil companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X