ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬ್ಬದ ಸಂಭ್ರಮಕ್ಕೆ ತೈಲಬೆಲೆ ಉಡುಗೊರೆ: ಸತತ ಎರಡನೆಯ ದಿನವೂ ದರ ಇಳಿಕೆ

|
Google Oneindia Kannada News

Recommended Video

ಇಳಿಕೆಯತ್ತ ಸಾಗಿದ ತೈಲಬೆಲೆ : ಹಬ್ಬದ ಸಂಭ್ರಮಕ್ಕೆ ಉಡುಗೊರೆ | Oneindia Kannada

ನವದೆಹಲಿ, ಅಕ್ಟೋಬರ್ 19: ದಸರಾ ಹಬ್ಬ ವಾಹನ ಸವಾರರಿಗೆ ಮತ್ತೆ ಖುಷಿ ನೀಡಿದೆ. ಹಬ್ಬದ ಸಡಗರದಲ್ಲಿ ಮುಳುಗಿರುವ ಜನರಿಗೆ ತೈಲಬೆಲೆ ಮತ್ತೊಂದು ಉಡುಗೊರೆ ನೀಡಿದೆ. ಸತತ ಎರಡನೆಯ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆಯಾಗಿದೆ.

ದೇಶದ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಶುಕ್ರವಾರ 24 ಪೈಸೆ ಇಳಿಕೆಯಾಗಿದ್ದರೆ, ಡೀಸೆಲ್ ದರದಲ್ಲಿ 10 ಪೈಸೆ ಇಳಿಕೆಯಾಗಿದೆ.

ಕಳೆದ ಎರಡು ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ ಎರಡು ದಿನ ಇಳಿಕೆಯಾಗಿರುವುದು ಇದೇ ಮೊದಲು. ಗುರುವಾರವೂ ತೈಲ ಬೆಲೆ ಇಳಿಕೆಯಾಗಿ ಆಯುಧ ಪೂಜೆಯ ಸಂಭ್ರಮದಲ್ಲಿ ಒಂದಷ್ಟು ನೆಮ್ಮದಿ ನೀಡಿತ್ತು. ದೆಹಲಿ ಮತ್ತು ಮುಂಬೈನಲ್ಲಿ ಪೆಟ್ರೋಲ್ ದರ 21 ಪೈಸೆ ಮತ್ತು ಡೀಸೆಲ್ ಬೆಲೆ 11 ಪೈಸೆ ಇಳಿಕೆಯಾಗಿತ್ತು.

ಆಯುಧ ಪೂಜೆ ದಿನದಂದು ಶುಭ ಸುದ್ದಿ: ಇಂಧನ ಬೆಲೆ ಇಳಿಕೆ ಆಯುಧ ಪೂಜೆ ದಿನದಂದು ಶುಭ ಸುದ್ದಿ: ಇಂಧನ ಬೆಲೆ ಇಳಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದರಿಂದ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗಿದ್ದರಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಏರಿಕೆಯಾಗುತ್ತಿದೆ.

ಇದರಿಂದ ಜನಸಾಮಾನ್ಯರ ಮೇಲೆ ತೀವ್ರ ಆರ್ಥಿಕ ಹೊರೆಯಾಗುತ್ತಿದ್ದು, ವಿರೋಫಧಪಕ್ಷಗಳ ಪ್ರತಿಭಟನೆಯ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಅಕ್ಟೋಬರ್ 4ರಂದು 2.50 ರೂ. ಇಳಿಕೆ ಮಾಡಿತ್ತು. ಆದರೆ, ಕಡಿಮೆ ಮಾಡಿದ ಮೊತ್ತವನ್ನು ಮೀರಿ ಹತ್ತೇ ದಿನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿತ್ತು.

ಈಗ ಮೊದಲ ಬಾರಿಗೆ ತೈಲ ಬೆಲೆಯಲ್ಲಿ ಇಳಿಕೆಯಾಗಿದೆ.

ದೆಹಲಿಯಲ್ಲಿ ತೈಲ ಬೆಲೆ

ದೆಹಲಿಯಲ್ಲಿ ತೈಲ ಬೆಲೆ

ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 82.38 ರೂ. ಇದೆ. ಡೀಸೆಲ್ ಬೆಲೆಯಲ್ಲಿ ಲೀಟರ್‌ಗೆ 75.48 ರೂ. ಕಡಿತವಾಗಿದೆ. ಗುರುವಾರ ಈ ದರ ಪ್ರತಿ ಲೀ. 82.62 ರೂ.ಗಳಷ್ಟಾಗಿದ್ದರೆ, ಡೀಸೆಲ್ ದರ 75.58 ರು ಪ್ರತಿ ಲೀಟರ್‌ಗೆ ಇಳಿಕೆಯಾಗಿತ್ತು.

ಪೆಟ್ರೋಲ್ ಬೆಲೆ ಇಳಿಕೆ ಸುತ್ತ; ದೊರೆ ಮಾಡಿದ ತಪ್ಪಿಗೆ ದಂಡನೆ ಇಲ್ಲ!ಪೆಟ್ರೋಲ್ ಬೆಲೆ ಇಳಿಕೆ ಸುತ್ತ; ದೊರೆ ಮಾಡಿದ ತಪ್ಪಿಗೆ ದಂಡನೆ ಇಲ್ಲ!

ಮುಂಬೈನಲ್ಲಿ ಪೆಟ್ರೋಲ್ ಬೆಲೆ

ಮುಂಬೈನಲ್ಲಿ ಪೆಟ್ರೋಲ್ ಬೆಲೆ

ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ ಗುರುವಾರ ಮುಂಬೈನಲ್ಲಿ 21 ಪೈಸೆಗಳ ಇಳಿಕೆಯಾಗಿತ್ತು. ಪ್ರತಿ ಲೀಟರ್ ಪೆಟ್ರೋಲ್ 88.62 ರೂ.ಗೆ ಇಳಿದಿತ್ತು. ಡೀಸೆಲ್ ಬೆಲೆ 79.24 ರೂ.ಗಳಷ್ಟಿತ್ತು. ಶುಕ್ರವಾರ ಪೆಟ್ರೋಲ್ ಬೆಲೆ 87.84 ರೂ.ಗೆ ಇಳಿದಿದೆ. ಡೀಸೆಲ್ ಬೆಲೆ 11 ಪೈಸೆಗಳಷ್ಟು ಇಳಿಕೆಯಾಗಿದ್ದು, ಲೀಟರ್‌ಗೆ 79.13 ರೂ.ಗೆ ಮಾರಾಟವಾಗುತ್ತಿದೆ.

ಬೆಳವಣಿಗೆ ದರದಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ: ಐಎಂಎಫ್ ಭವಿಷ್ಯಬೆಳವಣಿಗೆ ದರದಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ: ಐಎಂಎಫ್ ಭವಿಷ್ಯ

ಬೆಂಗಳೂರಿನಲ್ಲಿ ಪೆಟ್ರೋಲ್ ದರ

ಬೆಂಗಳೂರಿನಲ್ಲಿ ಪೆಟ್ರೋಲ್ ದರ

ಬೆಂಗಳೂರಿನಲ್ಲಿ ಪ್ರತಿ ಲೀ. ಪೆಟ್ರೋಲ್‌ 24 ಪೈಸೆ ಇಳಿಕೆಯಾಗಿದೆ. ಶುಕ್ರವಾರ ಪೆಟ್ರೋಲ್ ಲೀಟರ್‌ಗೆ 83. 03 ಪೈಸೆಗೆ ಮಾರಾಟವಾಗುತ್ತಿದೆ. ಗುರುವಾರ ಪೆಟ್ರೋಲ್ ದರ 83.27 ರೂ. ಇತ್ತು. ಡೀಸೆಲ್ ದರ ಹತ್ತು ಪೈಸೆ 11 ಪೈಸೆ ಅಗ್ಗವಾಗಿದೆ. ಗುರುವಾರ 75.97 ರೂ.ಗೆ ಮಾರಾಟವಾಗಿದ್ದ ಡೀಸೆಲ್ 75.87 ರೂ.ಗೆ ಇಳಿದಿದೆ.

ಆಕ್ಸೆಂಚರ್ ಪ್ರಗತಿ ಎದುರು ಭಾರತದ 5 ಪ್ರಮುಖ ಐಟಿ ಸಂಸ್ಥೆಗಳು ಕಂಗಾಲುಆಕ್ಸೆಂಚರ್ ಪ್ರಗತಿ ಎದುರು ಭಾರತದ 5 ಪ್ರಮುಖ ಐಟಿ ಸಂಸ್ಥೆಗಳು ಕಂಗಾಲು

ಕೋಲ್ಕತ್ತಾ, ಚೆನ್ನೈನಲ್ಲಿ

ಕೋಲ್ಕತ್ತಾ, ಚೆನ್ನೈನಲ್ಲಿ

ಕೋಲ್ಕತಾ ನಗರದಲ್ಲಿ ಪೆಟ್ರೋಲ್ ಬೆಲೆ 84.21 ರೂ. ಇದ್ದರೆ, ಡೀಸೆಲ್ ದರ 77.33 ರೂ.ಗೆ ಮಾರಾಟ ಆಗುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್ 85.63 ರೂ.ಗೆ ಇಳಿಕೆಯಾಗಿದೆ. ಡೀಸೆಲ್ ದರ ಲೀಟರ್‌ಗೆ 79.82 ರೂ. ಇದೆ.

ಗುರುವಾರ ಕೋಲ್ಕತಾದಲ್ಲಿ ಲೀ. ಪೆಟ್ರೋಲ್‌ 84.44 ರೂ. ಮತ್ತು ಡೀಸೆಲ್‌ 77.43 ರೂ. ನಷ್ಟಿತ್ತು. ಚೆನ್ನೈನಲ್ಲಿ ಪೆಟ್ರೋಲ್‌ ಪ್ರತಿ ಲೀ.ಗೆ 85.88 ರೂ. ಮತ್ತು ಡೀಸೆಲ್ 79.93 ರೂ.ಗೆ ಇಳಿಕೆಯಾಗಿತ್ತು.

English summary
Petrol and Diesel rate slashed second day also. In the national capital petrol price downed 24 paise and diesel to 10 paise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X