ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೊಮ್ಮೆ ಏರಿಕೆಯಾಗಿದೆ ಏಕೆ?

|
Google Oneindia Kannada News

ನವದೆಹಲಿ, ಜೂನ್ 25: ಸತತವಾಗಿ 19ನೇ ದಿನವೂ ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಜೊತೆಗೆ ಪೆಟ್ರೋಲ್ ದರದಲ್ಲಿಕೂಡಾ ವ್ಯತ್ಯಾಸ ಕಂಡು ಬಂದಿದೆ. ಡೀಸೆಲ್ ದರಲ್ಲಿ 14 ಪೈಸೆ ಪ್ರತಿ ಲೀಟರ್ ನಂತೆ ಹೆಚ್ಚಳ, ಹಾಗೂ ಪೆಟ್ರೋಲ್ ದರದಲ್ಲಿ 16 ಪೈಸೆ ಏರಿಕೆಯಾಗಿದೆ.

ಗುರುವಾರ(ಜೂನ್ 25) ದಂದು ದೆಹಲಿಯಲ್ಲಿ ಡೀಸೆಲ್ ದರ ಪ್ರತಿ ಲೀಟರ್ ಗೆ 80.02 ರು ಇದ್ದರೆ, ಪೆಟ್ರೋಲ್ ದರ ಪ್ರತಿ ಲೀಟರ್ ಗೆ 79.92 ರು ನಷ್ಟಿದೆ. ಬುಧವಾರದಂದು ದೆಹಲಿಯಲ್ಲಿ ಪೆಟ್ರೋಲ್ ದರಕ್ಕಿಂತ ಡೀಸೆಲ್ ದರ ಹೆಚ್ಚಳವಾಗಿತ್ತು.

ಒಟ್ಟಾರೆ 19ದಿನಗಳಲ್ಲಿ ಪೆಟ್ರೋಲ್ ದರದಲ್ಲಿ 10.64 ರು ಹಾಗೂ ಡೀಸೆಲ್ ದರದಲ್ಲಿ 9.14 ರು ನಷ್ಟು ಏರಿಕೆ ಕಾಣಲಾಗಿದೆ.

ಜೂನ್ 7ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪರಿಷ್ಕರಿಸುತ್ತಾ ಬಂದಿವೆ.

ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ ಏಕೆ?

ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ ಏಕೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರ, ಅಮೆರಿಕ-ಚೀನಾ ನಡುವಿನ ವಹಿವಾಟು ಆರಂಭದ ಮಾತುಕತೆ, ಕೊರೊನಾವೈರಸ್ ಆರ್ಥಿಕ ಹೊಡೆತ, ಭಾರತದಲ್ಲಿ ತೈಲದ ಮೇಲೆ ಹೆಚ್ಚಿದ ಅಬಕಾರಿ ಸುಂಕ ಎಲ್ಲವೂ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ.

ದೆಹಲಿಯಲ್ಲಿ ಡೀಸೆಲ್ ಬೆಲೆ ಹೆಚ್ಚಳಕ್ಕೆ ಕಾರಣ?

ದೆಹಲಿಯಲ್ಲಿ ಡೀಸೆಲ್ ಬೆಲೆ ಹೆಚ್ಚಳಕ್ಕೆ ಕಾರಣ?

ಮೊದಲೆ ಹೇಳಿದಂತೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳಕ್ಕೆ ಆಯಾ ಆಯಾ ರಾಜ್ಯಗಳ ಹೆಚ್ಚುವರಿ ವ್ಯಾಟ್ ಕೂಡಾ ಕಾರಣವಾಗುತ್ತದೆ. ಇದರಿಂದಲೇ ರಾಜ್ಯದಿಂದ ರಾಜ್ಯಕ್ಕೆ ಹೋಲಿಸಿದರೆ ತೈಲ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ. ಇದೇ ರೀತಿ ದೆಹಲಿಯಲ್ಲಿ ಬುಧವಾರದಂದು ಪೆಟ್ರೋಲ್ ಗಿಂತಲೂ ಡೀಸೆಲ್ ಬೆಲೆ ಹೆಚ್ಚಳ ಕಾಣಿಸಿದ್ದಕ್ಕೂ ವ್ಯಾಟ್ ಕಾರಣ ಎಂದು ಇಂಡಿಯನ್ ಆಯಿಲ್ ಕಾರ್ಪ್ ಮುಖ್ಯಸ್ಥ ಸಂಜೀವ್ ಸಿಂಗ್ ಹೇಳಿದ್ದಾರೆ. ದೆಹಲಿ ಸರ್ಕಾರವು ಪೆಟ್ರೋಲ್ ಮೇಲಿನ ವ್ಯಾಟ್ ಶೇ 27 ರಿಂದ 30ರಷ್ಟು ಹಾಗೂ ಡೀಸೆಲ್ ಮೇಲಿನ ವ್ಯಾಟ್ ಶೇ 16.75 ರಿಂದ ಶೇ 30ಕ್ಕೇರಿಸಿದೆ.

ಬೆಂಗಳೂರಿನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 25: 82.52 (17 ಪೈಸೆ ಏರಿಕೆ)
ಜೂನ್ 24: 82.35 (--)
ಜೂನ್ 23: 82.35 (20 ಪೈಸೆ)
ಜೂನ್ 22: 82.15 (34 ಪೈಸೆ)
ಜೂನ್ 21: 81.81 (37 ಪೈಸೆ)

ಡೀಸೆಲ್ (ಪ್ರತಿ ಲೀಟರ್)
ಜೂನ್ 25: 76.09 (13 ಪೈಸೆ ಏರಿಕೆ)
ಜೂನ್ 24: 75.51 (--)
ಜೂನ್ 23: 75.51 (53 ಪೈಸೆ)
ಜೂನ್ 22: 74.98 (55 ಪೈಸೆ)
ಜೂನ್ 21: 74.43 (57 ಪೈಸೆ)
ಜೂನ್ 20: 73.86 (58 ಪೈಸೆ)

ನವದೆಹಲಿಯಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 25: 79.92 (16 ಪೈಸೆ ಏರಿಕೆ)
ಜೂನ್ 24: 79.76 (---)
ಜೂನ್ 23: 79.76 (20 ಪೈಸೆ)
ಜೂನ್ 22: 79.56 (33 ಪೈಸೆ)
ಜೂನ್ 21: 79.23 (35 ಪೈಸೆ)
ಜೂನ್ 20: 78.88 (51 ಪೈಸೆ)

ಡೀಸೆಲ್ (ಪ್ರತಿ ಲೀಟರ್)
ಜೂನ್ 24: 80.02 (14ಪೈಸೆ ಏರಿಕೆ)
ಜೂನ್ 24: 79.88 (48 ಪೈಸೆ)
ಜೂನ್ 23: 79.40 (55 ಪೈಸೆ)
ಜೂನ್ 22: 78.85 (58 ಪೈಸೆ)
ಜೂನ್ 21: 78.27 (60 ಪೈಸೆ)

ಮುಂಬೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 24: 86.70(16 ಪೈಸೆ ಏರಿಕೆ)
ಜೂನ್ 24: 86.54 (--)
ಜೂನ್ 23: 86.54 (18 ಪೈಸೆ ಏರಿಕೆ)
ಜೂನ್ 22: 86.36 (32 ಪೈಸೆ)
ಜೂನ್ 21: 86.04 (34 ಪೈಸೆ)

ಡೀಸೆಲ್ (ಪ್ರತಿ ಲೀಟರ್)
ಜೂನ್ 25: 78.34 (12 ಪೈಸೆ ಏರಿಕೆ)
ಜೂನ್ 24: 77.76 (46 ಪೈಸೆ)
ಜೂನ್ 23: 77.76 (52 ಪೈಸೆ)
ಜೂನ್ 22: 77.24 (55 ಪೈಸೆ)
ಜೂನ್ 21: 76.69 (58 ಪೈಸೆ)

ಚೆನ್ನೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 24: 83.18 (0.07 ಪೈಸೆ ಏರಿಕೆ)
ಜೂನ್ 24: 83.11 (0.07 ಪೈಸೆ)
ಜೂನ್ 23: 83.04 (17 ಪೈಸೆ)
ಜೂನ್ 22: 82.87 (29 ಪೈಸೆ)
ಜೂನ್ 21: 82.58 (25 ಪೈಸೆ)
ಜೂನ್ 20: 82.33 (51 ಪೈಸೆ)

ಡೀಸೆಲ್ (ಪ್ರತಿ ಲೀಟರ್)
ಜೂನ್ 24: 77.29 (0.05 ಪೈಸೆ ಏರಿಕೆ)
ಜೂನ್ 24: 77.24 (47 ಪೈಸೆ)
ಜೂನ್ 23: 76.77 (47 ಪೈಸೆ)
ಜೂನ್ 22: 76.30 (50 ಪೈಸೆ)
ಜೂನ್ 21: 75.80 (45 ಪೈಸೆ)

English summary
Amid the tension and panic that has taken place in India, the fuel prices have continued to increase across the country. On Thursday, oil marketing companies increased price of petrol by 16 paise a litre and diesel by 14 paise a litre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X