ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ಉಕ್ರೇನ್ ಸಂಘರ್ಷ: ಕಚ್ಚಾತೈಲ ಬ್ಯಾರೆಲ್ ಬೆಲೆ 110 ಡಾಲರ್‌ಗೆ ಏರಿಕೆ

|
Google Oneindia Kannada News

ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುತ್ತಿದ್ದಂತೆ ಬ್ರೆಂಟ್ ಕಚ್ಚಾತೈಲ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಬುಧವಾರ ಬ್ಯಾರೆಲ್ ಬೆಲೆ 110 ಡಾಲರ್‌ಗೆ ಏರಿಕೆಯಾಗಿದೆ.
2014 ರ ಬಳಿಕ ಇದೇ ಮೊದಲ ಬಾರಿಗೆ ​ ಕಚ್ಚಾ ತೈಲ ಬೆಲೆ ಈ ಮಟ್ಟಕ್ಕೆ ಹೆಚ್ಚಾಗಿದೆ.

ಅಮೆರಿಕ ಸೇರಿದಂತೆ ಅನೇಕ ದೇಶಗಳು ರಷ್ಯಾ ಮೇಲೆ ಸರಣಿ ನಿರ್ಬಂಧಗಳನ್ನು ಹೇರಿದ್ದು, ಆ ದೇಶದ ಆರ್ಥಿಕತೆ ಕುಸಿಯುವಂತೆ ಮಾಡುವುದಾಗಿ ಹೇಳಿವೆ. ಈ ಕ್ರಮಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಸೃಷ್ಟಿಸಿದೆ.

ಕೊರೊನಾ ಸಾಂಕ್ರಾಮಿಕ, ಲಾಕ್‌ಡೌನ್ ಕ್ರಮಗಳಿಂದ ಜಾಗತಿಕ ಮಟ್ಟದಲ್ಲಿ ಹೊಡೆತಕ್ಕೆ ಒಳಗಾಗಿದ್ದ ಆರ್ಥಿಕ ಚಟುವಟಿಕೆಗಳು ಇದೀಗ ಪುನರಾರಂಭಗೊಳ್ಳುತ್ತಿದ್ದು, ತೈಲ ಬೆಲೆಯೂ ಹೆಚ್ಚಾಗುತ್ತಿದೆ. ಹೆಚ್ಚಿದ ಬೇಡಿಕೆ ಹಾಗೂ ಪೂರೈಕೆ ಸಮಸ್ಯೆಯಿಂದಾಗಿ ದರವೂ ಹೆಚ್ಚಳವಾಗುತ್ತಿದೆ. ಪೂರ್ವ ಯುರೋಪ್ ದೇಶಗಳ ನಡುವಿನ ಸಂಘರ್ಷ ಮತ್ತಷ್ಟು ದರ ಏರಿಕೆಗೆ ಕಾರಣವಾಗಿದೆ.

Petrol

ರಷ್ಯಾ ಮೇಲೆ ಜಾಗತಿಕ ಮಟ್ಟದಲ್ಲಿ ಹೇರಲಾಗಿರುವ ಆರ್ಥಿಕ ನಿರ್ಬಂಧಗಳು, ಯುದ್ದದಿಂದಾಗಿ ವಿಶ್ವಮಟ್ಟದಲ್ಲಿ ಇಂಧನ ಪೂರೈಕೆ ಮೇಲೆ ಆಗಿರುವ ಪರಿಣಾಮಗಳೇ ದರ ಏರಿಕೆಗೆ ಕಾರಣ ಎನ್ನಲಾಗಿದೆ. ಅಮೆರಿಕ ಸೇರಿದಂತೆ ಅನೇಕ ದೇಶಗಳು ರಷ್ಯಾ ಮೇಲೆ ಸರಣಿ ನಿರ್ಬಂಧಗಳನ್ನು ಹೇರಿದ್ದು, ಆ ದೇಶದ ಆರ್ಥಿಕತೆ ಕುಸಿಯುವಂತೆ ಮಾಡುವುದಾಗಿ ಹೇಳಿವೆ.

ಈ ಕ್ರಮಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಶ್ಛಿತತೆಯನ್ನು ಸೃಷ್ಟಿಸಿದೆ. ರಷ್ಯಾವು ವಿಶ್ವದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ಉತ್ಪಾದಕ ದೇಶವಾಗಿದೆ. ರಷ್ಯಾ ಮೇಲೆ ಹೇರಲಾಗಿರುವ ರಫ್ತು ನಿರ್ಬಂಧಗಳು ಆ ದೇಶದ ತೈಲ ಪೂರೈಕೆಗೆ ಅಡಚಣೆ ಉಂಟುಮಾಡಿದೆ ಈ ಹಿನ್ನೆಲೆಯಲ್ಲಿ ಪೂರೈಕೆ ಕಡಿಮೆಯಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದೆ.

ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶದ (PPAC) ಮಾಹಿತಿಯ ಪ್ರಕಾರ ಮಾರ್ಚ್ 1 ರಂದು ಭಾರತವು ಖರೀದಿಸುವ ಕಚ್ಚಾ ತೈಲದ ದರವು ಪ್ರತಿ ಬ್ಯಾರೆಲ್‌ಗೆ 102 ಡಾಲರ್‌ಗಿಂತ ಹೆಚ್ಚಿದೆ.

ತೈಲ ಮಾರುಕಟ್ಟೆ ಕಂಪನಿಗಳು ಸಾಮಾನ್ಯ ಲಾಭದ ಹಳಿಗೆ ಮರಳಲು ಚಿಲ್ಲರೆ ಮಾರಾಟದ ಬೆಲೆಗಳನ್ನು ಲೀಟರ್‌ಗೆ 9 ರೂ. ಅಥವಾ ಶೇ. 10ರಷ್ಟು ಏರಿಕೆ ಮಾಡಬೇಕು ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ.

ಸಣ್ಣ ಅಬಕಾರಿ ಸುಂಕ ಕಡಿತ (ಪ್ರತಿ ಲೀಟರ್‌ಗೆ ರೂ 1-3) ಹಾಗೂ ಚಿಲ್ಲರೆ ಬೆಲೆಯಲ್ಲಿ ಸ್ವಲ್ಪ ಏರಿಕೆಯ (ಲೀಟರ್‌ಗೆ ರೂ 5-8) ಸಂಯೋಜನೆಯನ್ನು ನಾವು ನಿರೀಕ್ಷಿಸುತ್ತಿದ್ದು ಈ ಮೂಲಕ ಕಚ್ಚಾ ತೈಲ ದರ ಬ್ಯಾರೆಲ್‌ಗೆ 100 ಡಾಲರ್‌ ಮುಟ್ಟಿರುವುದನ್ನು ಸರಿ ಹೊಂದಿಸಬಹುದು ಎಂದು ವರದಿ ಲೆಕ್ಕಾಚಾರ ಹಾಕಿದೆ. ಆದರೆ ಸರಕಾರ ಅಬಕಾರಿ ಸುಂಕ ಕಡಿತ ಮಾಡಬಹುದೇ ಎಂಬ ಪ್ರಶ್ನೆ ಕಾಡುತ್ತಿದೆ.

English summary
Petrol and diesel price hikes are likely to come next week to bridge the gap of Rs 9 per litre created by the increase of USD 100 per barrel in international oil prices, PTI reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X