ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಐದು ದಿನಗಳ ಕಾಲ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

|
Google Oneindia Kannada News

ಬೆಂಗಳೂರು, ಜನವರಿ 14: ಸತತ ಐದು ದಿನಗಳಿಂದ ಪೆಟ್ರೋಲ್​, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಭಾನುವಾರದಂದು ಪೆಟ್ರೋಲ್​ಬೆಲೆಯಲ್ಲಿ 48-60 ಪೈಸೆ ಮತ್ತು ಡೀಸೆಲ್​ಮೇಲಿನ ದರ 60-75 ಪೈಸೆ ಏರಿಕೆಯಾಗಿತ್ತು.

ಸೋಮವಾರ ಬೆಲೆ ಏರಿಕೆಯಲ್ಲಿ ಇದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಪೆಟ್ರೋಲ್ 38 ಪೈಸೆ ಹಾಗೂ ಡೀಸೆಲ್ 49 ರಿಂದ 52 ಪೈಸೆ ಏರಿಕೆ ಕಂಡಿದೆ.

ನವದೆಹಲಿಯಲ್ಲಿ 49 ಪೈಸೆ ಏರಿಕೆ ನಂತರ ಭಾನುವಾರದಂದು ಪೆಟ್ರೋಲ್​ದರ 69.75 ರೂ. ಮತ್ತು ಡೀಸೆಲ್​ 63.69 ರೂ.ಗೆ ಮಾರಾಟವಾಗಿತ್ತು. ಸೋಮವಾರದಂದು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 70.13ರು ಗೆ ಏರಿಕೆ. ಕರ್ನಾಟಕದಲ್ಲಿ ಜನವರಿ 01ರಿಂದ ಸೆಸ್ ಏರಿಕೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 1.30 ರೂ.ನಷ್ಟು ಹೆಚ್ಚಳವಾಗಿದೆ.

ಒಪೆಕ್ ರಾಷ್ಟ್ರಗಳಿಂದ ಇಂಧನ ಪೂರೈಕೆ ಮೇಲೆ ಕಡಿವಾಣಬಿದ್ದಿದ್ದು, ಕಚ್ಚಾತೈಲ ಬೆಲೆ 70 ಸೆಂಟುಗಳಷ್ಟು ಇಳಿಕೆ ಕಂಡಿದ್ದು, ಪ್ರತಿ ಬ್ಯಾರೆಲ್ ಗೆ 59.78 ಯುಎಸ್ ಡಾಲರ್ ನಷ್ಟಿದೆ.

ಪ್ರತಿ ಬ್ಯಾರೆಲ್ ಗೆ 80 ಯುಎಸ್ ಡಾಲರ್ ಗೇರಿದ್ದ ಕಚ್ಚಾತೈಲ ಬೆಲೆ ಇತ್ತೀಚಿನ ತಿಂಗಳುಗಳಲ್ಲಿ ಇಳಿಕೆಯಾಗಿದೆ. ಕಚ್ಚಾ ತೈಲ ಬೆಲೆ ಶೇಕಡಾ 40ರಷ್ಟು ಇಳಿಕೆ ಕಂಡಿದ್ದರಿಂದ ಡಿಸೇಲ್, ಪೆಟ್ರೋಲ್ ಬೆಲೆಯೂ ಶೇಕಡಾ 20ರಷ್ಟು ಇಳಿಕೆಯಾಗಿದೆ. ಶೇ 80ರಷ್ಟು ಇಂಧನವನ್ನು ಭಾರತವು ಆಮದು ಮಾಡಿಕೊಳ್ಳುತ್ತಿದೆ.

Petrol, diesel price hiked for 5th consecutive day
English summary
Petrol and diesel prices were hiked significantly for the 4th consecutive day on Sunday. While petrol price witnessed a hike of 48-60 paise, diesel price went up 60-75 paise in major cities across the country
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X