ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ನಾಲ್ಕು ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

|
Google Oneindia Kannada News

ಬೆಂಗಳೂರು, ಜನವರಿ 13: ಸತತ ನಾಲ್ಕು ದಿನಗಳಿಂದ ಪೆಟ್ರೋಲ್​, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಪೆಟ್ರೋಲ್​ಬೆಲೆಯಲ್ಲಿ 48-60 ಪೈಸೆ ಮತ್ತು ಡೀಸೆಲ್​ಮೇಲಿನ ದರ 60-75 ಪೈಸೆ ಏರಿಕೆಯಾಗಿದೆ.

ನವದೆಹಲಿಯಲ್ಲಿ 49 ಪೈಸೆ ಏರಿಕೆ ನಂತರ ಭಾನುವಾರದಂದು ಪೆಟ್ರೋಲ್​ದರ 69.75 ರೂ. ಮತ್ತು ಡೀಸೆಲ್​ 63.69 ರೂ.ಗೆ ಮಾರಾಟಗೊಳ್ಳುತ್ತಿದೆ.

20 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ20 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್, ಡೀಸೆಲ್​ ಕ್ರಮವಾಗಿ 48 ಪೈಸೆ ಮತ್ತು 62 ಪೈಸೆ ಏರಿಕೆಯಾಗಿ 75.39 ರೂ ಮತ್ತು 66.66 ರೂ.ಗೆ ಮಾರಾಟವಾಗುತ್ತಿದೆ.

Petrol, diesel price hiked for 4th consecutive day

ಬೆಂಗಳೂರಿನಲ್ಲಿಯೂ ದರ ಏರಿಕೆಯಾಗಿದ್ದು ಪೆಟ್ರೋಲ್​ ದರ 51 ಪೈಸೆ ಏರಿಕೆ ನಂತರ 72.04 ರೂ. ಆಗಿದ್ದು, ಡೀಸೆಲ್​ ಬೆಲೆ 61 ಪೈಸೆ ಏರಿಕೆ ನಂತರ 65.78 ರೂ.ಗೆ ಮಾರಾಟವಾಗುತ್ತಿದೆ. ಇತರ ಮೆಟ್ರೋ ಸಿಟಿಗಳಾದ ಚೆನ್ನೈ ಮತ್ತು ಕೋಲ್ಕತದಲ್ಲಿ 71.97 ರೂ. ಮತ್ತು 72.40 ರೂ.ಗೆ ಮಾರಾಟಗೊಳ್ಳುತ್ತಿದೆ.

ಒಪೆಕ್ ರಾಷ್ಟ್ರಗಳಿಂದ ಇಂಧನ ಪೂರೈಕೆ ಮೇಲೆ ಕಡಿವಾಣ ಬಿದ್ದಿದ್ದು, ಕಚ್ಚಾತೈಲ ಬೆಲೆ 39 ಸೆಂಟುಗಳಷ್ಟು ಇಳಿಕೆ ಕಂಡಿದ್ದು, ಪ್ರತಿ ಬ್ಯಾರೆಲ್ ಗೆ 55.56 ಯುಎಸ್ ಡಾಲರ್ ನಷ್ಟಿದೆ.

ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಪ್ರತಿ ಬ್ಯಾರೆಲ್ ಬೆಲೆ 86 ಯುಎಸ್ ಡಾಲರ್ ಗೆ ಏರಿಕೆಯಾಗಿತ್ತು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 40ರಷ್ಟು ಇಳಿಕೆ ಕಂಡಿದ್ದರಿಂದ ಡಿಸೇಲ್, ಪೆಟ್ರೋಲ್ ಬೆಲೆಯೂ ಶೇಕಡಾ 20ರಷ್ಟು ಇಳಿಕೆಯಾಗಿದೆ. ಶೇ 80ರಷ್ಟು ಇಂಧನವನ್ನು ಭಾರತವು ಆಮದು ಮಾಡಿಕೊಳ್ಳುತ್ತಿದೆ.

English summary
Petrol and diesel prices were hiked significantly for the 4th consecutive day on Sunday. While petrol price witnessed a hike of 48-60 paise, diesel price went up 60-75 paise in major cities across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X