ಸತತ ನಾಲ್ಕು ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಬೆಂಗಳೂರು, ಜನವರಿ 13: ಸತತ ನಾಲ್ಕು ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಪೆಟ್ರೋಲ್ಬೆಲೆಯಲ್ಲಿ 48-60 ಪೈಸೆ ಮತ್ತು ಡೀಸೆಲ್ಮೇಲಿನ ದರ 60-75 ಪೈಸೆ ಏರಿಕೆಯಾಗಿದೆ.
ನವದೆಹಲಿಯಲ್ಲಿ 49 ಪೈಸೆ ಏರಿಕೆ ನಂತರ ಭಾನುವಾರದಂದು ಪೆಟ್ರೋಲ್ದರ 69.75 ರೂ. ಮತ್ತು ಡೀಸೆಲ್ 63.69 ರೂ.ಗೆ ಮಾರಾಟಗೊಳ್ಳುತ್ತಿದೆ.
20 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ
ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್, ಡೀಸೆಲ್ ಕ್ರಮವಾಗಿ 48 ಪೈಸೆ ಮತ್ತು 62 ಪೈಸೆ ಏರಿಕೆಯಾಗಿ 75.39 ರೂ ಮತ್ತು 66.66 ರೂ.ಗೆ ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿಯೂ ದರ ಏರಿಕೆಯಾಗಿದ್ದು ಪೆಟ್ರೋಲ್ ದರ 51 ಪೈಸೆ ಏರಿಕೆ ನಂತರ 72.04 ರೂ. ಆಗಿದ್ದು, ಡೀಸೆಲ್ ಬೆಲೆ 61 ಪೈಸೆ ಏರಿಕೆ ನಂತರ 65.78 ರೂ.ಗೆ ಮಾರಾಟವಾಗುತ್ತಿದೆ. ಇತರ ಮೆಟ್ರೋ ಸಿಟಿಗಳಾದ ಚೆನ್ನೈ ಮತ್ತು ಕೋಲ್ಕತದಲ್ಲಿ 71.97 ರೂ. ಮತ್ತು 72.40 ರೂ.ಗೆ ಮಾರಾಟಗೊಳ್ಳುತ್ತಿದೆ.
ಒಪೆಕ್ ರಾಷ್ಟ್ರಗಳಿಂದ ಇಂಧನ ಪೂರೈಕೆ ಮೇಲೆ ಕಡಿವಾಣ ಬಿದ್ದಿದ್ದು, ಕಚ್ಚಾತೈಲ ಬೆಲೆ 39 ಸೆಂಟುಗಳಷ್ಟು ಇಳಿಕೆ ಕಂಡಿದ್ದು, ಪ್ರತಿ ಬ್ಯಾರೆಲ್ ಗೆ 55.56 ಯುಎಸ್ ಡಾಲರ್ ನಷ್ಟಿದೆ.
ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಪ್ರತಿ ಬ್ಯಾರೆಲ್ ಬೆಲೆ 86 ಯುಎಸ್ ಡಾಲರ್ ಗೆ ಏರಿಕೆಯಾಗಿತ್ತು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 40ರಷ್ಟು ಇಳಿಕೆ ಕಂಡಿದ್ದರಿಂದ ಡಿಸೇಲ್, ಪೆಟ್ರೋಲ್ ಬೆಲೆಯೂ ಶೇಕಡಾ 20ರಷ್ಟು ಇಳಿಕೆಯಾಗಿದೆ. ಶೇ 80ರಷ್ಟು ಇಂಧನವನ್ನು ಭಾರತವು ಆಮದು ಮಾಡಿಕೊಳ್ಳುತ್ತಿದೆ.