ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

|
Google Oneindia Kannada News

Recommended Video

20 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ..! | Oneindia Kannada

ನವದೆಹಲಿ, ಜನವರಿ 7: ಸತತ ಬೆಲೆ ಏರಿಕೆಯಿಂದ ಗ್ರಾಹಕರು ತತ್ತರಿಸುವಂತೆ ಮಾಡಿದ್ದ ತೈಲ ಬೆಲೆ ಕಳೆದ ವರ್ಷದ ಅಂತ್ಯದಿಂದ ಜನಸಾಮಾನ್ಯರಿಗೆ ಕೊಂಚ ನಿರಾಳ ಉಂಟುಮಾಡಿತ್ತು. ಆದರೆ ಸತತ 20 ದಿನಗಳ ಇಳಿಕೆ ಬಳಿಕ ಸೋಮವಾರ ಮತ್ತೆ ಬೆಲೆ ಹೆಚ್ಚಳವಾಗಿದೆ.

2019ರಲ್ಲಿ ಇದೇ ಮೊದಲ ಬಾರಿಗೆ ತೈಲ ದುಬಾರಿಯಾಗಿದೆ. ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 21 ಪೈಸೆ ಮತ್ತು ಡೀಸೆಲ್‌ಗೆ 8 ಪೈಸೆ ಹೆಚ್ಚಳ ಕಂಡಿದೆ.

ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ಭಾನುವಾರ 68.29ರಷ್ಟಿದ್ದ ಪೆಟ್ರೋಲ್ ಬೆಲೆ ಸೋಮವಾರ ರೂ. 68.50ಕ್ಕೆ ತಲುಪಿದೆ. ಡೀಸೆಲ್ ದರ 62.16ರಿಂದ 62.24ಕ್ಕೆ ಮುಟ್ಟಿದೆ.

Petrol diesel fuel price hiked after 20 days

ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ಕ್ರಮವಾಗಿ 74.16 ಮತ್ತು 65.12 ರೂ.ನಂತೆ ಮಾರಾಟವಾಗುತ್ತಿವೆ.

ಪೆಟ್ರೋಲ್, ಡೀಸೆಲ್ ಸೆಸ್ ಹೆಚ್ಚಳ ಸಮರ್ಥಿಸಿಕೊಂಡ ಕುಮಾರಸ್ವಾಮಿಪೆಟ್ರೋಲ್, ಡೀಸೆಲ್ ಸೆಸ್ ಹೆಚ್ಚಳ ಸಮರ್ಥಿಸಿಕೊಂಡ ಕುಮಾರಸ್ವಾಮಿ

ಕರ್ನಾಟಕ ಸರ್ಕಾರವು ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 32 ಹಾಗೂ ಶೇ 21ಕ್ಕೆ ಹೆಚ್ಚಿಸಿತ್ತು.

ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ: ರಾಜ್ಯದಲ್ಲಿ ತೈಲ ದುಬಾರಿಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ: ರಾಜ್ಯದಲ್ಲಿ ತೈಲ ದುಬಾರಿ

ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 21 ಪೈಸೆ ಹಾಗೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 9 ಪೈಸೆಯಷ್ಟು ಹೆಚ್ಚಳವಾಗಿದೆ. ಪೆಟ್ರೋಲ್ 70.74 ರೂ. ಮತ್ತು ಡೀಸೆಲ್ 64.28 ರೂ.ನಂತೆ ಮಾರಾಟವಾಗುತ್ತಿದೆ.

English summary
The rates of Fuel went up for the first time in 20 days by 21 paise for petrol and 8 paise for diesel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X