ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ದುಬಾರಿಯಾಗಬಹುದು ಪೆಟ್ರೋಲ್ ಮತ್ತು ಡೀಸೆಲ್!

|
Google Oneindia Kannada News

ಮುಂಬೈ, ಮೇ 18: ಪೆಟ್ರೋಲ್ ಮತ್ತು ಡೀಸೆಲ್ ದರವು ಪ್ರತಿ ಲೀಟರ್‌ಗೆ 4 ರೂಪಾಯಿಯಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ಸರ್ಕಾರಿ ಸ್ವಾಮ್ಯದ ತೈಲ ವರ್ತಕರು ಕರ್ನಾಟಕ ಚುನಾವಣಾಪೂರ್ವ ದರದ ಮಟ್ಟಕ್ಕೆ ಮರಳಿದರೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತೆ ಹೆಚ್ಚಬಹುದು ಎಂದು ಮಧ್ಯವರ್ತಿ ಸಂಸ್ಥೆಗಳು ತಿಳಿಸಿವೆ.

ಚುನಾವಣೆ ಮುಗಿದ ಬೆನ್ನಲ್ಲೇ ಮತ್ತೆ ಮೇಲೇರಿತು ಇಂಧನ ಬೆಲೆಚುನಾವಣೆ ಮುಗಿದ ಬೆನ್ನಲ್ಲೇ ಮತ್ತೆ ಮೇಲೇರಿತು ಇಂಧನ ಬೆಲೆ

ಕರ್ನಾಟಕದಲ್ಲಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಸೋಮವಾರ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರದ ದೈನಂದಿನ ಪರಿಷ್ಕರಣೆಗೆ ನೀಡಿದ್ದ 19 ದಿನಗಳ ವಿರಾಮವನ್ನು ಅಂತ್ಯಗೊಳಿಸಿದ್ದವು. ಎಂದಿನಂತೆ ತೈಲ ಬೆಲೆ ನಿತ್ಯವೂ ಬದಲಾಗುವ ಪ್ರಕ್ರಿಯೆ ಪುನರಾರಂಭವಾಗಿತ್ತು.

petrol and diesel prices likely to increase again

ಅಲ್ಲಿಂದ ಇಲ್ಲಿಯವರೆಗೂ ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ 69 ಪೈಸೆಯಷ್ಟು ಹೆಚ್ಚಳವಾಗಿದೆ. ದೆಹಲಿಯಲ್ಲಿ ಶುಕ್ರವಾರವೂ 22 ಪೈಸೆ ಹೆಚ್ಚಳ ಕಂಡಿದೆ. ಒಟ್ಟಾರೆ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 75.32ಕ್ಕೆ ತಲುಪಿದ್ದು, ಹೆಚ್ಚೂ ಕಡಿಮೆ ಐದು ವರ್ಷಗಳಲ್ಲಿಯೇ ಅತ್ಯಧಿಕ ದರಕ್ಕೆ ತಲುಪಿದೆ.

ಡೀಸೆಲ್ ದರವು ಲೀಟರ್‌ಗೆ 86 ಪೈಸೆಯಷ್ಟು ಏರಿಕೆಯಾಗಿದೆ. ದೆಹಲಿಯಲ್ಲಿ ಶುಕ್ರವಾರ 22 ಪೈಸೆಯಷ್ಟು ಬೆಲೆ ತುಟ್ಟಿಯಾಗಿದ್ದು, 66.79ಕ್ಕೆ ಏರಿದ್ದು, ಇದು ಗರಿಷ್ಠ ಮಟ್ಟದ್ದಾಗಿದೆ.

English summary
petrol and diesel prices likely to increase by 4 rupees per litre if state-owned retails are to return to pre-Karnataka poll hiatus margin levels
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X