ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತವಾಗಿ 5ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಅಗ್ಗ

|
Google Oneindia Kannada News

ನವದೆಹಲಿ, ಅಕ್ಟೋಬರ್ 22 : ವಾಹನ ಸವಾರರಿಗೆ ದಸರಾ ಹಬ್ಬದ ನಂತರ ನಿರಂತರವಾಗಿ ನೆಮ್ಮದಿಯ ಸುದ್ದಿ ಸಿಗುತ್ತಿದೆ. ಸತತ 5ನೇ ದಿನವೂ ಇಂಧನ ದರದಲ್ಲಿ ಇಳಿಕೆ ಮಾಡಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸೋಮವಾರ ಬೆಳಗ್ಗೆ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿವೆ.

ಸೋಮವಾರದಂದು (ಅಕ್ಟೋಬರ್ 22) ದೇಶದಾದ್ಯಂತ ಪ್ರತಿ ಲೀಟರ್‌ ಪೆಟ್ರೋಲ್‌ಗೆ 30 ಪೈಸೆ ಮತ್ತು ಡೀಸೆಲ್‌ ಬೆಲೆಯಲ್ಲಿ 27 ಪೈಸೆಯಷ್ಟು ಕಡಿಮೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಒಟ್ಟಾರೆ ಪೆಟ್ರೋಲ್ 1.36 ರುಪಾಯಿ ಹಾಗೂ ಡೀಸೆಲ್ ಬೆಲೆ 67 ಪೈಸೆ ಇಳಿಕೆಯಾಗಿದೆ.

ಇದೇ ಮೊದಲ ಬಾರಿ, ಪೆಟ್ರೋಲ್‌ಗಿಂತಲೂ ಡೀಸೆಲ್‌ ದುಬಾರಿ!ಇದೇ ಮೊದಲ ಬಾರಿ, ಪೆಟ್ರೋಲ್‌ಗಿಂತಲೂ ಡೀಸೆಲ್‌ ದುಬಾರಿ!

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಬೆಲೆ ಪೆಟ್ರೋಲ್​ದರ 82.08 ಪ್ರತಿ ಲೀಟರ್ (ನಿನ್ನೆ ದರ 82.44 ರೂ). ಮತ್ತು ಡೀಸೆಲ್​ ದರ 75.31 ರು ಪ್ರತಿ ಲೀಟರ್(ನಿನ್ನೆದರ 75.63 ರೂ)ಗಳಷ್ಟಿದೆ. ಭಾನುವಾರದಂದು ಪೆಟ್ರೋಲ್‌ ಪ್ರತಿ ಲೀಟರ್‌ಗೆ 27 ಪೈಸೆ ಮತ್ತು ಡೀಸೆಲ್‌17 ಪೈಸೆ ಇಳಿಕೆ ಕಂಡಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದರಿಂದ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗಿದ್ದರಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಏರಿಕೆಯಾಗಿತ್ತು. ಈಗ ಕಚ್ಚಾತೈಲ ಬೆಲೆ ಇಳಿಕೆಯಾಗಿದೆ.

ಸತತವಾಗಿ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ದರ ಇಳಿಕೆಸತತವಾಗಿ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ದರ ಇಳಿಕೆ

ಜನಸಾಮಾನ್ಯರ ಮೇಲೆ ತೀವ್ರ ಆರ್ಥಿಕ ಹೊರೆಯಾಗುತ್ತಿದ್ದು, ವಿರೋಧಪಕ್ಷಗಳ ಪ್ರತಿಭಟನೆಯ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಅಕ್ಟೋಬರ್ 4ರಂದು 2.50 ರೂ. ಇಳಿಕೆ ಮಾಡಿತ್ತು. ಆದರೆ, ಕಡಿಮೆ ಮಾಡಿದ ಮೊತ್ತವನ್ನು ಮೀರಿ ಹತ್ತೇ ದಿನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿತ್ತು. ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಷ್ಟು?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಷ್ಟು?

ದೆಹಲಿಯಲ್ಲಿ ಸೋಮವಾರದಂದು ಪೆಟ್ರೋಲ್ 30 ಪೈಸೆ ಹಾಗೂ ಡಿಸೇಲ್ 27 ಪೈಸೆ ದರ ಕಡಿತವಾಗಿದೆ. ಈ ಮೂಲಕ ಸತತ ಐದನೇ ದಿನವೂ ಈ ಬೆಲೆ ಇಳಿಕೆಯಾಗಿದೆ. ಸೋಮವಾರದಂದು ದೆಹಲಿಯಲ್ಲಿ 81.44(ನಿನ್ನೆ 81.74ರು) ಹಾಗೂ ಡಿಸೇಲ್ 74.92(ಡೀಸೆಲ್ ಬೆಲೆ ಪ್ರತಿ ಲೀಟರ್ 75.19 ರು) ನಷ್ಟಿದೆ.

ವಾಣಿಜ್ಯ ನಗರಿ ಮುಂಬೈ

ವಾಣಿಜ್ಯ ನಗರಿ ಮುಂಬೈ

ಮುಂಬೈ ನಗರದಲ್ಲಿ ಸೋಮವಾರದಂದು ಪೆಟ್ರೋಲ್ ದರ ಪ್ರತಿ ಲೀಟರ್ ಪೆಟ್ರೋಲ್ 86.91 ರು ನಷ್ಟಿದ್ದರೆ, ಡೀಸೆಲ್ ಬೆಲೆ 78.54ರುನಷ್ಟಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಭಾನುವಾರದಂದು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 25 ಪೈಸೆ ಇಳಿಕೆಯಾಗಿ 87.21 ರು ನಷ್ಟಿತ್ತು. ಡೀಸೆಲ್ ಬೆಲೆ 78.82 ರೂ.ಗಳಷ್ಟಿತ್ತು.

ಹಬ್ಬದ ಸಂಭ್ರಮಕ್ಕೆ ತೈಲಬೆಲೆ ಉಡುಗೊರೆ: ಸತತ ಎರಡನೆಯ ದಿನವೂ ದರ ಇಳಿಕೆಹಬ್ಬದ ಸಂಭ್ರಮಕ್ಕೆ ತೈಲಬೆಲೆ ಉಡುಗೊರೆ: ಸತತ ಎರಡನೆಯ ದಿನವೂ ದರ ಇಳಿಕೆ

ಕೋಲ್ಕತ್ತಾ ಹಾಗೂ ಚೆನೈ ನಗರಗಳಲ್ಲಿ

ಕೋಲ್ಕತ್ತಾ ಹಾಗೂ ಚೆನೈ ನಗರಗಳಲ್ಲಿ

ಕೋಲ್ಕತಾ ನಗರದಲ್ಲಿ ಸೋಮವಾರದಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 83.29ರು ಹಾಗೂ ಡೀಸೆಲ್ ಬೆಲೆ 83.69ರು ನಷ್ಟಿದೆ.

ಭಾನುವಾರದಂದು ಪೆಟ್ರೋಲ್ ಬೆಲೆ 83.58 ರೂ. ಇದ್ದರೆ, ಡೀಸೆಲ್ ದರ 77.04 ರೂ.ಗೆ ಮಾರಾಟ ಆಗುತ್ತಿತ್ತು.

ಚೆನ್ನೈನಲ್ಲಿ ಸೋಮವಾರದಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 84.64 ರು ಹಾಗೂ ಡೀಸೆಲ್ ಬೆಲೆ 84.96ರು ನಷ್ಟಿದೆ. ಭಾನುವಾರದಂದು ಪೆಟ್ರೋಲ್ ಬೆಲೆ 84.96 ರು ಹಾಗೂ ಡೀಸೆಲ್ ಬೆಲೆ 79.51ರು ನಷ್ಟಿತ್ತು.

ಹೈದರಾಬಾದಿನಲ್ಲಿ ಬೆಲೆ

ಹೈದರಾಬಾದಿನಲ್ಲಿ ಬೆಲೆ

ಸೋಮವಾರದಂದು ಬೆಲೆ ಹೈದರಾಬಾದಿನಲ್ಲಿ ಪ್ರತಿ ಲೀಟರ್ ಬೆಲೆ 86.34 ರು ನಷ್ಟಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 86.66 ರು ಗೇರಿದೆ.

ಭಾನುವಾರದಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 86.66 ರು ನಷ್ಟಿದೆ. ಪ್ರತಿ ಲೀಟರ್ ಡೀಸೆಲ್ ಪ್ರತಿ ಲೀಟರ್ 81.79 ರು ನಷ್ಟಿದೆ.

English summary
Fuel prices have been slashed in India for the Fifth consecutive day. As of Monday October 22 Petrol prices were cut by 30 paise while the diesel rates were reduced by 37 paise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X