ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹದಿನೈದು ದಿನಗಳ ನಂತರ ಮತ್ತೆ ತಗ್ಗಿದ ಪೆಟ್ರೋಲ್, ಡೀಸೆಲ್ ಬೆಲೆ

|
Google Oneindia Kannada News

ನವದೆಹಲಿ, ಏಪ್ರಿಲ್ 15: ದೇಶಾದ್ಯಂತ ಕಳೆದ ಹದಿನೈದು ದಿನಗಳಿಂದಲೂ ಸ್ಥಿರವಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಗುರುವಾರ ಕೊಂಚ ತಗ್ಗಿದೆ. ಮಾರ್ಚ್ ತಿಂಗಳಿನಲ್ಲಿ ಕೊನೆಯದಾಗಿ ತೈಲ ಬೆಲೆಯನ್ನು ತಗ್ಗಿಸಿದ್ದು, ಇದೀಗ ಮತ್ತೆ ಬೆಲೆ ಕಡಿಮೆ ಮಾಡಲಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರಿಗೆ 16 ಪೈಸೆ ಇಳಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲಿ 14 ಪೈಸೆಯನ್ನು ತಗ್ಗಿಸಲಾಗಿದೆ.

ಈ ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆಯಾಗಿರುವುದಾಗಿ ತಿಳಿದುಬಂದಿದೆ. ಮಾರ್ಚ್ 30ರಂದು ಕೊನೆಯ ಬಾರಿ ತೈಲ ಬೆಲೆಯನ್ನು ಪರಿಷ್ಕರಿಸಲಾಗಿತ್ತು. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ? ಮುಂದೆ ಓದಿ...

ಸತತ 14ದಿನಗಳಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ಬದಲಾವಣೆಯಿಲ್ಲ ಸತತ 14ದಿನಗಳಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ಬದಲಾವಣೆಯಿಲ್ಲ

 ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

ನಗರ ಪೆಟ್ರೋಲ್ ಡೀಸೆಲ್
ದೆಹಲಿ: 90.40 ರೂ 80.73 ರೂ.
ಕೊಲ್ಕತ್ತಾ: 90.62 ರೂ 83.61 ರೂ.
ಮುಂಬೈ: 96.83 ರೂ 87.81 ರೂ.
ಬೆಂಗಳೂರು: 93.43 ರೂ 85.60 ರೂ.
ಹೈದರಾಬಾದ್‌: 93.99 ರೂ 88.05 ರೂ.
ಚೆನ್ನೈ: 92.43 ರೂ 85.75 ರೂ.

 ಫೆಬ್ರವರಿಯಲ್ಲಿ ಶತಕ ಮುಟ್ಟಿದ್ದ ತೈಲ ಬೆಲೆ

ಫೆಬ್ರವರಿಯಲ್ಲಿ ಶತಕ ಮುಟ್ಟಿದ್ದ ತೈಲ ಬೆಲೆ

ಫೆಬ್ರವರಿ ತಿಂಗಳಿನಲ್ಲಿ ಮೊದಲ ಬಾರಿ ಪೆಟ್ರೋಲ್ ಬೆಲೆ ದಾಖಲೆಯ ಮಟ್ಟ ತಲುಪಿತ್ತು. ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಲೀಟರಿಗೆ ನೂರು ರೂವರೆಗೂ ತಲುಪಿತ್ತು. ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 100.89 ರೂ ಇದ್ದರೆ, ಡೀಸೆಲ್‌ಗೆ 92.99 ರೂ ಇತ್ತು. ಮಧ್ಯಪ್ರದೇಶದಲ್ಲಿ ಪೆಟ್ರೋಲಿಗೆ 100.79 ರೂ ಇದ್ದರೆ, ಡೀಸೆಲ್ ಬೆಲೆ 91.18 ರೂ ಇತ್ತು. ಇದೇ ಮೊದಲ ಬಾರಿ ದೇಶದಲ್ಲಿ ತೈಲ ಬೆಲೆ ದಾಖಲೆಯ ಮಟ್ಟ ತಲುಪಿತ್ತು.

 ಫೆಬ್ರವರಿ ಕೊನೆಯಲ್ಲಿ ಬೆಲೆ ಇಳಿಕೆ

ಫೆಬ್ರವರಿ ಕೊನೆಯಲ್ಲಿ ಬೆಲೆ ಇಳಿಕೆ

ಫೆಬ್ರವರಿ ತಿಂಗಳ ಕೊನೆಯಲ್ಲಿ ತೈಲ ಬೆಲೆಯಲ್ಲಿ ಕೊಂಚ ಇಳಿಕೆಯಾಯಿತು. ಫೆಬ್ರವರಿ 27ರಂದು ಬೆಲೆ ತಗ್ಗಿಸಿದ್ದು, ಆನಂತರ ಮಾರ್ಚ್ ತಿಂಗಳಿನಲ್ಲಿ ನಾಲ್ಕು ಬಾರಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ತಗ್ಗಿಸಲಾಯಿತು. ಪಂಚ ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿದ್ದ ಕಾರಣ ತೈಲ ಬೆಲೆ ಇಳಿಕೆಯಾಗಿದೆ ಎನ್ನಲಾಗಿತ್ತು.

 ಅಂತಾರಾಷ್ಟ್ರೀಯ ಮಾರುಕಟ್ಟೆ ಕಚ್ಚಾತೈಲ ಬೆಲೆ ಪರಿಣಾಮ

ಅಂತಾರಾಷ್ಟ್ರೀಯ ಮಾರುಕಟ್ಟೆ ಕಚ್ಚಾತೈಲ ಬೆಲೆ ಪರಿಣಾಮ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 63.69 ಯುಎಸ್ ಡಾಲರ್( 1 USD=75.41ರು) ಪ್ರತಿ ಬ್ಯಾರೆಲ್‌ನಷ್ಟಿದೆ. ಒಪೆಕ್ ರಾಷ್ಟ್ರಗಳು ತೈಲ ಪೂರೈಕೆಯಲ್ಲಿ ವ್ಯತ್ಯಯ ಮಾಡಿರುವುದರಿಂದ ಭಾರತದಂಥ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98ರು ಹಾಗೂ ಡೀಸೆಲ್ ಮೇಲೆ 31.80 ರು ನಷ್ಟಿದೆ.

English summary
After 15 days, petrol and diesel prices reduced across the country on Thursday, April 15, 2021,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X