ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಫಲಿತಾಂಶ ಬಳಿಕ ಪೆಟ್ರೋಲ್, ಡೀಸೆಲ್ ದರ ಏರಿಕೆ?

|
Google Oneindia Kannada News

ನವದೆಹಲಿ, ಮೇ 2: ಪ್ರಮುಖ ತೈಲ ಕಂಪನಿಗಳು ಚುನಾವಣೆ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಿಲ್ಲ. ಭಾನುವಾರ(ಮೇ 2)ದಂದು ಕೂಡಾ ದೆಹಲಿಯಲ್ಲಿ ಪೆಟ್ರೋಲ್ 90.40 ರು ಪ್ರತಿ ಲೀಟರ್, ಡೀಸೆಲ್ ಬೆಲೆ 80.73 ರು ಪ್ರತಿ ಲೀಟರ್ ನಂತೆ ಮಾರಾಟವಾಗುತ್ತಿದೆ. ಆದರೆ, ಐದು ರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬರುತ್ತಿದ್ದಂತೆ ಇಂಧನ ದರ ಪರಿಷ್ಕರಣೆ ಅನಿವಾರ್ಯ ಎಂದು ಪ್ರಮುಖ ತೈಲ ಕಂಪನಿಗಳು ತಿಳಿಸಿವೆ.

ಇತ್ತೀಚೆಗೆ ದೇಶದ ಪ್ರಮುಖ ನಗರಗಳಲ್ಲಿ ಸತತ 15 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸಲಾಗಿತ್ತು. ದೆಹಲಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರಿಗೆ 16 ಪೈಸೆ ಇಳಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲಿ 14 ಪೈಸೆಯನ್ನು ತಗ್ಗಿಸಲಾಗಿದೆ.

ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಸುಮಾರು 24 ದಿನಗಳ ಕಾಲ ತೈಲ ಬೆಲೆ ಏರಿಕೆಯನ್ನು ತಡೆ ಹಿಡಿಯಲಾಗಿತ್ತು. ಕಚ್ಚಾತೈಲ ಬೆಲೆ ಏರುಪೇರಾದರೂ ತೈಲ ಕಂಪನಿಗಳು ಇಂಧನ ಬೆಲೆ ಪರಿಷ್ಕರಿಸಿರಲಿಲ್ಲ. ಈಗ ಮಾರ್ಚ್ 27ರಿಂದ ಕೆಲ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮೇ 2ರಂದು ಫಲಿತಾಂಶ ಹೊರಬರಲಿದೆ.

ಫಲಿತಾಂಶ ಬಳಿಕ ಪೆಟ್ರೋಲ್, ಡೀಸೆಲ್ ದರ ಎಷ್ಟು ಏರಿಕೆ

ಫಲಿತಾಂಶ ಬಳಿಕ ಪೆಟ್ರೋಲ್, ಡೀಸೆಲ್ ದರ ಎಷ್ಟು ಏರಿಕೆ

ಚುನಾವಣೆ ಬಳಿಕ ಪೆಟ್ರೋಲ್ ಬೆಲೆ 2ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 3 ರು ಪ್ರತಿ ಲೀಟರ್ ಏರಿಕೆಯಾಗುವ ಸಾಧ್ಯತೆಯಿದೆ ಎಂಬ ಸುದ್ದಿ ಇತ್ತು. ಆದರೆ, ಈಗ ಮಾರುಕಟ್ಟೆಯಲ್ಲಿನ ನಷ್ಟ ಸರಿದೂಗಿಸಲು ಪೆಟ್ರೋಲ್ ದರ 5ರು ಪ್ರತಿ ಲೀಟರ್ ಹಾಗೂ ಡೀಸೆಲ್ 3 ರು ಪ್ರತಿ ಲೀಟರ್ ನಷ್ಟು ಏರಿಕೆ ಮಾಡುವುದು ಅನಿವಾರ್ಯ ಎಂದು ತೈಲ ಕಂಪನಿಗಳು ಹೇಳಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ದರ ಪರಿಷ್ಕರಣೆ ಮಾಡದಿರುವುದರಿಂದ ಪ್ರಮುಖ ತೈಲ ಸಂಸ್ಥೆಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ನಷ್ಟ ಅನುಭವಿಸಿವೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ 77 ಪೈಸೆ ಹಾಗೂ 74 ಪೈಸೆ ಪ್ರತಿ ಲೀಟರ್‌ಗೆ ಏರಿಕೆ ಕಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 66.76 ಯುಎಸ್ ಡಾಲರ್(1 USD=74.10ರು) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್ ಹಾಗೂ ಏಪ್ರಿಲ್ ತಿಂಗಳಲ್ಲಿ 66 ಡಾಲರ್ ನಷ್ಟಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98ರು ಹಾಗೂ ಡೀಸೆಲ್ ಮೇಲೆ 31.80 ರು ನಷ್ಟಿದೆ.

ಮಾರ್ಚ್ 2021ರಲ್ಲಿ ಇಂಧನ ಬಳಕೆ ಅತ್ಯಧಿಕ

ಮಾರ್ಚ್ 2021ರಲ್ಲಿ ಇಂಧನ ಬಳಕೆ ಅತ್ಯಧಿಕ

ಈ ನಡುವೆ ಮಾರ್ಚ್ 2021ರಲ್ಲಿ ಇಂಧನ ಬಳಕೆ ಅತ್ಯಧಿಕ ಎಂದು ಅಂಕಿ ಅಂಶ ತಿಳಿಸಿದೆ. ಡಿಸೆಂಬರ್ 2019ರ ನಂತರ ಭಾರಿ ಬೇಡಿಕೆ ಇದೀಗ ಕಂಡು ಬಂದಿದೆ. ಕಳೆದ ತಿಂಗಳು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಪೆಟ್ರೋಲ್ ಶೇ 27.4 ರಷ್ಟು ಅಧಿಕ ಮಾರಾಟ ಕಂಡು ಬಂದಿದೆ. ಇದೇ ವೇಳೆ ಡಿಸೇಲ್ ಬಳಕೆ ಶೇ 27.6ರಷ್ಟು ಏರಿಕೆಯಾಗಿದೆ. ಆದರೆ, ಏಪ್ರಿಲ್ ತಿಂಗಳಲ್ಲಿ ಇಂಧನ ಬಳಕೆ ಕುಸಿತವಾಗಿದೆ. ಹಲವು ರಾಜ್ಯಗಳಲ್ಲಿ ಕೋವಿಡ್ 19 ಕಾರಣ ಲಾಕ್ ಡೌನ್ ಇರುವುದರಿಂದ ವಹಿವಾಟು ತಗ್ಗಿದೆ. ಮಹಾರಾಷ್ಟ್ರ, ಛತ್ತೀಸ್ ಗಢ, ಉತ್ತರಪ್ರದೇಶ, ನವದೆಹಲಿಯಲ್ಲಿ ಕಂಪನಿಗಳು ಭಾರಿ ನಷ್ಟ ಅನುಭವಿಸಿದೆ ಎಂದು ತಿಳಿದು ಬಂದಿದೆ.

English summary
Petrol and Diesel price set to hike after Election Results . Petrol and Diesel price can rise by Rs 5/litre to support OMC marketing margins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X