ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹನ ಸವಾರರಿಗೆ ಮತ್ತಷ್ಟು ನೆಮ್ಮದಿ: ಪೆಟ್ರೋಲ್, ಡೀಸೆಲ್ ದರ ಇಳಿಕೆ

|
Google Oneindia Kannada News

ನವದೆಹಲಿ, ನವೆಂಬರ್ 2: ಹಲವು ತಿಂಗಳಿಂದ ನಿರಂತರ ಏರಿಕೆಯಾಗುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ, ಒಂದು ವಾರದಿಂದ ಸತತ ಇಳಿಕೆ ಕಾಣುತ್ತಿದೆ. ಬೆಲೆ ಏರಿಕೆಯಿಂದ ತತ್ತರಿಸಿದ್ದ ವಾಹನ ಸವಾರರಿಗೆ ದೀಪಾವಳಿ ಹಬ್ಬದ ವೇಳೆಗೆ ತುಸು ನೆಮ್ಮದಿಯ ಸುದ್ದಿ ಸಿಗುತ್ತಿದೆ.

ಶುಕ್ರವಾರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 19 ಮತ್ತು 14 ಪೈಸೆಗಳಷ್ಟು ಇಳಿಕೆಯಾಗಿದೆ.

ಸತತವಾಗಿ 11ನೇ ದಿನ ಇಂಧನ ದರ ಕುಸಿತ, ಪೆಟ್ರೋಲ್ ಬೆಲೆ ಎಷ್ಟು?ಸತತವಾಗಿ 11ನೇ ದಿನ ಇಂಧನ ದರ ಕುಸಿತ, ಪೆಟ್ರೋಲ್ ಬೆಲೆ ಎಷ್ಟು?

ರಾಜಧಾನಿಯಲ್ಲಿ ಪೆಟ್ರೋಲ್ ಲೀಟರ್‌ಗೆ 79.18 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 73.64 ರೂ.ನಂತೆ ಮಾರಾಟವಾಗುತ್ತಿದೆ.

petrol 19 paise and diesel price 14 paise down

ಮುಂಬೈನಲ್ಲಿ ಪೆಟ್ರೋಲ್ 18 ಪೈಸೆ ಮತ್ತು ಡೀಸೆಲ್ 14 ಪೈಸೆಗಳಷ್ಟು ತಗ್ಗಿದೆ. ವಾಣಿಜ್ಯ ನಗರಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 84.68 ರೂ. ಇದ್ದರೆ, ಡೀಸೆಲ್ ಬೆಲೆ 77.18 ರೂ. ಇದೆ.

 ಇದೇ ಮೊದಲ ಬಾರಿ, ಪೆಟ್ರೋಲ್‌ಗಿಂತಲೂ ಡೀಸೆಲ್‌ ದುಬಾರಿ! ಇದೇ ಮೊದಲ ಬಾರಿ, ಪೆಟ್ರೋಲ್‌ಗಿಂತಲೂ ಡೀಸೆಲ್‌ ದುಬಾರಿ!

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 79.88 ರೂ. ಇದೆ. ಡೀಸೆಲ್ 74.10 ರೂ.ಗೆ ಮಾರಾಟವಾಗುತ್ತಿದೆ.

ತೈಲ ದರದಲ್ಲಿ ಇಳಿಕೆ, ಗ್ರಾಹಕನ ಮೊಗದಲ್ಲಿ ಅಲ್ಪ ಚೇತರಿಕೆ ತೈಲ ದರದಲ್ಲಿ ಇಳಿಕೆ, ಗ್ರಾಹಕನ ಮೊಗದಲ್ಲಿ ಅಲ್ಪ ಚೇತರಿಕೆ

ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುವಂತಾಗಿತ್ತು. ಕಳೆದ ತಿಂಗಳು ಕೇಂದ್ರ ಸರ್ಕಾರ ಸುಂಕ ಕಡಿತದ ಮೂಲಕ 2.50 ರೂ.ನಷ್ಟು ಬೆಲೆ ಇಳಿಕೆ ಮಾಡಿತ್ತು. ಆದರೆ, ಕೆಲವೇ ದಿನಗಳಲ್ಲಿ ಅದನ್ನೂ ಮೀರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದ್ದವು.

English summary
Fuel prices witnessed a decrease as petrol price is cut by 19 paise and diesel 14 paise per ltr in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X